ದಾದಿಯರ ಕೆಲಸ ಸೈನಿಕರು ದೇಶಕ್ಕಾಗಿ ಮಾಡುತ್ತಿರುವ ಸೇವೆಗೆ ಸಮಾನ: ಡಾ.ಪುಟ್ಟರಾಜು

ಲೋಕದರ್ಶನವರದಿ

ಬ್ಯಾಡಗಿ12: ನಿತ್ಯವೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮೂಲಕ ಪ್ರಾಣವನ್ನು ಪಣಕ್ಕಿಟ್ಟು ವೈದ್ಯರ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ದಾದಿಯರ ಕೆಲಸ ಸೈನಿಕರು ದೇಶಕ್ಕಾಗಿ ಮಾಡುತ್ತಿರುವ ಸೇವೆಗೆ ಸಮನಾಗಿದೆ ಎಂದು ವೈದ್ಯಾಧಿಕಾರಿ ಡಾ.ಪುಟ್ಟರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

      ಇಂಗ್ಲೆಂಡ್ನ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಇವರ ಹುಟ್ಟುಹಬ್ಬದ ಸ್ಮರಣಾರ್ಥ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ರೈಲ್ವೇ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 'ವಿಶ್ವ ದಾದಿಯರ ದಿನ' (ವಲ್ರ್ಡ ನರ್ಸಸ್ ಡೇ) ಕಾರ್ಯಕಮವನ್ನುದ್ದೇಶಿಸಿ ಅವರು ಮಾತನಾಡಿದರು.

 ಶುಶ್ರೂಷೆ ಮೂಲತತ್ವವೇ ಆರೈಕೆ, ವೈದ್ಯರು ಔಷಧಗಳಿಂದ ರೋಗಿಯನ್ನು ಗುಣಪಡಿಸುವ ಪ್ರಯತ್ನಿಸಿದರೇ 'ದಾದಿ'ಯರು ಮಾನವೀಯತೆಯಿಂದ ಆರೈಕೆ ಮಾಡುತ್ತಾರೆ ಹೀಗಾಗಿ ಇಡೀ ವಿಶ್ವವನ್ನೇ ಆರೋಗ್ಯಯುತವಾಗಿ ಪೋಷಿಸುವ ಹೊಣೆಗಾರಿ ಕೆಯನ್ನು ನರ್ಸಗಳು ತೋರಬೇಕಾಗಿದೆ ಎಂದರು.

ಸ್ಕೆತೊಸ್ಕೋಪ್ ಹೊಂದಿರದ ದೇವತೆ:ದಾದಿಯರು ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯದ ನಡುವಿನ ಸೇತುವೆಯಾಗಿದ್ದು, ಶುಶ್ರೂಷಾ ವೃತ್ತಿ ಬಹಳಷ್ಟು ಮೌಲ್ಯಯುತವಾಗಿದೆ, ಬದುಕಿನ ಅತ್ಯಂತ ಕಷ್ಟದ ದಿನಗಳಲ್ಲಿಯೂ ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ದಾದಿಯರು ಆಸ್ಪತ್ರೆಗೆ ಭಾಗ್ಯದ ಬೆಳಕ್ಕಾಗಿದ್ದಾರೆ ಹೀಗಾಗಿ ಅವರನ್ನು 'ಸ್ಕೆತೊಸ್ಕೋಪ್ ಹೊಂದಿರದ ದೇವತೆ' ಎಂದು ಸಂಭೋಧಿಸಲಾಗುತ್ತದೆ ಎಂದರು.

ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಹೊಣೆ: ಸಮಿತಿಯ ಉಪಾಧ್ಯಕ್ಷ ಪರುಶರಾಮ ಮೇಲಗಿರಿ ಮಾತನಾಡಿ, ಸಾರ್ವತ್ರಿಕ ಆರೋ ಗ್ಯ ರಕ್ಷಣೆಯನ್ನು ಸಾಧಿಸುವಲ್ಲಿ ದಾದಿಯರ ಪಾತ್ರ ಪ್ರಮುಖ, ನಿರ್ಲಕ್ಷ್ಯತನ ತೊರೆದು ಸಕಾಲಕ್ಕೆ ಆಗಮಿಸಿ ಕಾಳಜಿಯಿಂದ ಕೆಲಸ ನಿರ್ವಹಿಸುವ ಆಸಕ್ತಿಯನ್ನು ಪ್ರತಿಯೊಬ್ಬ ಶುಶ್ರೂಕಿಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೂಜ್ಯನೀಯ ವೃತ್ತಿ: ಅಧ್ಯಕ್ಷ ಮಾಲತೇಶ ಅರಳೀಮಟ್ಟಿ ಮಾತನಾಡಿ, ದಾದಿಯರಿಲ್ಲದೇ ಬಹುತೇಕ ಆಸ್ಪತ್ರೆಗಳು ನಡೆಯಲು ಸಾಧ್ಯವಿಲ್ಲ ರೋಗಿಗಳ ಸಂಪೂರ್ಣ ಜವಾಬ್ದಾರಿ ಅವರ ಮೇಲಿದೆ ವೈದ್ಯಕೀಯ ಲೋಕದಲ್ಲಿ ದಾದಿಯರ ಸೇವೆಯನ್ನು ಕೇವಲ ಗೌರವ ಸೂಚಕಕ್ಕೆ ಸೀಮಿತಗೊಳಿಸದೇ 'ಪೂಜ್ಯನೀಯ' ಎಂಬುದಾಗಿ ಪರಿಗಣಿಸಬೇಕಾಗಿದೆ ಎಂದ ಅವರು ಎಲ್ಲಾ 'ದಾದಿ' ಯರಿಗೆ ಶುಶ್ರೂಷಾ ದಿನದ ಶುಭಾಶಯಗಳು ತಿಳಿಸಿದರು.

     ಸಮಿತಿಯ ಗೌರವ ಕಾರ್ಯದಶರ್ಿ ಡಾ.ಎ.ಎಂ.ಸೌದಾಗರ ನಿದರ್ೇಶಕ ಬಸವರಾಜ ಹಂಜಿ, ಹಿರಿಯ ವೈದ್ಯ ಜಿ.ಸತ್ಯಮೂತರ್ಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಶ್ರೀನಿವಾಸ, ವಿರೇಶ ಹೊಸ್ಮನಿ, ನಾಗರಾಜ ಸೇರಿದಂತೆ ಶುಶ್ರೂಕಿಯರಾದ ಅಮಿತಾ, ಪುಷ್ಪ, ಉಮಾ, ನಿರ್ಮಲ, ಕೆಂಚಮ್ಮ, ಮೀನಾಕ್ಷಿ,ಗೀತಾಂಜಲಿ, ವೀಣಾ, ಶಮೀದಾ, ಮಂಜುನಾಥ, ರಾಣಿ, ಉಷಾ, ಶ್ರೀಶೈಲ, ದೇವೆಂದ್ರಪ್ಪ, ಶೈಲಜಾ, ಶೈಲಾ, ಭಾರತಿ, ರೇಖಾ ರೇಷ್ಮಾ, ಶ್ರೀದೇವಿ, ಸುಜಾತ, ವಿದ್ಯಾಶ್ರೀ ಗೋಪಿನಾಥ್ ಇನ್ನಿತರರು ಉಪ ಸ್ಥಿತರಿದ್ದರು. ನರ್ಸ ಶ್ವೇತಾ ಸ್ವಾಗತಿಸಿ ವಂದಿಸಿದರು.