ಈರುಳ್ಳಿ ಬೆಲೆ ಮತ್ತೆ ದುಬಾರಿ , ಮತ್ತುಷ್ಟು ಕಣ್ಣೀರು.....!!!

ನವದೆಹಲಿ,  ಡಿ 26,ದೇಶದ ಜನರಲ್ಲಿ ಕಣ್ಣೀರು ತರಿಸಿರುವ ಈರುಳ್ಳಿ  ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಜನ ಈರುಳ್ಳಿ ಹೆಸರು ಕೇಳಿದರೆ ಚಳಿಯಲ್ಲೂ ಬೆವರಿ ಬೆಚ್ಚಿ ಬೀಳುವ ಸನ್ನಿವೇಶ  ನಿರ್ಮಾಣವಾಗಿದೆ.ಗಗನ ಮುಟ್ಟಿದ್ದ  ಈರುಳ್ಳಿ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗಿತ್ತು ಆದರೆ  ಟರ್ಕಿ ಈರುಳ್ಳಿಯೂ ಭಾರತೀಯರಿಗೆ ಕೈಕೊಟ್ಟಿದ್ದು  ಅಲ್ಲಿನ  ಸರಕಾರ ಏಕಾಏಕಿ ಈರುಳ್ಳಿ ರಫ್ತುನ್ನು  ಸ್ಥಗಿತಗೊಳಿಸಲು ನಿರ್ಧರಿಸಿದೆ ಪರಿಣಾಮ ಮತ್ತೆ ದರ ಏರಿಕೆ ಯಾಗುವ ಲಕ್ಷಣವಿದೆ.  ಭಾರೀ ಪ್ರಮಾಣದಲ್ಲಿ ಭಾರತಕ್ಕೆ ಈರುಳ್ಳಿ ರಫ್ತು ಮಾಡಿದ ಕಾರಣ ಟರ್ಕಿಯಲ್ಲೂ ಈರುಳ್ಳಿ ದರ ದಿಢೀರ್ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆ ದೇಶವು ಈರುಳ್ಳಿ ರಫ್ತನ್ನು  ಸದ್ಯದ ಮಟ್ಟಿಗೆ ನಿಲ್ಲಿಸಲು  ತೀರ್ಮಾನಿಸಿದ  ಪರಿಣಾಮ ಭಾರತದಲ್ಲಿ ಈರುಳ್ಳಿಯ ದರ ಶೇ.10-15ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸದ್ಯ ಬೆಂಗಳೂರಿನಲ್ಲಿ ಈರುಳ್ಳಿ ದರ ಕೆ.ಜಿ.ಗೆ 120ರಿಂದ 150 ರೂ. ಇದ್ದರೆ ಕೆಲವು ಕಡೆ ಇದು 180 ಗಡಿಯವರೆಗೂ  ತಲುಪಿದೆ. ದರ ಏರಿಕೆ ನಂತರ  ಟರ್ಕಿ, ಈಜಿಪ್ಟ್ ಹಾಗೂ ಚೀನಾದಿಂದ  ಭಾರತ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ. ಇನ್ನು ಸ್ವಲ್ಲ ಕಾಲ ಇದೇ    ಪರಿಸ್ಥಿತಿ ಮುಂದುವರಿಯಲಿದ್ದು ಜನವರಿ ನಂತರ ದರ ಇಳಿಕೆಯಾಗುವ, ಕೆಲ ಸುಧಾರಣೆಯಾಗುವ  ಸಂಭವಿದೆ ಎನ್ನಲಾಗಿದೆ.