ಸಂಘಟನೆಗಳು ಜನಸೇವೆ ಮಾಡಬೇಕು: ಕರ್ನಾಟಕ ಏಕೀಕರಣ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ

ಲೋಕದರ್ಶನ ವರದಿ

ಯಲಬುರ್ಗಾ 10: ಸಂಘಟನೆಗಳನ್ನು ಹುಟ್ಟು ಹಾಕುವದು ಅತ್ಯಂತ ಸುಲಭ ಆದರೆ ಅವುಗಳು ಸಕ್ರೀಯವಾಗಿ ಜನಸೇವೆಯನ್ನು ಮಾಡುವಂತೆ ಮಾಡುವದು ಬಹುಮುಖ್ಯವಾಗಿದೆ ಎಂದು ಕರ್ನಾಟಕ ಏಕೀಕರಣ ಸಮಿತಿ ರಾಜ್ಯಾಧ್ಯಕ್ಷ ಎಂ ಲಿಂಗರಾಜ ಹೇಳಿದರು.

ತಾಲೂಕಿನ ಮೂಧೋಳ ಗ್ರಾಮದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ದೇಶ ಸೇವೆ ಮಾಡಲು ಹಾಗೂ ಜನರ ಕಷ್ಟ ಹಾಗೂ ನೋವುಗಳಿಗೆ ಸ್ಪಂದನೆ ಮಾಡಲು ಸಂಘಟನೆಗಳು ಅತ್ಯಂತ ಸಹಕಾರಿಯಾಗಿವೆ ಅವುಗಳನ್ನ ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಳ್ಳುವ ಕಲೆ ಪ್ರತಿಯೊಬ್ಬ ಸಂಘಟನಾಕಾರ ತಿಳಿದುಕೋಳ್ಳಬೇಕು ಎಂದರು,

ಸಂಘಟನೆಯ ರಾಜ್ಯ ಕಾಯರ್ಾಧ್ಯಕ್ಷ ಆರೀಪ್ ಮುಲ್ಲಾ ಮಾತನಾಡಿ ನಮ್ಮ ಸಂಘಟನೆ ಸದಾ ನೆಲ ಜಲ ಹಾಗೂ ಭಾಷೆಯ ಬಗ್ಗೆ ಕಾಳಜಿ ಹೊಂದಿದೆ ಅದನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಿ ಯಾವುದೆ ಅಕ್ರಮ ಹಾಗೂ ಅನ್ಯಾಯಕ್ಕೆ ಒಳಗಾಗಬೇಡಿ ಎಂದರು.

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ತಳವಾರ, ಉಪಾಧ್ಯಕ್ಷೆ ಯಲ್ಲಮ್ಮ ಹಿರೇಹಾಳ, ಭೋವಿ ಸಮಾಜದ ತಾಲೂಕ ಅದ್ಯಕ್ಷ ನಾಗಪ್ಪ ವಡ್ಡರ, ಮುಖಂಡರಾದ ಛತ್ರಪ್ಪ ಛಲವಾದಿ, ಹೆಮರಡ್ಡಿ ರಡ್ಡೇರ, ತಿಮ್ಮಣ್ಣ ವಡ್ಡರ, ಸಿದ್ದನಗೌಡ ಮಾಲಿಪಾಟೀಲ, ಕಳಕಪ್ಪ ಕುರಿ,  ಗುಡದಿರಪ್ಪ ಕಜ್ಜಿ, ರಮೇಶ ಶಿಳ್ಳಿನ, ಸಿದ್ದಪ್ಪ ಅಕ್ಕಸಾಲಿಗರ, ಮಂಜುನಾಥ ಮುರಡಿ, ಹನುಮಂತಪ್ಪ ಹಿರೇಮನಿ, ಸೇರಿದಂತೆ ಅನೇಕರು ಹಾಜರಿದ್ದರು.