76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಗಮನ ಸೆಳೆದ ಪಥ ಸಂಚಲನ

On the 76th Republic Day celebrations, honoring the achievers, attention-grabbing path movement

76ನೇ  ಗಣರಾಜ್ಯೋತ್ಸವ ದಿನಾಚರಣೆಯಲ್ಲಿ  ಸಾಧಕರಿಗೆ ಸನ್ಮಾನ, ಗಮನ ಸೆಳೆದ ಪಥ ಸಂಚಲನ 

ಗದಗ   26: ಗದುಗಿನ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.  ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ ಕಮಾಂಡರ್ ಶಂಕರಗೌಡ ಚೌದ್ರಿ  ಇವರು ನೇತೃತ್ವವನ್ನು  ಅವರು ವಹಿಸಿದ್ದರು.  ಜಿಲ್ಲಾ  ಸಶಸ್ತ್ರ ಮೀಸಲು ಪೊಲೀಸ ಪಡೆಯ ನೇತೃತ್ವವನ್ನು  ವಿಜಯಕುಮಾರ್ ಜಿ ವಹಿಸಿದ್ದರು.  ನಾಗರಿಕ ಪೊಲೀಸ ಪಡೆಯ ನೇತೃತ್ವವನ್ನು ಗದಗ ಗ್ರಾಮೀಣ ಘಟಕದ ಪಿಎಸ್‌ಐ ಕಿರಣಕುಮಾರ್, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್‌.ವಸ್ತ್ರದ,  ಅಬಕಾರಿ ದಳದ ನೇತೃತ್ವವನ್ನು ಶ್ರೀಮತಿ ವಿಜಯಲಕ್ಷ್ಮೀ,  ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಜಿ.ಕೆ,  ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು  ಡೆಪ್ಯೂಟಿ ಆರ್‌.ಎಫ್‌.ಓ ಸಚಿನ ಬಿಸನಳ್ಳಿ,  ಎನ್‌.ಸಿ.ಸಿ. ಬಾಯ್ಸ್‌ ದಳದ ನೇತೃತ್ವವನ್ನು ಹುಲಕೋಟಿಯ ರಾಜರಾಜೇಶ್ವರಿ ಪ್ರೌಢಶಾಲೆಯ ರಿಯಾನ್ ಅಹ್ಮದ್,  ಸಾಮಾನ್ಯ ವಿಭಾಗದ  ನೇತೃತ್ವವನ್ನು   ವಿ.ಡಿ.ಎಸ್‌.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ  ಕುಮಾರಿ ನೀಲಮ್ಮ ,ಭಾರತ ಸೇವಾ ದಳದ ನೇತೃತ್ವವನ್ನು  ಎಸ್‌.ಎಂ.ಕೃಷ್ಣಾ ನಗರದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ  ಕುಮಾರಿ ಸ್ನೇಹಾ,   ಬೆಟಗೇರಿಯ ಸೇಂಟ್‌ಜಾನ್ ಪ್ರೌಢಶಾಲೆಯ ಸಾಮಾನ್ಯ ವಿಭಾಗದ ನೇತೃತ್ವವನ್ನು ಕುಮಾರ ಸೋಮಶೇಖರ, ಮಾಜಿ ಸೈನಿಕರ ತಂಡದ ನೇತೃತ್ವವನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ  ಬಸಲಿಂಗಪ್ಪ ಮುಂಡರಗಿ, ಎನ್‌.ಸಿ.ಸಿ.ಗರ್ಲ್ಸ ತಂಡದ ನೇತೃತ್ವವನ್ನು ನಗರದ ಸಿ.ಎಸ್‌.ಪಾಟೀಲ ಪ್ರೌಢಶಾಲೆಯ ಕು. ದಿವ್ಯಾ, ಶಾಲೆಯ ಸ್ಕೌಟ್ಸ್‌ ವಿಭಾಗದ ನೇತೃತ್ವನ್ನು ನಗರದ ಕೆ.ಎಲ್‌.ಇ. ಸಿ.ಬಿ.ಎಸ್‌.ಇ ಪ್ರಾಥಮಿಕ ಕು. ಸಾಯಿ ಸಮರ್ಥ,  ಸೇವಾದಳದ  ನೇತೃತ್ವವನ್ನು ಎಸ್‌.ಎಂ.ಕೃಷ್ಣಾ ನಗರದ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಕು. ಚೈತ್ರಾ, ಸಾಮಾನ್ಯ ತಂಡದ ನೇತೃತ್ವವನ್ನು ನಗರದ ಸಿ.ಎಸ್‌.ಪಾಟೀಲ ಬಾಲಕಿಯರ ಪ್ರೌಢಶಾಲೆಯ ಕು. ರಜಿಯಾಬೇಗಂ, ಕೆ.ಎಸ್‌.ಆರ್‌.ಟಿ.ಸಿ.ನೇತೃತ್ವನವನ್ನು ಹುಬ್ಬಳ್ಳಿಯ ವಾ.ಕ.ರ.ಸಾ. ಭಧ್ರತಾ ಹಾಗೂ ಜಾಗೃತದಳದ ಎನ್‌.ಕೆ.ಲಮಾಣಿ ಅವರುಗಳು  ವಹಿಸಿದ್ದರು. ಪಥ ಸಂಚಲನದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಸಚಿವರು ಸನ್ಮಾನಿಸಿದರು. 76 ನೇಯ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ  ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.   

