ಶಿಕ್ಷಣದ ಜ್ಞಾನಾರ್ಜನೆಗೆ ತ್ಯಾಗ ಮಾಡಬೇಕು ಆಗ ಮಾತ್ರ ಅಂಬೇಡ್ಕರ್ ಆಗಲು ಸಾದ್ಯ - ಅನ್ನಪೂರ್ಣ ಸಂಗಳದ
ಹಾವೇರಿ 26 : ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಬೇಕಾದರೆ ಪಂಚಜ್ಙಾನೆಂದ್ರಗಳನ್ನು ತಿಳಿದುಕೊಳ್ಳಬೇಕು, ಜ್ಞಾನ, ಜಾಣ್ಮೆ, ತಾಳ್ಮೆ, ಬುದ್ದಿವಂತ ಶಿಕ್ಷಣ ಪಡೆಯಬೇಕು ಆಗ ಮಾತ್ರ ಭಾರತ ರತ್ನ ಡಾಽಽ ಬಿ.ಆರ್.ಅಂಬೇಡ್ಕರ್ ಅಂತಾ ದೊಡ್ಡ ವ್ಯಕ್ತಿಗಳಾಗಲು ಸಾದ್ಯಾವಾಗತ್ತದೆ ಅನ್ನಪೂರ್ಣ ಸಂಗಳದ ಹೇಳಿದರು.ನಗರದ ಶ್ರೀಶಕ್ತಿ ತೆರೆದ ತಂಗುದಾಣದಲ್ಲಿ ಏರಿ್ಡಸಿದ 76ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಜ್ಞಾನಾರ್ಜನೆಗೆ ತ್ಯಾಗ ಮಾಡಬೇಕು. ಆಸ್ರಮದಲ್ಲಿ ಕಲಿತು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು. ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಹಾಂತೇಶ್ ಮೂಲಿಮನಿ, ಮಹಾತ್ಮ ಗಾಂಧಿಜೀ ಅವರಂತೆ ಸತ್ಯದ ಮಾರ್ಗದಲ್ಲಿ ನಡೆಯಬೇಕು. ಸದಾಕಾಲವೂ ನಿಮ್ಮ ಜೀವನ ಆಸನ ಮುಖಿಯಾಗಿರಲಿ ಎಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವು ನೀಡಿರುವ ಮಕ್ಕಳ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು. ಶಿಕ್ಷಣ ಉದ್ಯೋಗ ಮೂಲಭೂತ ಹಕ್ಕಾಗಬೇಕು. ಶಿಕ್ಷಣ ಎಂಬುದು ಹುಲಿಯಾ ಹಾಲಿದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳಿದ ಅಂಬೇಡ್ಕರ್ ಅವರು ಸಂದೇಶವನ್ನು ಅಳವಡಿಸಕೊಳ್ಳಬೇಕು. ಶಿಕ್ಷಣ ಹಕ್ಕು ಕಾಯಿದೆ ( ಖರಣ ಖಿಠ ಇಜಣಛಿಚಿಣಠ 2009) ಸಮರ್ಕವಾಗಿ ಜಾರಿಯಾಗಬೇಕು ಶಿಕ್ಷಣ ದಿಂದ ವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ, ಸಮಾನಾಂತರ ಶಿಕ್ಷಣ ಸಿಗಬೇಕು ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಆಶಯಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಹೇಳಿದರು. ಶ್ರೀಶಕ್ತಿ ತೆರೆದ ತಂಗುದಾಣದ ಮುಖ್ಯಸ್ಥರಾದ ಪುಟ್ಟಪ್ಪ ಹರವಿ ಅವರು ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧನೆ ಮಾಡಿ ಮಾತನಾಡಿದರು.ತಂಗುದಾಣದ ವಿದ್ಯಾರ್ಥಿಗಳಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಡುಗಳನ್ನು ಹಾಗೂ ದೇಶ, ಕನ್ನಡಾಭಿಮಾನದ ವಿವಿಧ ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಮಹೇಶ್ ಹೆಡಿಯಾಲ್, ಸಂಸ್ಥೆಯ ಸಿಬ್ಬಂದಿ ಪಾರ್ವತಿ ಎಲ್ , ಲಕ್ಷ್ಮಿ ಸಿಂಗಣ್ಣನವರ, ದೀಪಾ ಪಿ ಹೆಚ್, ಉಮಾ ವಾಯ ಹೆಚ್, ಪವಿತ್ರಾ ವಿ ವಿ, ವಿದ್ಯಾರ್ಥಿಗಳಾದ ರಾಜು ಕುಂಚಿಕೊರವರ, ಗಣೇಶ ಕುರಿ, ಅಣ್ಣಪ್ಪ ಹುಲ್ಮನಿ, ಆಕಾಶ ಕೆ, ಲಿಂಗರಾಜ ಗುಡ್ಡದಮತ್ತಿಹಳ್ಳಿ, ಮನೋಜ್ ಯರೇಶಿಮಿ, ಚಂದ್ರು ಜಾಡರ, ವಿನಾಯಕ ಮಾನ್ವಿ, ಶಿವಪ್ಪ ದುರಮುರುಗಿ, ರಾಜೇಶ್ ಬಾದಗಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.