ಮಳೆಗಾಲದ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ವಿರೋಧ ಪಕ್ಷದ ಸದಸ್ಯರು : ಪ್ರತ್ಯುತ್ತರ ನೀಡಿದ ಪೌರಸಯುಕ್ತ
Opposition members draw attention to monsoon problems: Municipal Commissioner responds
ಕಾರವಾರ 19: ನಗರದ ನಗರಸಭೆ ಸಭಾಭವದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಮಳೆನೀರು ತಂದ ಸಮಸ್ಯೆ, ಚರಂಡಿ ಹೂಳು ತೆಗೆಯುವಿಕೆಯಲ್ಲಿನ ನಿರ್ಲಕ್ಷ್ಯ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣಗಳ ಕುರಿತು ಸದಸ್ಯರ ನಡುವೆ ತೀವ್ರ ಚರ್ಚೆ ನಡೆಯಿತು.
ನಗರಸಭೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅದರಲ್ಲೂ ಕಾರವಾರ ಕೊಡಿಬಾಗ ರಸ್ತೆ ಅಗಲೀಕರಣಕ್ಕೆ ಜಾಗ ನೀಡಿದ ಮಾಲೀಕರಿಗೆ ಟಿಡಿಆರ್ ನೀಡುವ ವಿಷಯ ಪ್ರಸ್ತಾಪವಾಯಿತು. ರಸ್ತೆಗಳ ಬದಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಲ್ಲುತ್ತಿರುವುದು ಮತ್ತು ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುವ ಸಮಸ್ಯೆಯ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದರು.ಹೂಳು ತೆಗೆಯುವ ಕಾರ್ಯದಲ್ಲಿ ವಿಳಂಬ ಮತ್ತು ಲೋಪಸಭೆಯಲ್ಲಿ ಸದಸ್ಯ ಸಂದೀಪ್ ತಳೇಕರ್ ಅವರು, ನಗರದಲ್ಲಿ 65 ಕಿ.ಮೀ. ಉದ್ದದ ಚರಂಡಿ ಹೂಳು ತೆಗೆಯಲು ಟೆಂಡರ್ ಆಗಿದ್ದರೂ, ಕೇವಲ 35 ಕಿ.ಮೀ. ಮಾತ್ರ ಹೂಳು ತೆಗೆಯಲಾಗಿದೆ ಎಂದು ಆರೋಪಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ ಅವರು, ಇಬ್ಬರಿಗೆ ಮಾತ್ರ ಟೆಂಡರ್ ನೀಡುವ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ನಗರದಲ್ಲಿ ಅಂಡರ್‌ಗ್ರೌಂಡ್ ಪಾಕಿಂರ್ಗ್ ಅಗತ್ಯವಿಲ್ಲ, ಅದರ ಬದಲು ಬೇರೆ ಯೋಜನೆಗಳ ಬಗ್ಗೆ ಕೆಡಿಎಗೆ ಠರಾವು ಮಾಡಿ ಸಲ್ಲಿಸುವಂತೆ ಆಗ್ರಹಿಸಿದರು.ಬಿಣಗಾ ಮತ್ತು ಬೈತಖೋಲದಲ್ಲಿ ಜಲಾವೃತ ಸಮಸ್ಯೆಸದಸ್ಯ ಪಿ.