ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ
ವಚನ ಶ್ರಾವಣ
ಹಿರಿಯ ವಚನಕಾರ ನುಲಿಯ ಚಂದಯ್ಯನ ಬಗೆಗೆ ಸಾಕಷ್ಟು ಅಧ್ಯಯನ ಗಳು ನಡೆದಿವೆ.ಕೇವಲ ಶರಣರ ಕಾಲಕ್ಕೆ ಮಾತ್ರವಲ್ಲ, ಶರಣರ ಕ್ರಾಂತಿಯ ನಂತರದಲ್ಲಿಯೂ ಶರಣರ ವಚನಗಳ ಉಳಿಸುವಲ್ಲಿ ಆತನ ಪಾತ್ರ ಗಣನೀಯವಾದುದಾಗಿದೆ.
ನುಲಿಯ ಚಂದಯ್ಯ ಕಾಯಕ ಯೋಗಿ, ಜಂಗಮ ದಾಸೋಹಿ ಎಂದು ಹೆಸರಾದ ಶರಣ.ಸ್ವತಃ ಬಸವಣ್ಣನವರೇ
................ನಮ್ಮ ಕೂಡಲ ಸಂಗಮ ದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆಯ
ಮಗನಾಗಿ ಆತನ ಶ್ರೀಶರಣಕ್ಕೆ ಶರಣೆಂದು ಶುದ್ದನು
ಆ ಮಹಿಮರ ಘನವ ನಾನೆತ್ತ ಬಲ್ಲೆನಯ್ಯಾ ಪ್ರಭುವೆ
ಎಂದು ಚಂದಯ್ಯನವರನ್ನು ಸ್ತುತಿಸಿದ್ದಾರೆ..ಈತನ ಕುರಿತು ವಿವರಗಳು ಶೂನ್ಯ ಸಂಪಾದನೆ,ಶಿವತತ್ವ ಚಿಂತಾಮಣಿ,ಭೈರವೇಶ್ವರ ಕಥಾ ಸೂತ್ರಮಣಿ ರತ್ನಾಕರ ಅನೇಕ ಜನಪದ ಹಾಡುಗಳಲ್ಲಿ ಮೊದಲಾದ ಗ್ರಂಥಗಳಲ್ಲಿ ಬಂದಿದೆ.ಲಿಂಗದೇವನನ್ನು ಕಾಯಕ ಮಾಡಲು ಹಚ್ಚಿದನೆಂಬ ಪ್ರಸಂಗವಂತೂ ವೀರಶೈವ ಕೃತಿಗಳಲ್ಲಿ ಬಂದಿದೆ.
ವಿದ್ವಾಂಸರ ಅಧ್ಯಯನಗಳ ಪ್ರಕಾರ ಈತನ ಊರು ವಿಜಯಪೂರ ಜಿಲ್ಲೆಯ ಶಿವನಗಿ.ಶರಣರ ಸಮೂಹ ಇರುವ ಕಲ್ಯಾಣಕ್ಕೆ ಬರುವ ಮೊದಲು ಈತ ತನ್ನ ಜಾತಿಗನುಗುಣವಾದ ವೃತ್ತಿ ಹುಲ್ಲು ತಂದು ನುಲಿ ಹೊಸೆದು ಹಗ್ಗ ಮಾಡುವ ಕಾಯಕವನ್ನು ಮಾಡುತ್ತಿದ್ದ ಕಲ್ಯಾಣಕ್ಕೆ ಬಂದ ಮೇಲೆಯೂ ಅದೇ ವೃತ್ತಿಯನ್ನು
ಮುಂದುವರೆಸಿದನು. ಹಗ್ಗ ಕಣ್ಣಿನೆಲುವು ಗಳನ್ನು ತಲೆ ಮೇಲೆ ಹೊತ್ತುಮಾರಿ ಬಂದ ಹಣದಲ್ಲಿ ಪ್ರಸಾದ ಮಾಡಿಸಿ ಜಂಗಮಸೇವೆಯಲ್ಕಿ ಬದುಕಿದ್ದನು.
