ಕರೋನ ಎಂಬ ಮರಣ ಮೃದಂಗಕ್ಕೆ ಮೂರು ಸಾವಿರ ಬಲಿ..

ಬೀಜಿಂಗ್, ಮಾ 3, ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ಸೋಕಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಗಿದೆ. ಜಗತ್ತಿನ 60 ದೇಶಗಳಿಗೆ ಕೊರೊನಾ ವೈರಸ್ ಸೋಂಕು ವ್ಯಾಪಿಸಿದ್ದು ಎಚ್ಚರಿಕೆಯಿಂದ ಇರುವಂತೆ ಜನತೆಯ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೆ ಸೂಚನೆ ನೀಡಿದೆ. ಅಮೆರಿಕ, ಆಸ್ಟ್ರೇಲಿಯಾ, ಥೈಲ್ಯಾಂಡ್ ಸೇರಿದಂತೆ ವಿಶ್ವದ 60 ದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅಮೆರಿಕಾದಲ್ಲಿ ಕೊರೊನಾ ವೈರಸ್ ಗೆ 6 ಜನರು ಬಲಿಯಾಗಿದ್ದಾರೆ. ಚೀನಾದಲ್ಲೇ 2, 900 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಬಳಿಕ ಜಪಾನ್, ಇಟಲಿ, ಕೆನಡಾ, ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿರುವ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇನ್ನು ಇರಾನ್ ನಲ್ಲಿ ಕೊರೊನಾ ವೈರಸ್ ಗೆ 66 ಜನರು ಬಲಿಯಾಗಿದ್ದಾರೆ. ಚೀನಾದ ಬಳಿಕ ಇರಾನ್ ನಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣ ದಾಖಲಾಗುತ್ತಿದ್ದು ಜೊತೆಗೆ ಪ್ರತಿದಿನ 500 ಹೊಸ ಪ್ರಕರಣಗಳು ವರದಿಯಾಗುತ್ತಿದೆ