ಲೋಕದರ್ಶನ ವರದಿ
ಇಂಡಿ 20: ತಾಲೂಕಿನ ಸಾತಲಗಾಂವ ಪಿ.ಆಯ್ ಗ್ರಾಮದ ಶ್ರೀಶಿವಯೋಗೆಶ್ವರ ದೇವಸ್ಥಾನದಲ್ಲಿ ದಿನಾಂಕ 23-12-2018 ರಂದು ಮುಂಜಾನೆ 11-00 ಗಂಟೆಗೆ ಶ್ರೀಶಿವಯೋಗೆಶ್ವರ ಇಂಡಿ ತಾಲೂಕಿನ ಪಂಚಮಸಾಲಿ ಸಮಾಜದ ವತಿಯಿಂದ ರಾಷ್ಟ್ರ ಮಾತೆ ಕಿತ್ತೂರ ರಾಣಿ ಚೆನ್ನಮ್ಮನವರ 240 ನೇ ಜಯಂತೋತ್ಸವ -195 ನೇ ವಿಜಯೋತ್ಸವ ಹಾಗೂ ವಿಶ್ವ ರೈತ ದಿನಾಚರಣೆ ಹಾಗೂ 2017-18 ನೇ ಸಾಲಿನಲ್ಲಿ ಎಸ್.ಎಸ್.ಎಲ್. ಸಿ , ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಪಡೆದ ವಿಧ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ ಕೂಡಲಸಂಗಮ ಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯಸ್ವಾಮಿಗಳು ವಹಿಸಲಿದ್ದಾರೆ.
ಅಧ್ಯಕ್ಷತೆ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ವ್ಹಿ.ಎಚ್.ಬಿರಾದಾರ, ಚೆನ್ನಮ್ಮಸ್ಮರಣೆ ಎಸ್.ವಿ.ಪಾಟೀಲ , ರೈತ ಸ್ಮರಣೆ ಪತ್ರಕರ್ತ ಅಮರೇಶ ನಾಗೂರ, ಮುಖ್ಯ ಅತಿಥಿಗಳಾಗಿ ವಿಜಯಪೂರ ಪಂಚಮಸಾಲಿ ಘಟಕದ ಅಧ್ಯಕ್ಷ ಬಿ.ಎಂ ಪಾಟೀಲ, ಪಂಚಮಸಾಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾದೇವಿ ಗೋಕಾಕ, ಶಂಕರಗೌಡ ಬಿರಾದಾರ, ಎಸ್.ಆರ್.ಬುಕ್ಕಣ್ಣಿ, ವಿಶ್ವನಾಥ ಬಸಲಿಂಗಪ್ಪ ಕುರಡಿ, ಮುರಗೆಪ್ಪ ಹಡ್ಲಗೇರಿ, ಮಹಾಂತೇಶ ಜಾಲಗೇರಿ ಸೇರಿದಂತೆ ಪಂಚಮಸಾಲಿ ಸಮಾಜದ ಕುಲ ಭಾಂದವರು ಹಾಗೂ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶ್ವೀಗೋಳಿಸಬೇಕು. ಎಸ್.ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳು ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಆದರ್ಶ ಮೇಡಿಕಲ್ ಸ್ಟೋರ್ ಹಾಗೂ ಅಮರ್ ಅಪ್ಟೀಕಲ್ ಅಂಗಡಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ವ್ಹಿ.ಎಚ್.ಬಿರಾದಾರ , ಸುಧಾಕರಗೌಡ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.