ವಿದ್ವಾಂಸರು ಮಾಡಿದ ಅಧ್ಯಯನ ಗಳ ಆಧಾರದ ಮೇಲೆ ಈತ ವಚನಕಾರರ ಕ್ರಾಂತಿಯ ನಂತರ ಅಕ್ಕನಾಗಮ್ಮನಿರುವ ಉಳಿವೆಗೆ ಬಂದು ಮಗನನ್ನು ಕಳೆದುಕೊಂಡ ಅಕ್ಕನಾಗಮ್ಮನ ರಕ್ಷಣೆಯ ಭಾರವನ್ನು ಹೊತ್ತನೆಂದೂ ಮಲೆನಾಡನ್ನೆಲ್ಲ ಸುತ್ತಿ ಎಣ್ಣೆಹೊಳೆ ಎಂಬಲ್ಲಿಗೆ ಬಂದನೆಂದೂ ಅಲ್ಲಿ ಸಿದ್ಧವೀರ ಸ್ವಾಮಿಗಳು ಅಕ್ಕನಾಗಮ್ಮನ ಮಠವೊಂದನ್ನು ಕಟ್ಟಿಸಿಕೊಟ್ಟ ಕಾರಣ ಆಕೆ ಅಲ್ಲಿಯೇ ಉಳಿದು ಲಿಂಗೈಕ್ಯಳಾದ ನಂತರ ಶಿವಮೊಗ್ಗ ಜಿಲ್ಲೆಯ ನಂದಿ ಗ್ರಾಮಕ್ಕೆ ಬಂದು ಕೆಲಕಾಲ ಉಳಿದು ಕೊನೆಗೆ ನುಲೇನೂರ ಎಂಬ ಊರಿನಲ್ಲಿ (ನುಲಿಯಯ್ಯನೂರು- ನುಲೇನೂರ) ಲಿಂಗೈಕ್ಯ ನಾದನೆಂಬ ವಿವರಗಳನ್ನು ಡಾ.ವಿ.ಜಿ ಪೂಜಾರ ಅವರು ನೀಡುತ್ತಾರೆ( ವಿವರಗಳಿಗೆ ನೋಡಿ ಬಸವ ಪಥ ಅಕ್ಟೋಬರ್ 1999)
ಈತನ 48 ವಚನಗಳು ವಚನ ಸಂಪುಟ -7( ಸಂಪಾದಕರು- ರಲ್ಲಿ ಪ್ರಕಟವಾಗಿವೆ.ಈತನ ವಚನಾಂಕಿತ ಚಂದೇಶ್ವರ ಲಿಂಗ.
ಕಾಯಕ ಕ್ಕೆ ತುಂಬ ಮಹತ್ವ ನೀಡಿದ ಈ ಶರಣನ ವಚನಗಳಲ್ಲಿಯೂ ಅದು ಪ್ರಸ್ತಾಪವಾಗಿದೆ. ಎಲ್ಲ ಕಾಯಕಜೀವಿ ಶರಣರಂತೆ ಈತನೂ ತನ್ನ ಕಾಯಕ ಬಣ್ಣನೆಯಮೂಲಕವೇ ಅನುಭಾವ ಚಚರ್ೆ ಮಾಡಿರುವದಕ್ಕೆ ಈ ಕೆಳಗಿನವಚನವೇ ಉದಾಹರಣೆ.
