ವಿಪಕ್ಷಗಳ ಗದ್ದಲ : ರಾಜ್ಯಸಭೆ ಕಲಾಪ ಮಧ್ಯಾಹ್ನ 2ರವರೆಗೆ ಮುಂದೂಡಿಕೆ

 ನವದೆಹಲಿ, ನ 19 :        ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಮತ್ತು ಜವಾಹರ್ ಲಾಲ್ ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳ ವಿಷಯಗಳನ್ನು ಪ್ರಸ್ತಾಪಿಸಿ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಗದ್ದಲ ಎಬ್ಬಿಸಿದ ಪರಿಣಾಮ ಮಂಗಳವಾರದ ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲ್ಪಟ್ಟಿದೆ.         ನಿಯಮ 267 ರ ಅಡಿ ಕೆಲವು ಸದಸ್ಯರು ನೊಟೀಸ್ ನೀಡಿದ್ದು ಅದನ್ನು ತಿರಸ್ಕರಿಸಲಾಗಿದೆ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಸಿ ಪಿ ಎಂ ಸದಸ್ಯರು ಗದ್ದಲ ಎಬ್ಬಿಸಿದರು.         ಶಾಂತಿ ಕಾಪಾಡುವಂತೆ ವೆಂಕಯ್ಯನಾಯ್ಡು ಮಾಡಿದ ಮನವಿ ಫಲಿಸದ ಕಾರಣ ಕಲಾಪವನ್ನು ಮಧ್ಯಾಹ್ನ ಎರಡು ಗಂಟೆವರೆಗೆ ಮುಂದೂಡಲಾಯಿತು.         ದೇಶದಲ್ಲಿನ ಆರ್ಥಿಕ ಸ್ಥಿತಿಯ ಕುರಿತು ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದರೆ, ಜವಹಾರ್ ನೆಹರು ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳ ಸಂಬಂಧ ಚರ್ಚೆ ನಡೆಸುವಂತೆ ಸಿಪಿಎಮ್ ಆಗ್ರಹಪಡಿಸಿತು.