ಪರಿಶ್ರಮಕ್ಕೆ ಸಂದ ಗೌರವ: ಶಾಂತಿನಾಥ ಪಾಲಗೌಡರ

ಪರಿಶ್ರಮಕ್ಕೆ ಸಂದ ಗೌರವ: ಶಾಂತಿನಾಥ ಪಾಲಗೌಡರ Respect for hard work: Shantinath Palagowda

ಲೋಕದರ್ಶನ ವರದಿ 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸನ್ಮತಿ ವಿದ್ಯಾಲಯದ ಉತ್ತಮ ಸಾಧನೆ; ವಿದ್ಯಾರ್ಥಿಗಳ ಸನ್ಮಾನ..! 

ಕಾಗವಾಡ 29: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿಶಾಂಶ ಪಡೆದುಕೊಳ್ಳಲು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಆಡಳಿತ ಮಂಡಳಿಯ ಸಹಕಾರವೇ ಕಾರಣವಾಗಿದೆ ಎಂದು ಭಾರತ ಇಲೇಕ್ಟ್ರಾನಿಕ್ಸ್‌ನ ಸಂಸ್ಥಾಪಕ ಶಾಂಥಿನಾಥ ಪಾಲಗೌಡರ ಅಭಿಪ್ರಾಯ ಪಟ್ಟಿದ್ದಾರೆ. 

ಅವರು, ಮಂಗಳವಾರ ದಿ. 28 ರಂದು ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ಸನ್ಮತಿ ವಿದ್ಯಾಲಯದ ರಾ​‍್ಯಂಕ್ ಪಡೆದುಕೊಂಡ ವಿದ್ಯಾರ್ಥಿಗಳಾದ ಸಂತೋಶ ರತ್ನಪ್ಪಗೋಳ, ಅಲ್ಫೀಯಾ ಸಾರವಾನ ಮತ್ತು ಹರ್ಷಿತಾ ಕಾಂಬಳೆ ಇವರನ್ನ ಸನ್ಮಾನಿಸಿ, ಮಾತನಾಡುತ್ತಿದ್ದರು. ಕಳೆದ 2-3 ತಿಂಗಳುಗಳಿಂದ ಸನ್ಮತಿ ವಿದ್ಯಾಲಯದ ಶಿಕ್ಷಕರು ಹಗಲಿರುಳೆನ್ನದೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಕ್ಲಾಸ್‌ಗಳ ಮುಖಾಂತರ ಪಾಠ ಮಾಡಿರುವುದು, ವಿದ್ಯಾರ್ಥಿಗಳು ಅದಕ್ಕೆ ಉತ್ತಮವಾಗಿ ಸ್ಪಂದಿಸಿದ್ದು, ಜೊತೆಗೆ ಆಡಳಿತ ಮಂಡಳಿಯವರು ಅವರ ಪರಿಶ್ರಮಕ್ಕೆ ಬೆನ್ನೆಲುಬಾಗಿ ನಿಂತು ಎಲ್ಲ ರೀತಿಯ ಸಹಕಾರ ನೀಡಿದ್ದು, ಇಂತಹ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸನ್ಮತಿ ವಿದ್ಯಾಲಯದ ಕೀರ್ತಿ ರಾಜ್ಯ ಮಟ್ಟದಲ್ಲಿ ಪಸರಿಸಲಿ. ನಾವು ಸನ್ಮತಿ ವಿದ್ಯಾಲಯಕ್ಕೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ತಿಳಿಸಿದರು. 

ಇದೇ ವೇಳೆ ಕೃಷ್ಣಾ ಗೋದಾವರಿ ಗೊಬ್ಬರ, ಬೀಜ-ಬಿಜೋತ್ಪಾನೆ ಮತ್ತು ಮಾರಾಟ ಸಹಕಾರಿ ಸಂಸ್ಥೆಯ ವ್ಯವಸ್ಥಾಕ ನಿರ್ದೇಶಕ ಶಶಿಕಾಂತ ಪುರಮವಾರ ಕೂಡಾ ರಾ​‍್ಯಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 

ಶಿಕ್ಷಕ ಎಚ್‌.ಪಿ. ನಾಯಿಕ ಮಾತನಾಡಿ, ಸನ್ಮತಿ ವಿದ್ಯಾಲಯ ಬಡ ಮತ್ತು ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಹಳಷ್ಟು ಶ್ರಮಿಸುತ್ತಿದ್ದು, ದಾನಿಗಳ ಸಹಕಾರದೊಂದಿಗೆ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಸನ್ಮತಿ ವಿದ್ಯಾಲಯದ ಬಗ್ಗೆ ಬಹಳಷ್ಟು ಪ್ರೀತಿ, ವಿಸ್ವಾಸವಿಟ್ಟುಕೊಂಡಿರುವ ತಮ್ಮಂತವರ ಸಹಕಾರ ಹೀಗೆ ನಿರಂತರವಾಗಿರಲಿ ಎಂದು ವಿನಂತಿಸಿದರು. 

ಈ ವೇಳೆ ಶಾಂತಿನಾಥ ಪಾಲಗೌಡರ, ಸಂಗೀತಾ ಪಾಲಗೌಡರ, ಸುಮಿತ ಪಾಲಗೌಡರ, ಪದ್ಮಜಾ ಪಾಲಗೌಡರ, ಅನೀತಾ ಪಾಟೀಲ, ವರ್ಧಮಾನ ಪಾಟೀಲ, ಕೃಷ್ಣಾ ಗೋದಾವರಿ ಗೊಬ್ಬರ, ಬೀಜ-ಬಿಜೋತ್ಪಾನೆ ಮತ್ತು ಮಾರಾಟ ಸಹಕಾರಿ ಸಂಸ್ಥೆಯ ಎಂಡಿ ಶಶಿಕಾಂತ ಪುರಮವಾರ, ಚೇರಮನ್ ಶ್ರೀಕಾಂತ ಪುರಮವಾರ, ಪಾಲುದಾರ ಸಂಜಯ ನಿಲವಾರ, ಎಚ್‌ಆರ್ ಯೋಗಿತಾ ಗಡದೆ, ಮುಖ್ಯೋದ್ಯಾಪಕಿ ಎಂ.ಎನ್‌. ಕಾಳೇನಟ್ಟಿ ಶಿಕ್ಷಕರಾದ ಎಸ್‌.ಡಿ. ಇರಾಜ, ಎಸ್‌.ಡಿ ಮುತಾಲಿಕ, ಎ.ಕೆ. ಪಾಟೀಲ, ಜಿ.ಎನ್‌. ಹೆಬ್ಬಾಳೆ, ಎಂ.ಎಸ್‌. ಸಪ್ತಸಾಗರೆ ಉಪಸ್ಥಿತರಿದ್ದರು.