 ಸನ್ಮಾನಿತರು:   

ಸಾಂಸ್ಕೃತಿಕ, ಜಾನಪದ, ಶಿಲ್ಪಕಲೆ, ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರ   

2024 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ ನಗರದ ರೇಣುಕಾ ಹಾಸ್ಪಿಟಲ್ ನ ಡಾ. ಜಿ.ಬಿ.ಬೀಡನಾಳ, 2024 ರ ಸುವರ್ಣ ಸಂಭ್ರಮ -50 ರ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ  ಜಿಲ್ಲೆಯ ಕಳಸಾಪುರದ ಸುರೇಶ ಠಾಕರ​‍್ಪ ಲಮಾಣಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಕೊಡಮಾಡುವ 2022 ರ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ ಲಕ್ಕುಂಡಿಯ ವೀರಭದ್ರ​‍್ಪ ಕಾಳಪ್ಪ ಕವಲೂರು, ಪ್ರತಿ ವರ್ಷ ಮಲ್ಲಿಕಾರ್ಜುನ ಮನ್ಸೂರ ಟ್ರಸ್ಟ್‌ ಧಾರವಾಡ ವತಿಯಿಂದ ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದಿದ್ದಕ್ಕಾಗಿ ಕೆ.ಕೆ.ಪಿ.ಪಿ.ಜಿ ಸಂಗೀತ ಮಹಾವಿದ್ಯಾಲಯದ ಪಂ.ವೆಂಕಟೇಶ ಅಲ್ಕೋಡ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ನಗರದ ಖ್ಯಾತ ವಯೋಲಿನ ವಾದಕರಾದ ನಾರಾಯಣ ಹಿರೇಕೊಳಜಿ, ಸರ್ಕಾರಿ ಸೇವೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಎಚ್‌.ಆರ್‌.ಪಾಟೀಲ, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲ್ವಿಚಾರಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ನಗರದ ಜಿಲ್ಲಾ ಆಸ್ಪತ್ರೆಯ ಮಲ್ಲಪ್ಪ ಭಾವಿಮನಿ ಅವರನ್ನು ಸನ್ಮಾನಿಸಲಾಯಿತು.   

ಮಾಧ್ಯಮ ವಿಭಾಗ : ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಕಿತ್ತೂರ ಕರ್ನಾಟಕ ದಿನಪತ್ರಿಕೆಯ ವರದಿಗಾರರು, ಹಾಗೂ  ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷರಾದ ರಾಜು ಹೆಬ್ಬಳ್ಳಿ, ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಶಿವಾನಂದ ಹಿರೇಮಠ,  ಇಂಡಿಯನ್ ಎಕ್ಸ್‌ ಪ್ರೆಸ್ ದಿನಪತ್ರಿಕೆಯ ವರದಿಗಾರರಾದ  ರಘೋತ್ತಮ ಕೊಪ್ಪರ, ಪ್ರಜಾ ಟಿವಿ ಜಿಲ್ಲಾ ವರದಿಗಾರರಾದ ಶರಣು ದೊಡ್ಡೂರು, ಸುವರ್ಣ ಟಿವಿ ಕ್ಯಾಮರಾಮನ್ ಲಿಂಗರಾಜ್ ಎಂ.ಆರ್‌., ನವೋದಯ ದಿನಪತ್ರಿಕೆಯ ವರದಿಗಾರರಾದ ಹನುಮಾನ್ ಸಿಂಗ್ ಜಮಾದಾರ, ರೋಣ ತಾಲೂಕಿನ ವಿಜಯವಾಣಿ  ದಿನಪತ್ರಿಕೆಯ ವರದಿಗಾರರಾದ ಬಸವರಾಜ ಪಟ್ಟಣಶೆಟ್ಟಿ, ನರಗುಂದ ತಾಲೂಕಿನ ವಿಜಯ ಕರ್ನಾಟಕ ದಿನಪ್ರಿಕೆಯ  ವರದಿಗಾರರಾದ ಸಿ.ಬಿ.ಸುಬೇದಾರ, ಲಕ್ಷ್ಮೇಶ್ವರ ತಾಲೂಕಿನ ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾದ ನಾಗರಾಜ ಹಣಗಿ, ಮುಂಡರಗಿ ತಾಲೂಕಿನ ನಾಗರಿಕ ದಿನಪತ್ರಿಕೆ ಕವಿ ಬಂಕಾಪುರ,  ಶಿರಹಟ್ಟಿ ತಾಲೂಕಿನ ಉದಯವಾಣಿ ವರದಿಗಾರರಾದ ಜಿ.ಬಿ.ಹೆಸರೂರ, ಮುಳಗುಂದದ ನವೋದಯ ದಿನಪತ್ರಿಕೆಯ ವರದಿಗಾರರಾದ ಮಹೇಶ ನೀಲಗುಂದ,  ಗಜೇಂದ್ರಗಡ ತಾಲೂಕಿನ ಕನ್ನಡ ಪ್ರಭ ದಿನಪತ್ರಿಕೆಯ ವರದಿಗಾರರಾದ ಎಸ್‌.ಎಂ. ಸೈಯದ್ ಅವರನ್ನು ಸನ್ಮಾನಿಸಲಾಯಿತು.   

