ಲೋಕದರ್ಶನ ವರದಿ
ಘಟಪ್ರಭಾ 14: ಮಕ್ಕಳ ಆರೋಗ್ಯ ಎಲ್ಲದರಕಿಂತ ಮುಖ್ಯವಾಗಿದ್ದು ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುತ್ತಿದೆ ಎಂದು ಗೋಕಾಕ ರಾಕೇಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಅನೀಲ ಮೋರೆ ಹೇಳಿದರು.
ಅವರು ಗುರುವಾರ ಸ್ಥಳೀಯ ಜನತಾ ಪ್ಲಾಟನಲ್ಲಿರುವ ಸರ್ಕಾರಿ ಉರ್ದು ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಗೋಕಾಕ ರಾಕೇಟ್ ಕಂಪನಿಯ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಒಂದು ಸಾವಿರ ಲೀಟರ್ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ, ಸಮಾಜದಲ್ಲಿ ಅನಾರೋಗ್ಯಕ್ಕೆ ಕಲುಷಿತ ನೀರು ಸೇವನೆ ಮುಖ್ಯ ಕಾರಣವಾಗಿದೆ. ಮಕ್ಕಳ ಆರೋಗ್ಯ ದೃಷ್ಠಿಯಿಂದ ಇಂದು ನಮ್ಮ ಸಂಸ್ಥೆಯಿಂದ ಸುಮಾರು 4,70,000ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಲೋಕನ್ನವರ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಸ್ಥೆಗಳ ಸಹಕಾರ ಅಗ್ಯತವಾಗಿದೆ. ಗೋಕಾಕ ರಾಕೇಟ್ ಇಂಡಿಯಾ ಕಂಪನಿಯ ಮಾಲೀಕರು ವಿದೇಶಿಗರಾಗಿದ್ದರೂ ಸಹ ಅವರು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಅನೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಅವರು ನಮ್ಮ ಭಾಗದಲ್ಲಿ ನಿರುದ್ಯೋಗ ನಿವಾರಣೆಯ ಜೊತೆಗೆ ಬಡ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಗೋಕಾಕ ರಾಕೇಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಅನೀಲ ಮೋರೆ, ರಾಜೇಶ ಕುಮಾ, ವಿಶ್ವನಾಥ ಕರೆನ್ನವರ, ಅರುಣ ಮುಕಾರಿ, ಬಿ.ಎಸ್.ಬಟ್ಟಿ ಇವರನ್ನು ಶಾಲೆಯ ವತಿಯಿಂದ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯಿಂದ ಬೇರೆ ಕಡೆ ವರ್ಗ ಆದ ಕನ್ನಡ ಶಿಕ್ಷಕಿ ಎಸ್.ಡಿ.ಬಾಗವಾಲೆ ಇವರಿಗೆ ಸತ್ಕರಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲೀಂ ಜಮಾತದ ಮುಖಂಡರಾದ ನೂರ ಪೀರಜಾದೆ, ಗೌಸಖಾನ ಕಿತ್ತೂರಕರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಲ್ತಾಫ ಉಸ್ತಾದ, ಹನಮಂತ ಕರೆವ್ವಗೋಳ, ಪ.ಪಂ ಸದಸ್ಯ ಸಲೀಮ ಕಬ್ಬೂರ, ರಾಜು ಮುಲ್ಲಾ, ಮುಸ್ತಾಕ ಸೌದಾಗರ, ಜಾವೀದ ಕಬ್ಬೂರ, ಹಸನ ಇಂಗಳೆ ಸೇರಿದಂತೆ ಶಿಕ್ಷಕ ವೃತ್ತದವರು ಅನೇಕರು ಇದ್ದರು.
ಕಾರ್ಯಕ್ರಮದ ಶಿಕ್ಷಕಿ ಎಮ್.ಎ ಸಿದ್ದೀಕಿ, ಡಿ.ಕೆ. ಜಮಾದಾರ ನಿರೂಪಿಸಿದರು, ಎಸ್.ಎಮ್. ಬಾಗಸಿರಾಜ ಸ್ವಾಗತಿಸಿದರು, ಎಮ್.ಕೆ. ರೋಣ ವಂದಿಸಿದರು.