ಕೊಪ್ಪಳ: ನವೆಂಬರ್ ಎರಡನೇ ವಾರದಿಂದ ಭಾರತೀಯ ಮಕ್ಕಳ ಚಲನಚಿತ್ರ ಸೊಸೈಟಿಯಿಂದ ನಡೆಯುವ ಮಕ್ಕಳ ಚಲನಚಿತ್ರೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಭಾರತೀಯ ಮಕ್ಕಳ ಚಲನ ಚಿತ್ರೋತ್ಸವ ಸೊಸೈಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುವ ಮಕ್ಕಳ ಚಲನಚಿತ್ರೋತ್ಸವ ಕಾರ್ಯಕ್ರಮದ ಕುರಿತಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ಮಕ್ಕಳ ಚಲನಚಿತ್ರ ಸೊಸೈಟಿಯು ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿ ಮೂಡಿಸುವ ಸಂದೇಶವುಳ್ಳ ಚಿತ್ರಗಳಾದ ಅಲೆಗಳು ಹಾಗೂ ಪುಟಾಣಿ ಪ್ರಪಂಚ ಚಲನಚಿತ್ರಗಳನ್ನು ಜಿಲ್ಲೆಯ ವಿವಿಧ ಚಿತ್ರಮಂದಿರಗಳಲ್ಲಿ ಪ್ರದಶರ್ಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಚಲನಚಿತ್ರೋತ್ಸವ ನಡೆಯುತ್ತಿರುವುದರಿಂದ ಆಯಾ ಚಿತ್ರಮಂದಿರಗಳ ಹತ್ತಿರದ ಶಾಲೆಗಳಿಂದ ಮಕ್ಕಳನ್ನು ಆಯ್ಕೆ ಮಾಡಿ, ಮಕ್ಕಳ ಸುರಕ್ಷತೆಗಾಗಿ ಅಗತ್ಯ ಪ್ರಮಾಣದ ಶಿಕ್ಷಕರನ್ನು ನಿಯೋಜಿಸಬೇಕು. ಚಲನಚಿತ್ರೋತ್ಸವ ಆಯೋಜಕರಿಗೆ ಸ್ಥಳೀಯವಾಗಿ ಹೆಚ್ಚಿನ ಪರಿಚಯವಿರದ ಕಾರಣ ಆಯೋಜಕರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಚಲನಚಿತ್ರೋತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಅವರು ಹೇಳಿದರು.
ಕೊಪ್ಪಳದಲ್ಲಿ ಶಿವ ಹಾಗೂ ಲಕ್ಷ್ಮೀ ಚಿತ್ರಮಂದಿರಗಳಲ್ಲಿ, ಯಲಬುಗರ್ಾದಲ್ಲಿ ಮಂಜುನಾಥ, ಪ್ರವೀಣ ಹಾಗೂ ಶಕ್ತಿ ಚಿತ್ರಮಂದಿರಗಳಲ್ಲಿ, ಗಂಗಾವತಿಯಲ್ಲಿ ಕನಕದುರ್ಗಾ ಹಾಗೂ ಶಿವೆ ಚಿತ್ರಮಂದಿರಗಳಲ್ಲಿ ಅವರ ದೈನಂದಿನ ಪ್ರದರ್ಶನಗಳಿಗೆ ತೊಂದರೆಯಾಗದಂತೆ ಪ್ರತಿದಿನ ಬೆಳಗ್ಗೆ 09 ಗಂಟೆಯಿಂದ 10.30 ಗಂಟೆಯವರೆಗೆ ಮಕ್ಕಳ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಪ್ರತಿ ಪ್ರದರ್ಶನಕ್ಕೂ ಚಿತ್ರಮಂದಿರಗಳಿಗೆ ಸೊಸೈಟಿಯಿಂದ ನಿಗದಿ ಪಡಿಸಿದ ರೂ. 2500/-ಗಳನ್ನು ನೀಡಲಾಗುತ್ತದೆ. ಆಯ್ಕೆಯಾದ ಚಿತ್ರಮಂದಿರಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಮಕ್ಕಳ ಚಲನಚಿತ್ರ ಪ್ರದರ್ಶನಕ್ಕೆ ಸಹಕರಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಭಾರತೀಯ ಮಕ್ಕಳ ಚಲನಚಿತ್ರ ಸೊಸೈಟಿಯ ಅಧಿಕಾರಿ ವಿ. ಎಸ್. ಅಗಿಲಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಕಂಬಳಿ, ತಹಶೀಲ್ದಾರ ಜೆ.ಬಿ. ಮಜ್ಗಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.