‘ವ್ಯಕ್ತಿಗಳಿಗೆ ಆಡಳಿತದ ಅವಕಾಶಗಳು ಆಯ್ಕೆಗನುಗುಣವಾಗಿ ದೊರಕುತ್ತವೆ’
‘Individuals are given governance opportunities based on their choices’
ಲೋಕದರ್ಶನ ವರದಿ
ಧಾರವಾಡ 29: ವ್ಯಕ್ತಿಗಳಿಗೆ ಆಡಳಿತದ ಅವಕಾಶಗಳು ಅವರ ಆಯ್ಕೆಗನುಗುಣವಾಗಿ ಇಲ್ಲವೆ, ಆಕಸ್ಮಿಕ ದೊರಕುತ್ತವೆ. ವಿದ್ಯಾರ್ಥಿಗಳು ದೊಡ್ಡ ಅಧಿಕಾರಿಗಳಾಗಿ ಆಡಳಿತ ಮಾಡುವ ಕನಸುಗಳನ್ನು ಕಾಣಬೇಕು. ಆ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಪ್ರೊ. ಶಾಂತಿನಾಥ ದಿಬ್ಬದ ಅವರು ಕರೆಕೊಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ “ವಾಣಿಜ್ಯ ಮತ್ತು ಆಡಳಿತ ಮಂಟಪ”ವು, ಕರ್ನಾಟಕ ಸಂಘ, ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕ.ವಿ.ವಿ., ಧಾರವಾಡ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆಡಳಿತ ನಿರ್ವಹಣಾ ಕೌಶಲಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿ, ಆಡಳಿತ ಮಾಡುವುದು ಅಧಿಕಾರಕ್ಕಾಗಿ ಅಲ್ಲ, ಜನಸೇವೆಯ ಅವಕಾಶ ಎಂದು ತಿಳಿದು ನಿಯಮ ಮತ್ತು ಮಾನವೀಯತೆಯ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡಬೇಕು ತಮ್ಮ ಕುಲಸಚಿವರ ಆಡಳಿತದ ನಿದರ್ಶನಗಳ ಮೂಲಕ ಮಾರ್ಮಿಕವಾಗಿ ಹೇಳಿದರು.
ಕ.ವಿ.ವಿಯ ಕೌಸಾಳಿ ವ್ಯವಹಾರ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕರು ಮತ್ತು ಡೀನರಾದ ಪ್ರೊ. ಎನ್. ರಾಮಾಂಜನೇಯಲು ಅವರು ವಾಣಿಜ್ಯ ಮತ್ತು ವ್ಯಾಪಾರ ನೈಪುಣ್ಯತೆ ಎಂಬ ವಿಷಯ ಕುರಿತು ಮಾತನಾಡಿದರು. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ವಾಣಿಜ್ಯ ವ್ಯಾಪಾರ ನೈಪುಣ್ಯತೆ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಾಪಾರದಲ್ಲಿ ಲಾಭದ ದೃಷ್ಠಿ ಇದ್ದರೂ ಅದೇ ಮುಖ್ಯವಲ್ಲ. ಗ್ರಾಹಕರ ಬೇಡಿಕೆ ಇಷ್ಟ, ತೃಪ್ತಿ ಬಹಳ ಮುಖ್ಯವೆಂದರು. ಪ್ರಕೃತಿ, ಸಮಾಜ, ಲಾಭದ ನೀತಿ ಬೇಕು ವ್ಯಾಪಾರದಿಂದ ಸಂಪತ್ತಿನಲ್ಲಿ ಹಂಚಿಕೆ, ತೆರಿಗೆ ಸಂಗ್ರಹವಾಗಿ ದೇಶದ ಅಭಿವೃದ್ದಿಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಮತ್ತು ವ್ಯಾಪಾರ ತಿಳುವಳಿಕೆ ಎಲ್ಲರಿಗೂ ಇರಬೇಕೆಂದರು.
ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಪ್ರೊ. ಕೃಷ್ಣಾ ನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಶಿಸ್ತು ಪರಿಶ್ರಮ ಮೈಗೂಡಿಸಿಕೊಂಡು ಬದುಕು ರೂಪಿಸಿಕೊಳ್ಳಲು ಕರೆ ಕೊಟ್ಟರು. ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಮಲ್ಲಪ್ಪ ಬಂಡಿ ಸ್ವಾಗತಿಸಿದರು, ಸಸಿಗೆ ನೀರುಣಿಸುವ ಮೂಲಕ ವೇದಿಕೆ ಮೇಲಿನ ಗಣ್ಯರು ಕಾರ‌್ಯಕ್ರಮ ಉದ್ಘಾಟಿಸಿದರು. ಸಂಚಾಲಕ ಪ್ರೊ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯವ್ಯಾಪ್ತಿ ಕುರಿತು ವಿವರಿಸಿದರು. ಮಂಜುನಾಥ ಬಗಲಿ ವಂದಿಸಿದರು. ಚಿದಂಬರ ಕುಲಕರ್ಣಿ ನಿರೂಪಿಸಿದರು. ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಸಿದ್ಧಾರೂಢ ಗುಗ್ಗರಿ, ಸೌಮ್ಯಾ ನೇತ್ರೇಕರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ಎಂ. ಎಂ. ಪತ್ತಾರ, ಪ್ರಾಧ್ಯಾಪಕರಾದ ಡಾ. ನಿಂಗಪ್ಪ ಮುದೇನೂರ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 