ಹಾಸನದಲ್ಲಿ ಕ್ವಾರಂಟೈನ್‌ನಲ್ಲಿದ್ದ ಐವರಲ್ಲಿ ಕೊರೋನಾ ಸೋಂಕು ದೃಢ: ಜಿಲ್ಲಾಧಿಕಾರಿ

ಹಾಸನ, ಮೇ 12, ಹಾಸನ ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದು ಇನ್ಸ್ಟಿಟ್ಯೂಷನಲ್  ಕ್ವಾರಂಟೈನ್ ಅಲ್ಲಿ ಇದ್ದ 5 ಜನರಿಗೆ ಕೊವೀಡ್-19 ಪಾಸಿಟಿವ್ ಬಂದಿದೆ ಎಂದು  ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಸೋಂಕಿತ  ಐವರಲ್ಲಿ  ನಾಲ್ವರು ಒಂದೇ ಕುಟುಂಬದವರಾಗಿದ್ದು, ಮುಂಬೈನಿಂದ ಮೇ 10 ರಂದು ಜಿಲ್ಲೆಗೆ ಬಂದಿದ್ದಾರೆ. ದಂಪತಿ ಹಾಗೂ ಇಬ್ಬರು ಮಕ್ಕಳು ಕೊರೋನಾ ಸೋಂಕಿತರಾಗಿದ್ದಾರೆ ಎಂದು ಅವರು ತಿಳಿಸಿದರು.