ಲೋಕದರ್ಶನ ವರದಿ
ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳು ಸಭೆ
ಸಂಬರಗಿ, 01; ಸಂಕೋನಟ್ಟಿ ಗ್ರಾಮೀಣ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಹಿಂದಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೇ ಸರಕಾರ ಸೌಲಭ್ಯ ನೀಡದೆ ಲೇಓಟಗೆ ಅನುಮತಿ ನೀಡಿದ್ದಾರೆ. ಆ ಕುರಿತು ತನಿಖೆ ಮಾಡಲು ತನಿಖಾ ತಂಡವನ್ನು ನೇಮಕ ಮಾಡುವ ಆದೇಶ ಅಧಿಕಾರಿಗಳಿಗೆ ನೀಡಿದ್ದಾರೆ. ತಪ್ಪುತಸ್ತ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಬ್ಯಾಸಗಿ ಅವಧಿಯಲ್ಲಿ ಗ್ರಾಮಗಳಲ್ಲಿ ಬರುವ ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳು ಸಭೆ ಕರೆದು ಆ ಕುರಿತು ಮಾಹಿತಿಯನ್ನು ಪಡೆದುಕೊಂಡ ನಂತರ ಸುದ್ಧಿಗಾರರಿಗೆ ಮಾತನಾಡಿ ಅವರು ಒಂದು ವೇಳೆ ಗೊಂದಲ ಮಾಡಿ ಹೋಗಿರುವ ಅಧಿಕಾರಿ ವರ್ಗಾವಣೆ ಆದರೂ ಸಹ ಅವರು ತನಿಖೆ ಬಿಡುವುದಿಲ್ಲ. ಅದರಲ್ಲಿ ತಪ್ಪಿತಸ್ತ ಇದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಲವಾರು ವರ್ಷಗಳ ಹಿಂದೆ ಮಾಡಿರುವ ಲೆಓಟ ಪ್ಲಾಟ್‌ದಲ್ಲಿ ಯಾವುದೇ ಸೌಲಭ್ಯವಿಲ್ಲ. ಜನರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಲೇಓಟ್ (ಪ್ಲಾಟ್) ಅನುಮತಿ ನೀಡುವುದಕ್ಕಿಂತ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಯಿಂದ ಅಭಿವೃದ್ಧಿ ಹಣ ತುಂಬಿಕೊಂಡು ಅನುಮತಿ ನೀಡಿಲ್ಲ. ಆ ಕಾರಣ ಪ್ಲಾಟ್‌ಗಳಲ್ಲಿ ಸಮಸ್ಯೆ ಎದ್ದು ಕಾಣುತ್ತಿದೆ. ಹಿಂದಿನ ಅಧಿಕಾರಿ ಮಾಡಿದ ತಪ್ಪಿಗೆ ಅಲ್ಲಿ ವಾಸ ಮಾಡುವ ಜನರಿಗೆ ತೊಂದರೆಯಾಗುತ್ತಿದೆ.
ಬೇಸಿಗೆಯ ಅವಧಿಯಲ್ಲಿ ಯಾವುದೇ ಗ್ರಾಮಕ್ಕೆ ನೀರಿನ ಸಮಸ್ಯೆ ಬರಬಾರದೆಂದು ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಏನಾದರೂ ಸಮಸ್ಯೆ ಬಂದರೆ ನೇರವಾಗಿ ಸಂಪರ್ಕಿಸಬೇಕು. ಅಧಿಕಾರಿಗಳು ಬೇಜವಾಬ್ದಾರಿತನ ಮಾಡಬಾರದು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ವೇಳೆ ನೀರು ಸರಬರಾಜು ಅಧಿಕಾರಿ ಅರಿಂದ್ರ ಮೂರಗಾಲಿ ಮಾತನಾಡಿ ಅಥಣಿ ತಾಲೂಕಿನಲ್ಲಿ 286 ಕೊಳವೆಬಾವಿ ಇದ್ದು ಆ ಕೊಳವೆ ಬಾಯಿಯಲ್ಲಿನ ನೀರನ್ನು ಸೇವಿಸಬಾರದು ಕೃಷ್ಣಾ ನದಿ ಹಿಪ್ಪರಗಿ ಆಣೆಕಟ್ಟಿನಲ್ಲಿ 4.7 ಟಿ.ಎಮ್.ಸಿ ನೀರು ಇದ್ದು, ಅದರಲ್ಲಿ 4 ಟಿ.ಎಮ್.ಸಿ ನೀರನ್ನು 75 ದಿನಗಳ ವರೆಗೆ ಬಳಸಬಹುದು ಎಂದು ವಿವರವಾಗಿ ಹೇಳಿದರು.
ಈ ವೇಳೆ ತಹಶೀಲ್ದಾರ್ ಸಿದ್ರಾಯ ಬೋಸಗೆ, ತಾ.ಪ ಅಧಿಕಾರಿ ಶಿವಾನಂದ ಕಲ್ಲಾಪೂರ, ಕೃಷಿ ಸಹಾಯಕ ನಿರ್ದೇಶಕರು ನಿಂಗಣ್ಣ ಬಿರಾದಾರ, ವೆಂಕಟೇಶ ಕುಲಕರ್ಣಿ, ಅಭಿಯಂತರರು ಪ್ರವೀಣ ಹುಣಸಿಕಟ್ಟಿ, ಸೇರಿದಂತಹ ಎಲ್ಲಾ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತ ಇದ್ದರು.