ಪಿ. ನಾಯ್ಕ ಅವರು, 2009ಕ್ಕೆ ಹೋಲಿಸಿದರೆ ಈ ಬಾರಿ ಬಿಣಗಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದೆ ಎಂದು ಗಮನ ಸೆಳೆದರು. ರಾಜ್ ಕಾಲುವೆಗೆ ಪೈಪ್ ಹಾಕಿ ಮುಚ್ಚಿರುವುದರಿಂದ ಹಲವಾರು ಮನೆಗಳು ಜಲಾವೃತಗೊಂಡಿವೆ ಎಂದು ತಿಳಿಸಿದರು. ನೌಕಾನೆಲೆಯ ಕಂಪೌಂಡ್ ಮತ್ತು ಐಆರ್‌ಬಿ ನಡೆಸಿದ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಈ ಸಮಸ್ಯೆ ಉಲ್ಬಣಿಸಿದೆ ಎಂದು ದೂರಿದರು. ನೌಕಾನೆಲೆ ಕಡ್ಟಡ ನಿರ್ಮಾಣದಿಂದಲೂ ನೀರು ಹರಿಯಲು ಅಡ್ಡಿಯಾಗಿದೆ ಎಂದು ನಾಯ್ಕ ಹೇಳಿದರು.ಸದಸ್ಯ ರಾಜೇಶ್ ಮಾಜಾಳೀಕರ್ ಮಾತನಾಡಿ , ನೌಕಾನೆಲೆಯಿಂದ ಬಿಣಗಾ ಮತ್ತು ಬೈತಖೋಲದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ದೇಶ ರಕ್ಷಣೆಯ ಹೆಸರಿನಲ್ಲಿ, ದೇಶದೊಳಗೆ ಇರುವ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬೈತಖೋಲದಲ್ಲಿ ಒಂದೆರಡು ಸಣ್ಣ ಬಂಡೆಗಲ್ಲುಗಳು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಬಹುದು ಎಂದು ಅವರು ವಿವರಿಸಿದರು. ಆದಾಗ್ಯೂ, ನಗರದ ಪ್ರಮುಖ ಗಟಾರಗಳ ಹೂಳನ್ನು ತೆಗೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಪರವಾನಗಿ ವಿವಾದಸದಸ್ಯ ಪ್ರೇಮಾನಂದ್ ಅವರು, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಅಧಿಕಾರ ನಗರಸಭೆಗೆ ಇದೆ ಎಂದು ಹೇಳಿದಾಗ, ಪೌರಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದರು. ಮರಳು ಪೂರೈಕೆ ಮಾಡುವವರು, ಹಾಕುವವರು ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವವರಲ್ಲಿ ನಗರಸಭೆ ಸದಸ್ಯರೇ ಇದ್ದಾರೆ. ಪರವಾನಗಿ ಪಡೆಯುವಾಗ ಸದಸ್ಯರು ಬೆಂಬಲ ನೀಡುತ್ತಾರೆ, ಆದರೆ ಈಗ ಅದರ ಬಗ್ಗೆ ಮಾತನಾಡುವ ಬದಲು ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡುವಂತೆ ಸಲಹೆ ನೀಡಿದರು.