ಶಿಕ್ಷಣ, ಸ್ಪರ್ಧೆ ಮತ್ತು ಸಾಮಾಜಿಕ ಕ್ಷೇತ್ರ : ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಕ್ಕಾಗಿ ಲಕ್ಷ್ಮೇಶ್ವರದ ಕರಿಯಪ್ಪ ನೀಲಪ್ಪ ಶಿರಹಟ್ಟಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಹುಲಕೋಟಿಯ ರಾಜೇಶ್ವರ ವಿದ್ಯಾನಿಕೇತನ ಸಂಸ್ಥೆಯ ರಾಘವೇಂದ್ರ ಶೆಟ್ಟಿ,  ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇವರಿಂದ ರಾಷ್ಟ್ರೀಯ ಗ್ರಂಥಾಲಯ, ಸಪ್ತಾಹ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪಡೆದಿದ್ದಕ್ಕಾಗಿ ಭಗವಂತಪ್ಪ ತಾರಿಕೊಪ್ಪ, ಬೆಂಗಳೂರಿನಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪಡೆದ ವಿಜಯ ಕುಮಾರ್ ಎಚ್‌.ಬಣಕಾರ, ಮಹಿಳಾ ಮತ್ತುಮಕ್ಕಳ ಇಲಾಖೆ ಹಾಗೂ ಬಾಲ ಭವನ ಸೊಸೈಟಿ ಇವರುಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಕಲಾಶ್ರೀ ಪ್ರಶಸ್ತಿ ಪಡೆದಿದ್ದಕ್ಕಾಗಿ ಕು. ಕೃಷ್ಣಪ್ರಿಯಾ ಆನಂದ ಬದಿ,  ಎನ್‌.ಸಿ.ಸಿ ಕ್ಯಾಡೆಟ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕು. ಹನುಮಂತರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.  

ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾ ಪಟುಗಳ ವಿವರ:  

ರಾಜ್ಯ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಕು.ಆಶಿಫ್ ಶೇಖಸಾಬ ನದಾಫ್ , ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಶಾಹೀನ ಗುಲಾಂ ಸಾಬ ನದಾಫ್ , ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಮಹಮ್ಮದ ರಫೀಕ್ ಎನ್ ರೇವಡಿಗಾರ,  ಅಂತರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ ಮುತ್ತು ರಮೇಶ ಭಾವಿ,   ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿರುವ ವಿನುತ ಅಕ್ಕಸಾಲಿಗ, ಬೆಳಗಾವಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ನೀರೀಕ್ಷಿತಾ ಡೊಳ್ಳಿನ, ಓಡಿಸ್ಸಾ ರಾಜ್ಯದ ಪುರಿಯಲ್ಲಿ ನಡೆದ 29 ನೇ ರಾಷ್ಟ್ರೀಯ ರೋಡ ಸೈಕ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ನಿಖಿಲರೆಡ್ಡಿ ತೇರಿನಗಡ್ಡಿ , ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಸ್ಕೂಲ್ ಗೇಮ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಚಿನ್ಮಯ ಎಸ್‌. ಕಪ್ಪತನವರ ಅವರನ್ನು ಸನ್ಮಾನಿಸಲಾಯಿತು.  

ಉಪಸ್ಥಿತಿ: ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ,  ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.