ನಲಿಕಲಿ ತರಗತಿಗಳ ಸ್ಮಾರ್ಟ ರೂಮ್ ಉದ್ಘಾಟನೆ

ಲೋಕದರ್ಶನ ವರದಿ

ರಾಯಬಾಗ 27: ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ನೂತನ ಕಾರ್ಯಕ್ರಮಗಳ ಹಮ್ಮಿಕೊಳ್ಳುತ್ತಿರುವುದು ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ವಿದ್ಯಾಥರ್ಿಗಳು ಪಡೆದುಕೊಳ್ಳಬೇಕೆಂದು ತಾ.ಪಂ.ಸದಸ್ಯ ನಾಮದೇವ ಕಾಂಬಳೆ ಹೇಳಿದರು. 

ದಿ.26ರಂದು ತಾಲೂಕಿನ ಜಲಾಲಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.ಪಂ.ಅನುದಾನದಲ್ಲಿ ನಿಮರ್ಿಸಿದ 2 ನಲಿಕಲಿ ತರಗತಿಗಳ ಸ್ಮಾರ್ಟ ರೂಮ್ಗಳನ್ನು ಉದ್ಘಾಟಿಸಿ ಮಾತನಾಡಿದ ಖಾಸಗಿ ಶಾಲೆಗಳಿಗೆ ಸ್ಪಧರ್ೆ ನೀಡಲು ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಸರಕಾರಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದು, ಶಿಕ್ಷಕರು ವಿದ್ಯಾಥರ್ಿಗಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಬೇಕು. ನಲಿಕಲಿ ತರಗತಿಗಳ ಮೂಲಕ ಮಕ್ಕಳು ಆಟದೊಂದಿಗೆ ಪಾಠಕಲಿಯಲು ಅನುಕೂಲವಾಗಿದೆ ಎಂದರು.

ಎಸ್ಡಿಎಮ್ಸಿ ಅಧ್ಯಕ್ಷ ವಸಂತ ಕಾಂಬಳೆ, ಮುಖ್ಯೋಪಾಧ್ಯಾಯ ಬಿ.ಬಿ.ಪವಾರ, ಬಿ.ವಾಯ್.ಮಾನೆ, ರಾಜು ಕಾಂಬಳೆ, ಉತ್ತಮ ಕಾಂಬಳೆ, ಸಂದೀಪ ಕುರಣೆ, ಅಜೀತ ಕಾಂಬಳೆ ಹಾಗೂ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.