ಪ್ರಯೋಗ್ ಪ್ರೊಡಕ್ಷನ್ಸ್ ಉದ್ಘಾಟನೆ

ಬೆಂಗಳೂರು, ಫೆ 07 , ಸಂಗೀತ ನಿರ್ದೇಶಕ ಪ್ರದೀಪ್ ಮುಳ್ಳೂರು ಸಂಸ್ಥಾಪಿತ ಪ್ರಯೋಗ್ ಸ್ಟುಡಿಯೋ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ಪ್ರಯೋಗ್ ‍ಪ್ರೊಡಕ್ಷನ್ಸ್ ಉದ್ಘಾಟನೆಯಾಗಿದೆ. ಚಿತ್ರದ ಶೂಟಿಂಗ್ ಮುಗಿಸಿಕೊಂಡು ಇಲ್ಲಿಗೆ ಬಂದರೆ ಚಿತ್ರದ ಫಸ್ಟ್‌ಕಾಪಿವರೆಗೆ ಎಲ್ಲಾ ಸೌಲಭ್ಯಗಳು ಈ ಸ್ಟುಡಿಯೋದಲ್ಲಿದೆ   ಇದೇ ಸಂದರ್ಭದಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಬರುವ ಉತ್ತಮ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ನೀಡುವ ಸಲುವಾಗಿ ಪ್ರಯೋಗ್ ಪ್ರೊಡಕ್ಷನ್ಸ್ ಆರಂಭಿಸಲಾಗಿದೆ ಈ ಸಂಸ್ಥೆಯಡಿ ಕಾರ್ಯನಿರ್ವಹಿಸಲು ಇಚ್ಚಿಸುವ ಪ್ರತಿಭಾವಂತರು  ಕೂಡಲೇ  ಸಂಪರ್ಕಿಸಬಹುದಾಗಿದೆ ಎಂದು ಪ್ರದೀಪ್ ಮುಳ್ಳೂರು ತಿಳಿಸಿದ್ದಾರೆ ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸತ್ಯಪ್ರಕಾಶ್, ರಾಮ ರಾಮ ರೇ ಖ್ಯಾತಿಯ ನಟರಾಜ,  ಸುಮನ್ ನಗರಕರ್, ನಿರ್ದೇಶಕ ದೀಪಕ್ ಮಧುವನಹಳ್ಳಿ, ಗುರುದೇವ್ ನಾಗರಾಜ, ನಿರ್ಮಾಪಕ   ಮಂಜುನಾಥ್ ದಾಸೇಗೌಡ, ನಿರ್ದೇಶಕ ಆದರ್ಶ ಈಶ್ವರಪ್ಪ, ನಿರ್ದೇಶಕ ಪ್ರದೀಪ್ ವರ್ಮಾ, ನಟ ನಿರ್ದೇಶಕ ವರುಣ್ ಕಟ್ಟಿಮನಿ, ನಾಯಕ ನಟ ಅರವಿಂದ್ ಅಯ್ಯರ್, ನಿಹಾಲ್ ರಾಜ್‌ಪುತ್, ನಿರ್ಮಾಪಕ ರಾಮಚಂದ್ರ ಬಾಬು ಅಲ್ಲದೆ ಇನ್ನೂ ಹಲವಾರು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಪ್ರಯೋಗ್ ಸ್ಟುಡಿಯೋ ಅರಂಭವಾದ ಎರಡು ವರ್ಷಗಳಲ್ಲಿ ನಾಟಕ, ಕಿರುಚಿತ್ರ ಪ್ರದರ್ಶನ ಹೀಗೆ ೪೦೦ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ೩ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ, ೩ ನಾಟಕ ನಿರ್ಮಾಣ, ೪೫ಕ್ಕೂ ಹೆಚ್ಚು ಕಿರುಚಿತ್ರಗಳಿಗೆ ಡಬ್ಬಿಂಗ್, ೨೦ಕ್ಕೂ ಹೆಚ್ಚು ಕಿರುಚಿತ್ರಗಳಿಗೆ ಸಂಗೀತ ನಿರ್ದೇಶನ, ೧೫ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ ಹೆಗ್ಗಳಿಕೆ ಪ್ರಯೋಗ್ ಸ್ಟುಡಿಯೋಗಿದೆ.  ಈಗ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ಅದರ ಮೂಲಕ ಪ್ರತಿವರ್ಷ ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಮೂರು ಚಿತ್ರಗಳ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಪ್ರಿಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ.