ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸ್ಫೋಟ: ಓರ್ವ ವ್ಯಕ್ತಿ ಸಾವು

ಕೊಲ್ಹಾಪುರ, ಅ 19:   ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಾಹು ಟೋಲ್ ನಾಕಾ ಬಳಿಯ ಫ್ಲೈಓವರ್ ಅಡಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಟ್ರಕ್ ಚಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮೃತನನ್ನು ಜಾಧವ್ವಾಡಿಯ ನ್ಯೂ ಗಣೇಶ್ ಕಾಲೋನಿ ನಿವಾಸಿ ದತ್ತಾತ್ರೇಯ ಗಣಪತಿ ಪಾಟೀಲ್ (56) ಎಂದು ಗುರುತಿಸಲಾಗಿದೆ. ಮೃತರು ಶುಕ್ರವಾರ ರಾತ್ರಿ ಮನೆಗೆ ತೆರಳುತ್ತಿದ್ದಾಗ, ಶಾಹು ಟೋಲ್ ನಾಕಾ ಬಳಿ ತನ್ನ ವಾಹನವನ್ನು ನಿಲ್ಲಿಸಿದ್ದಾರೆ.  ಈ ವೇಳೆ ಇದ್ದಕ್ಕಿದ್ದಂತೆ ಫ್ಲೈಓವರ್ ಸೇತುವೆಯ ಕೆಳಗೆ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಾಟೀಲ್ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಮೊದಲೇ ಕೊನೆಯುಸಿರೆಳೆದರು ಎನ್ನಲಾಗಿದೆ  ಮೃತನ ಸಹವರ್ತಿ ಆಶಿಶ್ ಚೌಗುಲೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟಕ್ಕೆ ಕಾರಣ ಇನ್ನೂ ಪತ್ತೆಯಾಗಿಲ್ಲ.  ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