ಕನರ್ಾಟಕದಲ್ಲಿ ತೆರೆದ ನೀರಿನ ಪಂಜರ ಕೃಷಿ ಯೋಜನೆಯ ಪ್ರಾರಂಭೋತ್ಸವ

ಲೋಕದರ್ಶನ ವರದಿ

 ಕಾರವಾರ: ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಸಿ.ಎಮ್.ಎಫ್.ಆರ್.ಆಯ್ ಕಾರವಾರ ಸಂಶೋಧನಾ ಕೇಂದ್ರ, ಹಾಗೂ  ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಹಾಗೂ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಹೈದರಾಬಾದ್, ಎನ್.ಎಫ್.ಡಿ.ಬಿ.ಯ ಪ್ರಾಯೋಜಕತ್ವದ ತೆರೆದ ನೀರಿನ ಪಂಜರ ಕೃಷಿ ಯೋಜನೆಯ  ಕನರ್ಾಟಕದ ಆಯ್ದ ಜಿಲ್ಲೆಗಳಲ್ಲಿ ತೆರೆದ ನೀರಿನ ಪಂಜರ ಕೃಷಿ ಯೋಜನೆ ಪ್ರಾರಂಭೋತ್ಸವವು ಈಚೆಗೆ  ಜರುಗಿತು. 

ಕಾರವಾರದ ಮೀನುಗಾರಿಕಾ ಹಳ್ಳಿ ನಾಗನಾಥವಾಡಾ ದಲ್ಲಿ ನಡೆದ ಈ ಸಮಾರಂಭದಲ್ಲಿ  ಪ್ರಧಾನ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಇಮೆಲ್ಡಾ ಜೋಸೆಫ  ಪಂಜರಗಳಲ್ಲಿ ಕುರುಡೆ ಮೀನು ಮರಿಗಳನ್ನು ಬಿಡುವದರ ಮೂಲಕ ತೆರೆದ ನೀರಿನ ಪಂಜರ ಕೃಷಿ ಯೋಜನೆಯನ್ನು ಉದ್ಘಾಟಿಸಿದರು.

ಒಟ್ಟೂ 19 ಪಂಜರಗಳು ಸಾಂಕೇತಿಕವಾಗಿ ಈ ಸಂದರ್ಭದಲ್ಲಿ ಮೀನು ಕೃಷಿಕರಿಗೆ ನೀಡಲಾಯಿತು. ಕಾರವಾರದ ಸಿ.ಎಮ್.ಎಫ್.ಆರ್.ಆಯ್. ವಿಜ್ಞಾನಿ ಡಾ. ಜಯಶ್ರೀ ಲೋಕಾ ಇದ್ದರು.