ಸುಡಾನ್ ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 3138 ಕ್ಕೆ ಏರಿಕೆ; 121 ಸಾವು

 ಖರ್ಟೋಮ್, ಮೇ 22,ಸುಡಾನ್ ನಲ್ಲಿ ಕಳೆದ ಮೂರು ದಿನಗಳಲ್ಲಿ ಮತ್ತೆ 410 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು 10 ಜನರು ಸಾವನ್ನಪ್ಪಿದ್ದಾರೆ.ಸುಡಾನ್ ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3.138 ಹಾಗೂ ಸಾವಿನ ಸಂಖ್ಯೆ 121 ರಷ್ಟಿದೆ. ಈ ಮಧ್ಯೆ 23 ಜನರು ಸೋಂಕಿನಿಂದ ಗುಣಮುಖರಾಗಿದ್ದು ಒಟ್ಟು ಚೇತರಿಸಿಕೊಂಡವರ ಸಂಖ್ಯೆ 309 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಸೋಂಕು ಹರಡುತ್ತಿದೆ ಎಂದು ಆರೋಗ್ಯ ಸಚಿವ ಅಕ್ರಮ್ ಅಲಿ ಅಲ್ ಟಾಮ್ ಹೇಳಿದ್ದಾರೆ. ಖಾಸಗಿ ವಾಹನಗಳ ಮೂಲಕ ಸಂಚಾರ ಮೊದಲಾದ ಓಡಾಟಕ್ಕೆ ಅನುಮತಿ ನೀಡಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 18 ರಂದು ಸುಡಾನ್ ಸರ್ಕಾರ ಖರ್ಟೋಮ್ ನಲ್ಲಿ ಮೂರು ವಾರಗಳ ಕಾಲ ಕರ್ಫ್ಯೂ ವಿಧಿಸಿತ್ತು. ನಂತರ ಮೇ 9 ರಿಂದ 10 ದಿನಗಳವರೆಗೆ ವಿಸ್ತರಿಸಿ ಪುನಃ ಮೇ 18 ರಿಂದ ಎರಡು ವಾರಗಳ ಕಾಲ ಕರ್ಫ್ಯೂ ವಿಸ್ತರಿಸಿದೆ.