ಮಣಿಪುರದಲ್ಲಿ ಕರೋನ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆ

ಇಂಫಾಲ್, ಎಪ್ರಿಲ್ 2,ಮಣಿಪುರದಲ್ಲಿ ಮತ್ತೊಬ್ಬ ವ್ಯಕ್ತಿಗೆ ಕರೋನ ಸೊಂಕು ತಗುಲಿರುವುದು ಖಚಿತಾಗಿದ್ದು , ಪರಿಣಾಮ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಈವರೆಗೆ  ಎರಡಕ್ಕೆ ಏರಿಕೆಯಾಗಿದೆ. ಈ ಮೊದಲು ಬಾಲಕಿಯನ್ನು ಸೊಂಕಿನ  ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಿಜಾಮುದ್ದೀನ್ ಮಾರ್ಕಾಜ್‌ನಲ್ಲಿರುವ ತಬ್ಲೀಘಿ ಜಮಾಅತ್ ಸಭೆಗೆ ಸೇರಿದ ಮತ್ತೊಂದು  ಕರೋನ ಸೋಂಕಿನ ಪಾಸಿಟಿವ್  ಪ್ರಕರಣ ವರದಿಯಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೆನ್ ಇಂದು ಟ್ವೀಟ್ ಮಾಡಿದ್ದಾರೆ. ಈಗ ಮಣಿಪುರದಲ್ಲಿ ಕರೋನ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ  ಸಂಪರ್ಕ ಶಂಕಿತರನ್ನು ಮನೆಯಲ್ಲೆ ಪ್ರತ್ಯೇಕವಾಗಿಡಲಾಗಿದೆ ಎಂದು ಅವರು ಹೇಳಿದರು.  ಸಭೆಗೆ ಹಾಜರಾಗಿದ್ದ  ಹತ್ತು ಜನರಿಗೆ ವೈದ್ಯಕೀಯ  ಪರೀಕ್ಷೆ ಮಾಡಿದ್ದು  ಎಂಟು ಜನರಿಗೆ ಯಾವುದೆ ಸೊಂಕು ಕಾಣಿಸಿಕೊಂಡಿಲ್ಲ ಎಂಬುದು ಖಚಿತವಾಗಿದೆ ಎಂದು ಅವರು ಹೇಳಿದರು.