ಸಂಸಾರವೆಂಬ ಸಾಗರದ ಮಧ್ಯೆ
ಬೆಳೆದರ ಹೊಡಕೆಯ ಹುಲ್ಲ ಕೊಯ್ದು
ಮತ್ತಮಾ ಕಣ್ಣತಗೆದು,ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಕಿ ಕಾಯಕವಾಯಿತ್ತು
ಇದು ಕಾರಣ ಚಂದೇಶ್ವರ ಲಿಂಗವೆಂಬ ಭಾವವೆನಗಿಲ್ಲ
ಮಾಡುವ ಕಾಯಕವೇ ಲಿಂಗವಾದಾಗ ಲಿಂಗಕ್ಕು ಕಾಯಕಕ್ಕೂ ಅಂತರವಿಲ್ಲವಾಗುತ್ತದೆ .ಕಾಯಕದಲ್ಲಿ ಮೇಲು ಕೀಳುಗಳಿಲ್ಲ.ಯಾವುದೇ ಕಾಯಕವಾದರೂ ಭಾವಶುದ್ಧವಾಗಿ ಮಾಡಿದರೆ ಅದು ಶ್ರೇಷ್ಠ ಕಾಯಕವೇ. ಇದನ್ನು ಸಾರುವ ಈ ವಚನ ತುಂಬ ಪ್ರಸಿದ್ದವಾಗಿದೆ.
ಆವಾವ ಕಾಯಕದಲ್ಲಿ ಬಂದಡೂ ಭಾವ ಶುದ್ದವಾಗಿ
ಗುರುಲಗ ಜಂಗಮಕ್ಕೆ ಮಾಡುವದೆ ಶಿವಪೂಜೆ
ಮಾಡುವ ಮಾಟವಿಲ್ಲದೆ ಮಾತಗೆ ಮಾತಾಡುವದು ಅದೇತರ ಪೂಜೆ
ಅದು ಚಂದೇಶ್ವರ ಲಿಂಗಕ್ಕೆ ಒಪ್ಪವಲ್ಲ ಮಡಿವಾಳಯ್ಯ
ಮಡಿವಾಳ ಮಾಚಿದೇವ ಮತ್ತು ನುಲಿಯ ಚಂದಯ್ಯ ಕಲ್ಯಾಣಕ್ಕರಲೆ ಬರುವ ಮೊದಲೇ ಸ್ನೇಹಿತರು.ಹೀಗಾಗಿ ಅವರು ತಮ್ಮ ವಚನಗಳನ್ನು ಪರಸ್ಪರರಿಗೆ ಹೇಳಿಕೊಂಡಂತೆ ರಚಿಸಿರುವದು ವಿಶೇಷ.ಚಂದಯ್ಯನೊಂದಿಗೆ ಸೇರಿರುವ ಲಿಂಗದೇವನ ಕಥೆಯಲ್ಲಿಯೂ ಮದ್ಯಸ್ಥಿಕೆ ವಹಿಸುವವನು ಮಾಚಿದೇವನೇ.ಕಾಯಕದ ಬಗೆಗೆ ಈ ಶರಣನಿಗಿರುವ ಅಭಿಮಾನ ಮತ್ತು ಶೃದ್ಧೆ ಅದ್ವಿತೀಯ ವಾದದ್ದು.ತನು ದುಡಿದಂತೆ ತನ್ನೊಡನೆ ಇರುವದಾದರೆ ತನ್ನ ಹತ್ತಿರ ಇರು ಎಂದು ಇಷ್ಟಲಿಂಗಕ್ಕೆ ಕರಾರು ಹಾಕಿದ ಕಾಯಕ ಯೋಗಿ ಚಂದಯ್ಯ.ಇದನ್ನು ಸೂಚಿಸುವ ವಚನ ಹೀಗಿದೆ.
ಇಷ್ಟಲಿಂಗ ಗುರುವಿನ ಹಂಗು
ಚಿತ್ತ ಕಾಮನ ಹಂಗು
ಪೀಜೆ ಪುಣ್ಯ ಮಹಾದೇವನ ಹಂಗು
ಎನ್ನದಾಸೋಹ ಆರ ಹಂಗೂ ಇಲ್ಲ
ಚಣ್ಣಬಸವಣ್ಣಪ್ರೀಯ ದೇಶ್ವರ ಲಿಂಗವೇ
ಕಣ್ಣಿಯ ಮಾಡ ಬಲ್ಲಡೆ ಬಾ ಎನ್ನ ತಂದೆ
ಇಷ್ಟ ಲಿಂಗ ಗುರು ಮನಸ್ಸುಮಾಡಿ ಕೊಟ್ಟರೆ ಬರುವಂಥದು,ಆದರೆ ಕಾಯಕ ಹಾಗಲ್ಕ.ಅದು ಯಾರ ಹಂಗಿನದೂ ಅಲ್ಲ ಎನ್ನುವ ಶರಣ ತನ್ನ ಕಾಯಕ ಮಾಡುವದಾದರೆ ತನ್ನೊಡನೆ ಬಾ ಎಂದು ಕರಾರು ಹಾಕುವದು ವಿಸ್ಮಯ ತರಿಸುತ್ತದೆ.ಹೀಗೆ ಬದುಕಿದವರು ನಮ್ಮ ಶರಣರು.
