ಮುದಕವಿಯಲ್ಲಿ ನೂತನ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನೆ

ಲೋಕದರ್ಶನ ವರದಿ ರಾಮದುರ್ಗ 09: ಮುದಕವಿಯಲ್ಲಿ ಮೂರು ಫೀಡರ್‌ಗಳಿಂದ ಮುದಕವಿ, ತಿಮ್ಮಾಪೂರ, ಖಾನಾಪೂರ, ಉಮತಾರ ಕರಡಿಗುಡ್ಡ, ಆನೇಗುದ್ದಿ ಭಾಗದ ರೈತರು ಸಾರ್ವಜನಿಕರಿಗೆ ವಿದ್ಯುತ್ ವಿತರಣಾ ಕೇಂದ್ರ ಅನುಕೂಲವಾಗಲಿದೆ. ವಿತರಣಾ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ತಾಲೂಕಿನ ಮುದಕವಿ ಗ್ರಾಮದಲ್ಲಿ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿದ 3 ಪೀಡರಗಳನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಟ್ರಾನ್ಸ್‌ ಪಾರ್ಮರ್ ಸುಟ್ಟರೆ 24 ಗಂಟೆಗಳಲ್ಲಿ ಹೊಸ ಟ್ರಾನ್ಸ್‌ ಪಾರ್ಮರ ದೊರಕಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದು, ರೈತರಿಗೆ ಗುಣಮಟ್ಟದ ವಿದ್ಯುತ್ ದೊರೆತರೆ ಕೃಷಿ ಚಟುವಟಿಕೆಗೆ ಸಾಕಷ್ಟು ಅನುಕೂಲವಾಗಲಿದೆ. ದಿನಕ್ಕೆ ಕನಿಷ್ಠ 7 ಗಂಟೆಯಾದರು ಅವರಿಗೆ ವಿದ್ಯುತ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ರೈತರು ಸರಕಾರದ ಯೋಜನೆಗಳ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕೆಂದು ಕರೆ ನೀಡಿದರು. ತಾಲೂಕಿನ 12 ವಿದ್ಯುತ್ ವಿತರಣಾ ಕೇಂದ್ರಗಳ ಮೂಲಕ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಲಹಳ್ಳಿ 220 ಕೆ.ವಿ. ಸ್ಟೆಶನ್ ಗೆ 40 ಕೋಟಿ, 33 ಕೆವಿಯಿಂದ 110 ಕೆವಿ ಗೆ ಮೇಲ್ದರ್ಜಗೆರಿಸಲು ಮುದಕವಿ 11 ಕೋಟಿ, ಬಟಕುರ್ಕಿ 12 ಕೋಟಿ, ಹುಲಕುಂದ 10 ಕೋಟಿ, ಸುರೇಬಾನ 10 ಕೋಟಿ, ಚುಂಚನೂರ 12 ಕೋಟಿ ಹಾಗೂ 110 ಕೆ.ವಿ ಕೇಂದ್ರಗಳಾದ ಸಾಲಾಪೂರ 14 ಕೋಟಿ, ಚಿಪ್ಪಲಕಟ್ಟಿ 14 ಕೋಟಿ, ಚಿಲಮೂರ 16 ಕೋಟಿ, ಪದಮಂಡಿ 13 ಕೋಟಿ, ತೋರಣಗಟ್ಟಿ 11 ಕೋಟಿ, ಮಾಗನೂರ 10 ಕೋಟಿ ಸೇರಿದಂತೆ 173 ಕೋಟಿಯಲ್ಲಿ ವಿದ್ಯುತ್ ಅಭಿವೃದ್ದಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಎಇಇ ಕಿರಣ ಸಣ್ಣಕ್ಕಿ, ಎಇ ಕಾಡರಕೊಪ್ಪ, ನ್ಯಾಯವಾದಿ ಬಿ.ಎನ್‌. ದಳವಾಯಿ, ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಜಾಲಾಪೂರ, ಸದಸ್ಯರಾದ ಸಾವಿತ್ರಿ ಚಿಪ್ಪಲಕಟ್ಟಿ, ಕಾಳಪ್ಪ ಹೂವನ್ನವರ, ಬಸವರಾಜ ಮುದಕಟ್ಟಿ, ಪಿಕೆಪಿಎಸ್ ಅಧ್ಯಕ್ಷ ಎಂ.ಜಿ. ಚಿಕ್ಕೂರಮಠ ಸೇರಿದಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುತ್ತು ಬನ್ನೂರ ಸ್ವಾಗತಿಸಿ, ವಂದಿಸಿದರು.