ಮುಂಬೈ, ಡಿ 11 : ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಲ್ಲಿನ ತರಕಾರಿ ಮಾರುಕಟ್ಟೆಯಿಂದ 168 ಕೆಜಿ ಈರುಳ್ಳಿ ಕದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಇಬ್ಬರು ಆರೋಪಿಗಳನ್ನು ಸಾಬಿರ್ ಶೇಖ್ ಮತ್ತು ಇಫರ್ಾನ್ ಶೇಖ್ ಎಂದು ಗುರುತಿಸಲಾಗಿದೆ.
ಡಿ.8ರಂದು ಎರಡು ತರಕಾರಿ ಅಂಗಡಿ ಮಾಲೀಕರು ತಾವು ಸಂಗ್ರಹಿಸಿಟ್ಟಿದ್ದ 112 ಹಾಗೂ 26 ಕೆಜಿ ಈರುಳ್ಳಿ ಕಳುವಾಗಿದೆ ಎಂದು ದೂರು ನೀಡಿದ್ದರು. ಸ್ಥಳದ ಪಂಚನಾಮೆ ನಡೆಸಿದ ಪೊಳಿಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಪತ್ತೆಯಾಗಿದೆ. ತನಿಖೆ ನಡೆಸಿದಾಗಿ ಈ ಇಬ್ಬರು ಆರೋಪಿಗಳು ಈಗಾಗಲೇ ಬೈಸುಲ್ಲಾ, ಸೆವ್ರಿ, ಡೋಂಗ್ರಿ ಹಾಗೂ ವಡಾಲಾ ಮಾರುಕಟ್ಟೆಯಲ್ಲಿ ಕೂಡ ಈರುಳ್ಳಿ ಕಳುವು ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.