ಲೋಕದರ್ಶನ ವರದಿ
ಗದಗ 08: ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ ಇವರ ಆಶ್ರಯದಲ್ಲಿ ದಿ. 12ರಂದು ಉಚಿತ ಪ್ರಸಾದ ನಿಲಯ ಉದ್ಘಾಟನೆ, ರಾಜ್ಯ ಸಂಘದ ಬೆಳ್ಳಿ ಹಬ್ಬ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅದೆ ದಿನಾಂಕದಂದು ಬೆಳಗಿನ 6ಘಂಟೆಯಿಂದ 9ಘಂಟೆವರೆಗೆ ಸಮಾಜ ಬಾಂಧವರಿಗೆ ಪೂಜ್ಯ ಜಗದ್ಗುರು ವಚನಾನಂದ ಮಹಾ ಸ್ವಾಮಿಗಳಿಂದ ಲಿಂಗ ದೀಕ್ಷೆ ಲಿಂಗಧಾರಣ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲರೂ ಭಾಗವಹಿಸಲು ಪತ್ರಿಕಾ ಗೋಷ್ಠಿ ಮುಖಾಂತರ ತಿಳಿಸಿದರು. ಅಮರೇಶ್ವರ ಗುಂ ಬೂದುಹಾಳ ಅದ್ಯಕ್ಷರು ಜಿಲ್ಲಾ ಘಟಕ, ಎಸ್ ವಿ ನೇಗಲಿ ರಾಜ್ಯ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದಶರ್ಿ, ಸಿಬಿ ಸೊಲಬಣ್ಣವರ ಜಿಲ್ಲಾ ಪ್ರಧಾನ ಕಾರ್ಯದಶರ್ಿ, ಬಿ ಎಸ್ ಕರಿಗೌಡ್ರ ಜಿಲ್ಲಾ ಉಪಾದ್ಯಕ್ಷರು, ಎಂ ಬಿ ದೇಸಾಯಿ, ಕುಬೇರಗೌಡ ಮಲ್ಲಾಪೂರ, ಮತ್ತು ಗದಗ ತಾಲ್ಲೂಕು ಅಧ್ಯಕ್ಷರು ಇತರ ತಾಲೂಕಿನ ಅಧ್ಯಕ್ಷರು, ಜಿಲ್ಲಾ ಸಹಕಾರ್ಯದಶರ್ಿಗಳು, ಸದಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.