ಮದ್ಯಮಾರಾಟಕ್ಕೆ ಅವಕಾಶ: ಮುಖ್ಯಮಂತ್ರಿ ವಿವೇಚನಾಧಾರಿಕಾರಕ್ಕೆ ಬಿಟ್ಟಿದೆ ಎಂದ ಅಬಕಾರಿ ನಾಗೇಶ್

ಬೆಂಗಳೂರು, ಮಾರ್ಚ್ 30, ದೇಶಾದ್ಯಂತ ಲಾಕ್ಡೌನ್ನಿಂದಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಬಂದ್ನಿಂದಾಗಿ ಮದ್ಯ ಸಿಗದಿದ್ದಕ್ಕಾಗಿಸಾವು ಕೂಡಸಂಭವಿಸಿದೆ.ಕೇರಳದಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಿದಂತೆ ಕರ್ನಾಟಕದಲ್ಲಿಯೂ ಅವಕಾಶ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ.ಕರ್ನಾಟಕ ರಾಜ್ಯದಲ್ಲಿ 6.5 ಕೋಟಿ ಜನಗಳ ಪೈಕಿ ಸುಮಾರು 3.75 ಕೋಟಿಯಷ್ಟು ಜನಗಳು ಮದ್ಯಪಾನವನ್ನು ಸೇವಿಸುತ್ತಿದ್ದಾರೆ. ಮದ್ಯಪಾನ ಸೇವಿಸುವವರ ಸ್ಥಿತಿ ಚಿಂತಾಜನಕವಾಗಿದೆ. ಕೂಲಿ ಕಾರ್ಮಿಕರು, ರೈತರು, ಹಮಾಲಿ ಕೆಲಸ ಮಾಡುವವರು ಹಲವಾರು ರೀತಿ ಜನಗಳು ಮದ್ಯಪಾನವನ್ನು ಸೇವಿಸುತ್ತಿದ್ದಾರೆ21 ದಿನಗಳ ಲಾಕ್ಡೌನ್ನಿಂದಾಗಿ ದೇಶಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯ ಸಿಗದೆ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ಐದು ದಿನಗಳಲ್ಲಿ ಕೇರಳದಲ್ಲಿ 9, ಕರ್ನಾಟಕದಲ್ಲಿ 5 ಹಾಗೂ ಹೈದರಾಬಾದ್ನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಮದ್ಯವ್ಯಸನಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ನಡೆದಿವೆ.ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ನಾಗೇಶ್  ಕೇರಳದ ರೀತಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಗಳು ಬಂದಿವೆ. ಆದರೆ, ಪ್ರಸ್ತುತ ಈ ವಿಚಾರದಲ್ಲಿ ನಾನೂ ಏನೂ ಮಾತನಾಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುತ್ತಾರೆ. ಪ್ರಸ್ತುತ ಯಾವ ವಿಚಾರವನ್ನೂ ನಾನು ಮಾತನಾಡುವುದಿಲ್ಲ. ಏನೂ ಮಾತನಾಡಿದರೂ ಈ ಸಂದರ್ಭದಲ್ಲಿ ತಪ್ಪಾಗುತ್ತದೆ. ಮುಖ್ಯಮಂತ್ರಿಗಳ ವಿವೇಚನಾಧಿಕಾರಕ್ಕೆ ಇದನ್ನು ಬಿಟ್ಟಿದ್ದು ತಾವು ಯಾವುದೇ ಹೇಳಿಕೆಯನ್ನೂ ನೀಡುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.