ಹುಬ್ಬಳ್ಳಿ ದೈವಜ್ಞ ಬ್ರಾಹ್ಮಣ ಸಮಾಜದಿಂದ
ಹುಬ್ಬಳ್ಳಿ 22: ವಾಣಿಜ್ಯ ನಗರಿಯಾದ ಹುಬ್ಬಳ್ಳಿಯ ದೈವಜ್ಞ ಬ್ರಾಹ್ಮಣ ಸಮಾಜದ ದೈವಜ್ಞ ವಿದ್ಯಾವರ್ಧಕ ಸಂಘದ, ದೈವಜ್ಞ ಯುವ ವೇದಿಕೆ”ಯ ಸಂಯುಕ್ತಾಶ್ರಯದಲ್ಲಿ ಪ.ಪೂ. ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದೊಂದಿಗೆ ಹಾಗೂ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಮಾಜದ ದೈವಜ್ಞ ಭವನದಲ್ಲಿ "ದೈವಜ್ಞ ಯುವ ವೇದಿಕೆ”ಯಲ್ಲಿ ಇದೇ ದಿ. 22 ಮತ್ತು 23 ಜನೇವರಿ 2025 ರಂದು ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ, ಧಾರ್ಮಿಕ ಶ್ರೇಯೋಭೀವೃದ್ಧಿಗಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾರಾಧನೆ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಸಾಧಕರಿಗೆ ಸತ್ಕಾರ ಸಮಾರಂಭದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆ ಪ್ರಯುಕ್ತ ಆ ಪ್ರಯುಕ್ತ ದಿ. 22ರ ಬುಧವಾರ ಸಂಜೆ 4:00 ಫಂಟೆಗೆ ಶ್ರೀಗಳ ಪುರ್ರವೇಶ, ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಹತ್ತಿರದಿಂದ ಬೈಕ್ ರಾಲಿ ಮುಖಾಂತರ ಶ್ರೀಗಳ ಭವ್ಯ ಸ್ವಾಗತ. ದೈವಜ್ಞ ಭವನದಲ್ಲಿ ಪೂರ್ಣ ಕುಂಭದೊಂದಿಗೆ ಶ್ರೀಗಳನ್ನು ಸ್ವಾಗತಿಸುವುದು ಬೈಕ ರಾಲಿ ಭಾಗವಹಿಸುವ ಸಮಾಜ ಭಾಂದವರು ಮಧ್ಯಾಹ್ನ 3:30 ಕ್ಕೆ ಉಪಸ್ಥಿತರಿರಬೇಕು , ಬೀಳೆ ಶರ್ಟ ಯಾವದೇ ಬಣ್ಣದ ಪ್ಯಾಂಟ್ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬರಬೇಕಾಗಿ ವಿನಂತಿಲಾಗಿರುತ್ತದೆ.
ಈ ಒಂದು ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಸಮಾಜ ಭಾಂಧವರು ಸಹ ಕುಟುಂಬ ಪರಿವಾರ ಸಹಿತ ಉಪಸ್ಥಿತರಿದ್ದು ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಲು ಈ ಮೂಲಕ ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿಜಯ ವೆರ್ಣೇಕರ್ ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ವಿನಂತಿಸಲಾಗಿರುತ್ತದೆ.
ಈ ಸಂಧರ್ಭದಲ್ಲಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ದೈವಜ್ಞ ವಿದ್ಯಾವರ್ಧಕ ಸಂಘ, ದೈವಜ್ಞ ಮಹಿಳಾ ಮಂಡಳ, ದೈವಜ್ಞ ಬ್ರಾಹ್ಮಣ ಯುವಕ ಸಂಘ ಹಾಗೂ ಕಾರ್ಯಕ್ರಮದ ಸೇವಾ ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗಾಗಿ ದೈವಜ್ಞ ವಿದ್ಯಾವರ್ಥಕ ಸಂಘದ ಅಧ್ಯಕ್ಷರಾದ ವಿಜಯ್ ವೆರ್ಣೇಕರ ಕಾರ್ಯದರ್ಶಿಗಳಾದ ಉದಯ ರೇವಣಕರ ಇವರನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿರುತ್ತದೆ.