ಸದಸ್ಯ ಸಂದೀಪ್ ತಳೇಕರ್ ಅವರು ಮತ್ತೊಮ್ಮೆ ಆರೋಪಿಸಿ, ಏಳು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿದ ನಂತರವೂ ನಗರಸಭೆ ಅಧಿಕಾರಿಗಳು ವಿವಿಧ ಮನೆಗಳಿಗೆ ಮನೆ ಸಂಖ್ಯೆಗಳನ್ನು ನೀಡಿದ್ದಾರೆ ಎಂದು ಆಪಾದಿಸಿದರು. ಇದು ಅನಧಿಕೃತ ಕಟ್ಟಡಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ನಗರಸಭೆಯು 13 ಕೋಟಿ ರೂಪಾಯಿಗಳ ನಷ್ಟದಲ್ಲಿದ್ದು, ಪ್ರಸ್ತುತ ಅದನ್ನು 8 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ ಎಂದ ಪೌರಾಯುಕ್ತರು, ಮಾಸ್ಟರ್ ಪ್ಲಾನ್ ಪ್ರಕಾರ ರಸ್ತೆಗಳಿಗೆ ಜಾಗ ಬಿಡದ ಕಾರಣ ಹಲವು ಸಮಸ್ಯೆಗಳಾಗಿವೆ. ಮಾಸ್ಟರ್ ಪ್ಲಾನ್ ಪ್ರಕಾರ 30 ಅಡಿವರೆಗೆ ಜಾಗ ಬಿಡಬೇಕೆಂಬ ನಿಯಮವಿದ್ದು, ಇದನ್ನು ಉಲ್ಲಂಘಿಸಿರುವ ಕಟ್ಟಡಗಳನ್ನು ಒಡೆಯಲು ಅವಕಾಶ ನೀಡಬೇಕು ಎಂದು ಸಭೆಗೆ ಕೋರಿದರು.ರಸ್ತೆಗೆ ಜಾಗ ಕೊಟ್ಟವರಿಗೆ ಟಿಡಿಆರ್ :ರಸ್ತೆಗೆ ಜಾಗ ಕೊಟ್ಟವರಿಗೆ ಟಿಡಿಆರ್ ಕೊಡದ ಬಗ್ಗೆಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸದಸ್ಯ ಮಕ್ಬೂಲ್ ಶೇಖ್ ಮಾತನಾಡಿ ಟಿಡಿಆರ್ ವಿತರಣೆಯಾಗದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಇದ್ದ ಆರ್. ಪಿ. ನಾಯಕ್ ಎಂಬುವವರು , ಜಿಲ್ಲಾಧಿಕಾರಿ ಎದುರು ಹಿರೋ ಆಗಲು ಹೋಗಿ ಜನರ ಆಸ್ತಿ ಅತಿಕ್ರಮಿಸಿದರು. ರಸ್ತೆ ಅಗಲೀಕರಣಕ್ಕೆ ವಕೀಲರೊಬ್ಬರ ಕಾಂಪೌಂಡು ಹೊಡೆದು ಕೋರ್ಟನಿಂದ ಛೀಮಾರಿ ಹಾಕಿಸಿಕೊಂಡದ್ದನ್ನು ನೆನಪಿಸಿದರು.ಕಳೆದ 9 ವರ್ಷಗಳ ಹಿಂದೆ ನಗರಸಭೆ ಟಿಡಿಆರ್ ನೀಡುವುದಾಗಿ ಹೇಳಿದ್ದರೂ, ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು.
ನಮ್ಮ ಮೇಲೆ ವಿಶ್ವಾಸವಿಟ್ಟು ಕೆಲವು ಜನರು ಸ್ವಯಂ ಪ್ರೇರಿತವಾಗಿ ತಮ್ಮ ಜಾಗ ಬಿಟ್ಟುಕೊಟ್ಟಿದ್ದಾರೆ. ನನ್ನ ವಾರ್ಡ್‌ನಲ್ಲಿ ಜನರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಕಾಂಪೌಂಡ್‌ಗಳನ್ನು ತೆರವುಗೊಳಿಸಿದ್ದಾರೆ ಎಂದರು. ಪೌರಾಯಕ್ತರು ಪ್ರತಿಕ್ರಿಯಿಸಿ ಕಳೆದ 9 ವರ್ಷಗಳಿಂದ ಈ ವಿಷಯ ಏಕೆ ಚರ್ಚೆಯಾಗಿಲ್ಲ? ಏಕೆ ಈ ವಿಷಯವನ್ನು ಬಿಟ್ಟುಬಿಡಲಾಗಿದೆ? ಇದು ಸರಿಯಲ್ಲ. ಕಾರವಾರ-ಕೋಡಿಭಾಗ ರಸ್ತೆ ವ್ಯಾಪ್ತಿಯಲ್ಲಿ ಒಟ್ಟು 202 ಜನರ ಪೈಕಿ, 2016ರ ನಂತರ ಕೇವಲ ಏಳು ಜನ ಮಾತ್ರ ಟಿಡಿಆರ್ ಲಾಭ ಪಡೆದುಕೊಂಡಿದ್ದಾರೆ ಎಂದು ಮಕ್ಬೂಲ್ ಆರೋಪಿಸಿದರು.