ಲೋಕದರ್ಶನ ವರದಿ
ಭಾಷೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ
ಧಾರವಾಡ 21: ಭಾಷೆ ಅಳಿದರೆ ಬದುಕೇದುಸ್ತರ. ಭಾಷೆ ನಮ್ಮ ಬದುಕು ಮಾತ್ರವಲ್ಲ. ಭಾಷೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯಎಂದು ಹೆರಿಗೆ ಹಾಗೂ ಸ್ತ್ರೀ ಆರೋಗ್ಯ ತಜ್ಞರಾದ ಡಾ. ಸಂಜೀವ ಕುಲಕರ್ಣಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಘದ ಸಂಸ್ಥಾಪಕರು ಹಾಗೂ ಸಂಸ್ಥಾಪನಾ ಕಾರ್ಯದರ್ಶಿ ರಾ.ಹ. ದೇಶಪಾಂಡೆಯವರ 164ನೇ ಜನ್ಮ ದಿನದ ಸ್ಮರಣೆಯಲ್ಲಿ ಆಯೋಜಿಸಲ್ಪಟ್ಟ ಉಪನ್ಯಾಸ ಕಾರ‌್ಯಕ್ರಮದಲ್ಲಿ ‘ಕನ್ನಡದ ಆಸ್ಮಿತೆ :ಅಂದು- ಇಂದು’ ವಿಷಯಕುರಿತು ಮಾತನಾಡಿದರು ಮುಂದುವರೆದು ಮಾತನಾಡಿದರು, 1956 ರಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಂದುಗೂಡಿಸಲು ಅನೇಕ ಮಹನೀಯರು ಹೋರಾಡಿದರು. ತತ್ಫಲವಾಗಿ ಮೈಸೂರು ರಾಜ್ಯ ಉದಯವಾಯಿತು. ಆದರೆಅದು ಸಮಗ್ರಕರ್ನಾಟಕ ಪರಿಕಲ್ಪನೆಯಾಗಿರಲಿಲ್ಲ. ಆ ವೇಳೆಯಲ್ಲಿ ಉತ್ತರಕರ್ನಾಟಕದ ಜಿಲ್ಲೆಗಳ ಬಹುತೇಕ ಸಂಘ ಸಂಸ್ಥೆಗಳು ಕರ್ನಾಟಕ ಎಂಬ ಹೆಸರಿನಿಂದ ಸಂಘ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು. ರಾ.ಹ. ದೇಶಪಾಂಡೆಯವರು ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರಲ್ಲಿಜಾಗೃತಿ ಮೂಡಿಸಿದರು.ಇಂದು ಕನ್ನಡ ಭಾಷೆ ಉಳಿಸಿಕೊಂಡು ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ. ಆಂಗ್ಲ ಭಾಷಾ ವ್ಯಾಮೋಹ, ಆಧುನಿಕ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಜಾಗತೀಕರಣದಿಂದ ಕನ್ನಡಕ್ಕೆ ನಿರಂತರ ಪೆಟ್ಟು ಬೀಳುತ್ತಿದೆ.ಇನ್ನು 20 ವರ್ಷಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡ ಮನೆ ಭಾಷೆಯಾಗಿ ಉಳಿಯಬಹುದೇ ವಿನಹ ರಾಜ್ಯ ಭಾಷೆ ಆಗಲು ಸಾಧ್ಯವಿಲ್ಲ. ಕನ್ನಡದ ಮನುಸ್ಸುಗಳುಳ್ಳ ಒಂದುಜನಾಂಗ ಸೃಷ್ಟಿ ಆಗಬೇಕಾಗಿದೆ.ಒಂದು ಸಂಸ್ಕೃತಿಯನ್ನು ಭಾಷೆಯಆಧಾರದ ಮೇಲೆ ಗುರುತಿಸಲಾಗುತ್ತಿದೆ.ಭಾಷೆ ವಿಷಯದಲ್ಲಿ ನಾವು ಅಭಿಮಾನ ಶೂನ್ಯರಾಗದೇ ಕನ್ನಡದ ಅಸ್ಮಿತೆ ಉಳಿಸಬೇಕಿದೆ ಎಂದು ಹೇಳಿದರು. ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ರಾ.ಹ. ದೇಶಪಾಂಡೆಅವರ ಪುತ್ಥಳಿಗೆ ಮಾಲಾರೆ್ಣ ಮಾಡಿಗೌರವ ಸಲ್ಲಿಸಲಾಯಿತು. ಶಂಕರ ಹಲಗತ್ತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ವೀರಣ್ಣಒಡ್ಡೀನ, ಡಾ.ಮಹೇಶ ಧ. ಹೊರಕೇರಿ, ಡಾ. ಎಚ್. ವಿ. ಬೆಳಗಲಿ, ಶ್ರೀನಿವಾಸ ವಾಡಪ್ಪಿ, ಎಂ.ಎಂ.ಚಿಕ್ಕಮಠ ಸೇರಿದಂತೆ ಮುಂತಾದವರಿದ್ದರು.