ಉತ್ತರ ಪ್ರದೇಶ 04: ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ ಕಾಲ್ತುಳಿತದಲ್ಲಿ ಮೃತಪಟ್ಟವರ ನಿಜವಾದ ಅಂಕಿಅಂಶಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರ ನಿರಂತರವಾಗಿ ಬಜೆಟ್ ಅಂಕಿಅಂಶಗಳನ್ನು ನೀಡುತ್ತಿರುವಾಗ, ದಯವಿಟ್ಟು ಮಹಾಕುಂಭದಲ್ಲಿ ಮೃತಪಟ್ಟವರ ಅಂಕಿಅಂಶಗಳನ್ನು, ಗಾಯಾಳುಗಳ ಚಿಕಿತ್ಸೆ, ಔಷಧಿಗಳು, ವೈದ್ಯರ ಲಭ್ಯತೆ, ಆಹಾರ, ನೀರು ಮತ್ತು ಸಾರಿಗೆ ವಿವರಗಳನ್ನು ಯಾವುದೇ ತಪ್ಪು ನಡೆದಿಲ್ಲದಿದ್ದರೆ ಸರ್ಕಾರ ಅಂಕಿಅಂಶಗಳನ್ನು ಏಕೆ ಮುಚ್ಚಿಡುತ್ತಿದೆ ಎಂದು ಪ್ರಶ್ನಿಸಿದರು? ಮಹಾಕುಂಭದ ವ್ಯವಸ್ಥೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಕಾಲ್ತುಳಿತ ಘಟನೆಗೆ ಹೊಣೆಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. .