ನವದೆಹಲಿ, ಆಗಸ್ಟ್ 25 ಹುಲಿಗಳ ಸಂಖ್ಯೆ 2019 ರಲ್ಲಿಯೇ ದುಪಟ್ಟುಗೊಂಡು 2,967 ಕ್ಕೆ ಏರಿಕೆಯಾಗಿದೆ. ಇದು ನವ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂತಸ ವ್ಯಕ್ತಪಡಿಸಿದ್ದಾರೆ. ಆಕಾಶವಾಣಿಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ದೇಶದಲ್ಲಿ ಹುಲಿ ಗಣತಿಯನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರಕಿತು. ಭಾರತದಲ್ಲಿ ಹುಲಿ ಸಂಖ್ಯೆ 2,967 ತಲುಪಿದೆ. ಕೆಲವು ವರ್ಷಗಳ ಹಿಂದೆ, ಹುಲಿಗಳ ಸಂಖ್ಯೆ ಅರ್ಧದಷ್ಟಿತ್ತ. 2010ರಲ್ಲಿ ರಷ್ಯಾದ ಸೇಂಟ್ ಪೀಟಸರ್್ಬಗರ್್ನಲ್ಲಿ ಹುಲಿ ಶೃಂಗಸಭೆ ನಡೆಯಿತು. ಈ ಶೃಂಗಸಭೆಯಲ್ಲಿ, ವಿಶ್ವದಲ್ಲಿ ಹುಲಿಗಳು ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ನಿರ್ಣಯವನ್ನು ಕೈಗೆತ್ತೊಕೊಂಡು, 2022ರ ವೇಳೆಗೆ ವಿಶ್ವಾದ್ಯಂತ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಯಿತು ಎಂದರು. ನಾವು 2019 ರಲ್ಲಿ ನಮ್ಮ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದೇವೆ. ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಸಂರಕ್ಷಿತ ಪ್ರದೇಶಗಳು ಮತ್ತು ಸಮುದಾಯ ಮೀಸಲುಗಳ ಸಂಖ್ಯೆಯೂ ಹೆಚ್ಚಾಗಿದೆ. ತಾವು ಹುಲಿಗಳ ದಾಖಲೆ ಬಿಡುಗಡೆ ಮಾಡುತ್ತಿದ್ದ ಸಮಯದಲ್ಲಿ, ಗುಜರಾತ್ನ ಗಿರ್ನ ಏಷ್ಯಾಟಿಕ್ ಸಿಂಹವನ್ನೂ ನೆನಪಿಸಿಕೊಂಡೆ. ಗಿರ್ ಕಾಡುಗಳಲ್ಲಿ ಸಿಂಹಗಳ ಆವಾಸಸ್ಥಾನ ಕುಗ್ಗುತ್ತಿರುವ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದೆ ಎಂದು ಮೋದಿ ಹೇಳಿದರು. ಹಲವಾರು ನವೀನ ಕ್ರಮಗಳನ್ನು ಗಿರ್ನಲ್ಲಿ ಒಂದರ ನಂತರ ಒಂದರಂತೆ ತೆಗೆದುಕೊಳ್ಳಲಾಯಿತು. 2007 ರಲ್ಲಿ ಮಹಿಳಾ ಕಾವಲುಗಾರರನ್ನು ನಿಯೋಜಿಸಲು ನಿರ್ಧರಿಸಲಾಯಿತು. ಪ್ರವಾಸೋದ್ಯಮವನ್ನು ಹೆಚ್ಚಿಸಲು ಮೂಲಸೌಕರ್ಯಗಳಲ್ಲಿ ಸುಧಾರಣೆಗಳು ಕಂಡುಬಂದವು ಎಂದು ಮೋದಿ ತಿಳಿಸಿದರು. ಕಾಡುಗಳಿಲ್ಲದಿದ್ದರೆ, ಹುಲಿಗಳು ಮಾನವನ ಆವಾಸಸ್ಥಾನಕ್ಕೆ ಪ್ರವೇಶಿಸುತ್ತೇವೆ ಮತ್ತು ಕೊಲ್ಲಲ್ಪಡುತ್ತವೆ. ಕಾಡಿನಲ್ಲಿ ಹುಲಿಗಳು ಇಲ್ಲದಿದ್ದರೆ, ಮನುಷ್ಯನು ಅರಣ್ಯವನ್ನು ಕತ್ತರಿಸಿ ನಾಶಪಡಿಸುತ್ತಾನೆ. ಆದ್ದರಿಂದ ವಾಸ್ತವವಾಗಿ ಹುಲಿಯು ಅರಣ್ಯವನ್ನು ರಕ್ಷಿಸುತ್ತದೆ ಮತ್ತು ಅರಣ್ಯವು ಹುಲಿಯನ್ನು ರಕ್ಷಿಸುತ್ತದೆ ಎಂದು ನಮ್ಮ ಪೂರ್ವಜರು ವಿವರಿಸಿದ್ದಾರೆ ಎಂದು ಮೋದಿ ಹೇಳಿದರು.