ಯೋಜನೆಯಂತೆ ಫುಕುಶಿಮಾದಲ್ಲಿ ಒಲಿಂಪಿಕ್ ಜ್ಯೋತಿ ರಿಲೇ ಆರಂಭ

ಟೋಕಿಯೊ, ಮಾ 23,ಜಾಗತಿಕ ಪಿಡುಗು ಕೊರೊನಾ ವೈರಸ್ ಸೋಂಕಿನ ನಡುವೆಯೂ ಯೋಜನೆಯಂತೆ ಬೇಸಿಗೆ ಒಲಿಂಪಿಕ್ಸ್ ನ ಒಲಿಂಪಿಕ್ ಜ್ಯೋತಿ ರಿಲೇಯ ಮೊದಲ ಚರಣವನ್ನು ಗುರುವಾರ (ಮಾರ್ಚ್ 26) ಫುಕುಶಿಮಾದಿಂದ  ಆರಂಭಿಸಲಾಗುವುದು ಎಂದು ಜಪಾನ್ ಒಲಿಂಪಿಕ್ ಸಚಿವ ಸೀಕೊ ಹಶಿಮೊಟೊ ಸೋಮವಾರ ತಿಳಿಸಿದ್ದಾರೆ.ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಆಯೋಜಿಸಲು ಕಠಿಣ ಸಂದರ್ಭ ಎದುರಾದರೆ ಕೂಟಗಳನ್ನು ಮುಂದೂಡುವ ಬಗ್ಗೆ ಜಪಾನ್ ಪ್ರಧಾನಿ ಸುಳಿವು ನೀಡಿದ ಹೊರತಾಗಿಯೂ, ಹಶಿಮೊಟೊ ಒಲಿಂಪಿಕ್ ಜ್ಯೋತಿ ರಿಲೇಯ ಜಪಾನ್ ಚರಣದ ಆರಂಭವನ್ನು ಖಚಿತಪಡಿಸಿದ್ದಾರೆ. ಫುಕುಶಿಮಾದಿಂದ ಆರಂಭವಾಗಲಿರುವ ಒಲಿಂಪಿಕ್ ಜ್ಯೋತಿ  ರಿಲೇ  ಹಲವು ದೇಶಗಳಲ್ಲಿ 121 ದಿನ ಸಂಚರಿಸಿ ಟೋಕಿಯೊಗೆ ಬಂದು ಸೇರಲಿದೆ.