ಬೆಂಗಳೂರು, ಮೇ 12 ,ಮೇಕ್ಇನ್ ಇಂಡಿಯಾ ಪರಿಕಲ್ಪನೆ ಉದ್ದೇಶಿತ ಒಕಿನವಾ ಸಂಸ್ಥೆಯು ಆರೋಗ್ಯ ಸೇತು ಆ್ಯಪ್ ಬಳಕೆ ಸೇರಿದಂತೆ ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಹಲವಾರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಇ-ಸ್ಕೂಟರ್ ಉತ್ಪಾದನೆಯನ್ನು ಪುನಾರಂಭಿಸಿದೆ.ಸಂಸ್ಥೆಯ ತನ್ನ ಉತ್ಪಾದನಾ ಘಟಕ ಸೇರಿದಂತೆ ಕೇಂದ್ರ ಕಚೇರಿ, ಡೀಲರ್ ಶಿಪ್ ಮಳಿಗೆಗಳಲ್ಲಿ ಶೇಕಡ 25 ಕಾರ್ಮಿಕರನ್ನು ನಿಯೋಜಿಸುವುದರ ಮೂಲಕ ಉತ್ಪಾದನಾ ಮತ್ತು ಮಾರಾಟ ಕಾರ್ಯವನ್ನು ಪುನಾರಂಭಿಸಿದೆ. ಡೀಲರ್ಸ್ ಗಳಿಗೆ ಇ-ಸ್ಕೂಟರ್ ಗಳನ್ನು ಕಳುಹಿಸುವ ಮುನ್ನ ಸಂಪೂರ್ಣ ಸಾನಿಟೈಸ್ ಮಾಡಲಾಗುವುದು. ವಾಹನಗಳನ್ನು ಸ್ವೀಕರಿಸದ ನಂತರವು ಡೀಲರ್ಸ್ ಗಳು ಈ ವಾಹನಗಳನ್ನು ಮತ್ತೊಮ್ಮೆ ಸಾನಿಟೈಸ್ ಮಾಡುತ್ತಾರೆ.
ಗ್ರಾಹಕರ ಸುರಕ್ಷತೆಗಾಗಿ ಸಂಸ್ಥೆಯು ಡೀಲರ್ಸ್ ಮಳಿಗೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಕೂಡ ವ್ಯವಸ್ಥೆ ಕಲ್ಪಿಸಿದೆ. ಉತ್ಪಾದನಾ ಘಟಕಗಳಲ್ಲಿ ಸಾನಿಟೈಜೆಷನ್ ಸುರಂಗಗಳನ್ನು ಸಹ ಸಂಸ್ಥೆಯು ನಿರ್ಮಿಸಿ ಸುರಕ್ಷತೆಗೆ ಆದ್ಯತೆ ನೀಡಿದೆ. ತುರ್ತು ಸಂದರ್ಭದಲ್ಲಿ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಲು ಕೇಂದ್ರ ಕಚೇರಿಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜತೆಗೆ ಮಾನವ ಸಂಪನ್ಮೂಲ ಅಧಿಕಾರಿ ಕಾರ್ಮಿಕರಿಗೆ ಕೊರೊನಾ ವೈರಸ್ ನಿಂದ ತಮ್ಮನ್ನು ತಾವು ರಕ್ಷಿಸಲು ಪ್ರತಿದಿನ ಜಾಗೃತ ಸಭೆಯನ್ನು ಕೂಡ ನಡೆಸುತ್ತಾರೆ.
“ಇಡೀ ರಾಷ್ಟ್ರದ ಈ ದುರದೃಷ್ಟಕರ ಸನ್ನಿವೇಶದಲ್ಲಿ ಜವಾಬ್ದಾರಿಯುತ ಬ್ರಾಂಡ್ ಆಗಿ ಒಕಿನವಾ ತನ್ನ ಕಾರ್ಯಪಡೆ ವ್ಯಾಪಾರಿ ಪಾಲುದಾರರು ಮತ್ತು ಗ್ರಾಹಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರವು ಆರ್ಥಿಕ ಚಟುವಟಿಕೆಗಳಲ್ಲಿ ವಿಶ್ರಾಂತಿ ಘೋಷಿಸಿದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕಾಪಾಡಿಕೊಂಡು ಕ್ರಮೇಣ ವ್ಯವಹಾರ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ವ್ಯಾಪಾರಿ ಪಾಲುದಾರರಿಗೆ ಸಲಹೆ ಮತ್ತು ನಮ್ಮ ಕಾರ್ಯಪಡೆಗೆ ಸಮಗ್ರ ಗುಣಮಟ್ಟದ ಕಾರ್ಯವಿಧಾನವನ್ನು ನೀಡಿದ್ದೇವೆ ” ಎಂದು ಒಕಿನವಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೀತೆಂದರ್ ಶರ್ಮಾ ತಿಳಿಸಿದ್ದಾರೆ.