ಸದಸ್ಯ ಸಂದೀಪ ತಳೇಕರ್ ಅವರು ಟಿಡಿಆರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದರು. "ಟಿಡಿಆರ್ ಬಗ್ಗೆ ಜನರಿಗೆ ತಿಳಿಸಬೇಕು. ಟಿಡಿಆರ್ ಅನ್ನು ಮಾರಾಟ ಸಹ ಮಾಡಬಹುದು ಎಂಬುದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ನಗರಸಭೆಯ ಆರ್ಥಿಕ ಸುಧಾರಣೆ ಮತ್ತು ಮಾಸ್ಟರ್ ಪ್ಲಾನ್ ಸಮರ್ಕ ಅನುಷ್ಠಾನದ ಜೊತೆಗೆ ಟಿಡಿಆರ್ ವಿತರಣೆಯ ವಿಳಂಬವು ಸಭೆಯಲ್ಲಿ ಪ್ರಮುಖ ಚರ್ಚಾ ವಿಷಯವಾಯಿತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.ಅಧ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ ಟಿಡಿಆರ್ ನೀಡುವ ಕ್ರಿಯೆ ನಾಳೆಯಿಂದ ಆರಂಭವಾಗಲಿದೆ ಎಂದರು.ಕಾರವಾರ ನಗರೆಸಭೆ ಪೌರಾಯುಕ್ತರಾದ ಹುಲಗೆಜ್ಜಿ ಮಾತನಾಡಿ ಹಿಂದೆ ಇದ್ದ ಪೌರಾಯುಕ್ತರಾದ ಆರ್.ಪಿ.ನಾಯಕ್ ಈಗ ಇಲ್ಲ. ಅವರ ಬಗ್ಗೆ ಚರ್ಚೆ ಬೇಡ. ನಾವು , ಅವರು ಮಾಡಿದ ತಪ್ಪು ಮಾಡುವುದಿಲ್ಲ. ಟಿಡಿಆರ್ ಕೊಡೋಣ, ಜೊತೆಗೆ ರಸ್ತೆ ಅತಿಕ್ರಮಿಸಿದವರ ಜಾಗ ಎಷ್ಟು ಎಂದು ನಿರ್ಧರಿಸೋಣ ಎಂದರು.ಪ್ಲಾಸ್ಟಿಕ್ ನೀರಿನ ಬಾಟಲ್ ಬಗ್ಗೆ ಆಕ್ಷೇಪ:ನಗರಸಭೆಯ ಸಭೆ ನಡೆವಾಗ ಪ್ಲಾಸ್ಟಿಕ್ ನೀರಿನ ಬಾಟಲ್ ಸರಬರಾಜು ಮಾಡಿದ್ದಕ್ಕೆ ಪರಿಸರ ಅಧಿಕಾರಿ ಯಕೊಬ್ ಅವರನ್ನು ಮೂವರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರ ಪ್ಲಾಸ್ಟಿಕ್ ಬಾಟಲ್ ಬಳಸಬೇಡಿ ಎಂದು ಸುತ್ತೋಲೆ ಒದಗಿಸಿದರೂ, ನೀವು ಪ್ಲಾಸ್ಟಿಕ್ ಬಾಟಲ್ ಯಾಕೆ ತರಿಸಿದ್ದು ಎಂದು ಆಕ್ಷೇಪ ದಾಖಲಿಸಿದರು.ಬಿರಿಯಾನಿ ತರಿಸಿದರು :ಸಾದಾ ಸಸ್ಯಹಾರಿ ಊಟ ತರಿಸಿದ್ದಕ್ಕೆ ಕೆಲ ಸದಸ್ಯರು ಆಕ್ಷೇಪಡಿಸಿದರು.ವೆಜ್ ತರಿಸಿದ್ದೀರಿ.ನಾವು ನಾನ್ ವೆಜ್ ಊಟ ಮಾಡ್ತಿವಿ, ಬಿರಿಯಾನಿ ತರಿಸಿ ಎಂದು ಬಿಜೆಪಿ ಇಬ್ಬರು ಸದಸ್ಯರು, ಕಾಂಗ್ರೆಸ್ ನ ಇಬ್ಬರು ಪಟ್ಟು ಹಿಡಿದರು. ಅವರಿಗೆ ನಗರಸಭೆಯ ಮ್ಯಾನೇಜರ್ ಬಿರಿಯಾನಿ ವ್ಯವಸ್ಥೆ ಮಾಡಿದರು.ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ , ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 