ದೇಶಾದ್ಯಂತ 21ಯುಐಡಿಎಐ ಆಧಾರ್ ಸೇವಾ ಕೇಂದ್ರಗಳ ಕಾರ್ಯನಿರ್ವಹಣೆ

ನವದೆಹಲಿ, ನ 21 : ದೇಶಾದ್ಯಂತ 114 ಸ್ಟ್ಯಾಂಡ್ ಅಲೋನ್ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯುವ ಯೋಜನೆಯ ಭಾಗವಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 21 ಆಧಾರ್ ಸೇವಾ ಕೇಂದ್ರಗಳನ್ನು (ಎಎಸ್ಕೆ) ಕಾರ್ಯರೂಪಕ್ಕೆ ತಂದಿದೆ. 

ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ ಸಕರ್ಾರಗಳು ನಡೆಸುತ್ತಿರುವ 35ಸಾವಿರ ಆಧಾರ್ ದಾಖಲಾತಿ ಕೇಂದ್ರಗಳಿಗೆ ಇವು ಹೆಚ್ಚುವರಿಯಾಗಿವೆ ಎಂದು ಗುರುವಾರ ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. 

ಈ ಕೇಂದ್ರಗಳು ದಿನಕ್ಕೆ 1ಸಾವಿರ ದಾಖಲಾತಿ ಮತ್ತು ನವೀಕರಣ ವಿನಂತಿಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿವೆ ಮತ್ತು ವಾರಾಂತ್ಯಗಳು ಸೇರಿದಂತೆ ವಾರದ ಎಲ್ಲಾ ದಿನಗಳು 0930 ಗಂಟೆಯಿಂದ 1730 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ಮುಚ್ಚಲಾಗುತ್ತದೆ. 

ದೇಶದ 53 ನಗರಗಳಲ್ಲಿ 114 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಯುಐಡಿಎಐ ಯೋಜಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ. 

ಆಧಾರ್ ದಾಖಲಾತಿ ಉಚಿತವಾಗಿದ್ದರೆ, ಆಧಾರ್ಗೆ ಮೊಬೈಲ್ ಸಂಖ್ಯೆಯನ್ನು ಸೇರಿಸುವುದು, ವಿಳಾಸವನ್ನು ನವೀಕರಿಸುವುದು ಮುಂತಾದ ವಿವರಗಳನ್ನು ನವೀಕರಿಸಲು ಕೇವಲ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. 

ಆಧಾರ್ ಸೇವಾ ಕೇಂದ್ರವು ದಕ್ಷ ಟೋಕನ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ, ಇದು ನಿವಾಸಿಗಳಿಗೆ ದಾಖಲಾತಿ ಅಥವಾ ನವೀಕರಣ ಪ್ರಕ್ರಿಯೆಯ ಸಂಬಂಧಿತ ಹಂತಗಳಿಗೆ ತೊಂದರೆಯಿಲ್ಲದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ. 

ಈ ಕೇಂದ್ರಗಳು ಹವಾನಿಯಂತ್ರಿತ ಮತ್ತು ಸಾಕಷ್ಟು ಆಸನ ಸಾಮಥ್ರ್ಯದೊಂದಿಗೆ ವಿನ್ಯಾಸಗೊಳಿಸಲಾಗಿರುವುದರಿಂದ, ಟೋಕನ್ ಒದಗಿಸಿದ ನಿವಾಸಿಗಳು ಸರದಿಯಲ್ಲಿ ನಿಲ್ಲಬೇಕಾದ ಪ್ರಮೇಯ ಇರುವುದಿಲ್ಲ.