ಒನಕೆ ಓಬವ್ವ ದೇಶ ಭಕ್ತಿಯಿಂದ ಜಗತ್ತಿನೆದುರು ಪ್ರಖ್ಯಾತಿ ಪಡೆದಿದ್ದಾರೆ: ಬಿದರಿ
Onake Obavva has gained fame worldwide for his patriotism: Bidari
ಲೋಕದರ್ಶನ ವರದಿ
ಜಮಖಂಡಿ 14: ಓಬವ್ವ ಅವರು ಯಾವುದೇ ರಾಜವಂಶಸ್ಥೆಯಲ್ಲ, ಯಾವುದೇ ರಾಜ ಪರಂಪರೆಯಲ್ಲ ಹುಟ್ಟಿದವರಲ್ಲ. ಅವರು ಒಬ್ಬ ಸಾಮಾನ್ಯ ಹೆಣ್ಣುಮಗಳು. ಆದರೆ ತಮ್ಮ ಧೈರ್ಯ, ಶೌರ್ಯ ಮತ್ತು ದೇಶ ಭಕ್ತಿಯಿಂದ ಅವರು ಜಗತ್ತಿನೆದುರು ಪ್ರಖ್ಯಾತಿ ಪಡೆದು ಧೈರ್ಯ. ಶೌರ್ಯದ ಸಂಕೇತವಾಗಿದ್ದಾರೆ ಅವರ ಸಾಹಸ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ, ಎಂದು ದ್ವಿತೀಯ ದರ್ಜೆ ತಹಸಿಲ್ದಾರ ಕೆ.ವಾಯ್ ಬಿದರಿ ಹೇಳಿದರು.
ನಗರದ ತಾಲೂಕು ಆಡಳಿತ ಭವನದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ ಮಾತನಾಡಿ ಅವರು, ನಾವು ಇತಿಹಾಸದಲ್ಲಿ ಸಾಮಾನ್ಯವಾಗಿ ರಾಜರ ಕಥೆಗಳನ್ನು ಓದುತ್ತೇವೆ, ಆದರೆ ಒನಕೆ ಓಬವ್ವ ಅವರಂತಹ ಸಾಮಾನ್ಯ ಮಹಿಳೆಯ ಕಥೆ ಒಂದು ಯುಗದ ಪ್ರೇರಣೆಯಾಗಿದೆ. ಚಿತ್ರದುರ್ಗದ ಕೋಟೆಯ ರಕ್ಷಣೆಯಲ್ಲಿ ಅವರು ಪ್ರದರ್ಶಿಸಿದ ಧೈರ್ಯ ಅಪ್ರತಿಮ. ಶತ್ರುಗಳು ಕೋಟೆಯೊಳಗೆ ಪ್ರವೇಶಿಸದಂತೆ ಒನಕೆಯಿಂದಲೇ ಪ್ರತಿರೋಧಿಸಿ ರಾಜ್ಯದ ಗೌರವವನ್ನು ಕಾಪಾಡಿದರು. ಅವರ ಧೈರ್ಯ ಕೇವಲ ಒಂದು ಮಹಿಳೆಯ ಶಕ್ತಿ ಅಲ್ಲ, ಅದು ದೇಶಪ್ರೇಮದ ಮಾದರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಒನಕೆ ಓಬವ್ವ ಅವರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯನ್ನು ಆಧರಿಸಿ ವೇಶಭೂಷಣ ಹಾಗೂ ಅಭಿನಯ ನಡೆಸಿಕೊಟ್ಟರು.ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ಸೇರಿದಂತೆ ನ್ಯಾಯವಾದಿಗಳು, ವಿದ್ಯಾರ್ಥಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 