ದುಡಿದು, ಕಾಯಕಮಾಡಿ ದುದು ಮಾತ್ರ ದೇವರಿಗೆ ಅಪರ್ಿಸಲು ಯೋಗ್ಯ.ಹಾಗೆಯೆ ದುಡಿಯದೆ ತಂದುದು ದೇವರಿಗೆ ಅಪರ್ಿಸಲು ಯೋಗ್ಯವಲ್ಲ ಎನ್ನುವ ಶರಣ
ಕಂದಿಸಿ ಕುಂದಿಸಿ ಬಂದಿಸಿ ಕಂಡವರ ಬೇಡಿ ತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಹರ ಲಿಂಗಕ್ಕೆ ನೈವೇದ್ಯ ಸಲ್ಲ
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ದಾಸೋಹವ ಮಾಡುವದೇ ಮಾಟ
ಕಾಶಿಯ ಕಾಯಿ ಕಾಡಿನ ಸೊಪ್ಪಾದಡೆಯೂ
ಕಾಯಕದಿಂದ ಬಂದುದು ಲಿಂಗಾಪರ್ಿತ
ದಾಸೋಹ ಮಾಡುವೆನೆಂದು ಹೇಗು ಹೇಗೋ ತಂದು ದಾಸೋಹ ಮಾಡುತ್ತೇನೆಂದರೆ ನಡೆಯದು.ದಾಸೋಹ ಮಾಡಲು ಬಳಸುವ ಅನ್ನ ತನ್ನ ಕಾಯಕದಿಂದಲೇ ಬಂದಿರಬೇಕು ಎನ್ನುವ ವಚನಕಾರರ ನಿಷ್ಠೆ ಇಂದಿನ ನಮಗೆ ಪಾಠವಾಗಿದೆ.ಯಾರದೋ ದುಡ್ಡಿನಲ್ಲಿ ತಾವು ದಾನ ದಾಸೋಹ ಮಾಡಿ ಮೆರೆಯುವವವರು ಈ ವಚನದ ಅರ್ಥ ಅರಿಯಬೇಕು.
ಲಿಂಗಕ್ಕೆ ಮಾಡುವದಕ್ಕಿಂತ ಜಂಗಮಕ್ಕೆ ಇಕ್ಕುವದು ಶ್ರೇಷ್ಠ ಎನ್ನು ಚಂದಯ್ಯ ಸಮಾಜಮುಖಿ ಚಿಂತಕನಾಗಿ ಕಾಣುತ್ತಾನೆ. ಗುರು ಸೇವೆಯಿಂದ ಇಹದಲ್ಲಿ ಸುಖ,ಲಿಂಗಸೇವೆಯಿಂದ ಪರದಲ್ಕಿ ಸುಖ.ಆದರೆ ಇಹ ಪರವೆರಡೂ ನಾಸ್ತಿಯಾಗಿ ನಿಜ ಸುಖ ದೊರೆಯುವದು ಜಂಗಮ ಸೇವೆಯಲ್ಕಿ ಮಾತ್ರ. ಲಿಂಗಕ್ಕೆ ಮಾಡುವದು ತನ್ನ ಸ್ವಂತಕ್ಕೆ ಮಾಡಿಕೊಂಡಂತೆ.ಆದರೆ ಜಂಗಮಲಿಂಗವೆಂದರೆ ಸಮಾಜ. ಅಂತೆಯೆ ಆತ ಹೇಳುವ ಈ ಸಾಲುಗಳು
ಇಂತು ಗುರುಲಿಂಗಕ್ಕೆ ಮಾಡಿ
ಹಿಂದಣ ಮುಂದಣ ಸಂದೇಹಕ್ಕೀಡಾದೆ
ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ
ಮನಸಂದು ಮಾಡಲಾಗಿ ಚಂದೇಶ್ವರ ಲಿಂಗಕ್ಕೆ ಹಿಂದೆ ಮುಂದೆಂಬುದಿಲ್ಲ
ಎನ್ನುವ ಸಾಲುಗಳು ಶರಣರು ಲಿಂಗಪೂಜೆಗಿಂತ ಜಂಗಮಸೇವೆಗೆ ಹೆಚ್ಚಿನ ಆದ್ಯತೆ ಕೊಟ್ಟುದಕ್ಕೆ ಸಾಕ್ಷಿಯಾಗಿದೆ.ಚಂದನ ಬಹುತೇಕ ವಚನಗಳು ಗುರು ಲಿಂಗ ಜಂಗಮದ ಚಚರ್ೆ ಮಾಡುವದು ವಿಶೇಷವಾಗಿದೆ.ಇಡೀ ವಚನ ಸಾಹಿತ್ಯದಲ್ಲಿಯೇ ಪ್ರಸಿದ್ಧವಾದ ವಚನಗಳಲ್ಕಿ ಒಂದು ಈ ಕೆಳಗಿನ ವಚನ
ಗುರುವಾದಡೆಯೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದಡೆಯೂ ಲಾಯಕದಿಂದವೇ ವೇಶದ ಪಾಶ ಹರಿವುದು
ಗುರುವಾದಡೆಯೂ ಚರ ಸೇವೆಯ ಮಾಡಬೇಕು
ಲಿಂಗವಾದಡೆಯೂ ಚರ ಸೇವೆಯಮಾಡಬೇಕು
ಜಂಗಮವಾದಡೆಯೂ ಚರ ಸೇವೆಯ ಮಾಡಬೇಕು
ಚನ್ನಬಸವಣ್ಷಪ್ರಿಯ ಚಂದೇಶ್ವರಲಿಂಗದ ಅರಿವು
ಎಂದು ಕಾಯಕದ ಸರ್ವ ಶ್ರೇಷ್ಠತೆಯನ್ನು ಸಾರುತ್ತದೆ.ಗುರುವಾಗಲೀ ಲಿಂಗವಾಗಲೀ ಜಂಗಮವಾಗಲೀ ಕಾಯಕಮಾಡದೇ ಇರಲಾಗದು ಎನ್ನುವ ಈ ವಚನ ಶರಣ ಸಿದ್ದಾಂತವನ್ನು ಸಾರುತ್ತದೆ.ನಡೆ ನುಡಿಒಂದೇ ಆಗಿರುವದಕ್ಕೆ ಶರಣರು ಕೊಟ್ಟ ಆದ್ಯತೆಯೂ ಅಷ್ಟೇ ಮಹತ್ತವದ್ದು .ಈ ಹಿನ್ನೆಲೆಯಲ್ಲಿ ಚಂದಯ್ಯನ ಈ ವಚನ ಅಧ್ಯಯನ ಯೋಗ್ಯವಾಗಿದೆ.
ನುಡಿದ ಭಾಷೆಗೆ ತೆಡಬಡ ಬಂದಲ್ಲಿ
ನುಡಿದ ಭಾಷೆಗೆ ಬಂಗ ನೋಡಾ
ಹಿಡಿದ ಕುಳಕ್ಕೆ ಹಾನಿ ಬಂದಲ್ಕಿ
ಒಡಲನಿರಿಸುವದೇ ಭಂಗ ನೋಡಯ್ಯ
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರ ಲಿಂಗವಾದಡೂ ತಪ್ಪನೊಪ್ಪಿಕೊಳ್ಳ ಕಾಣಾ ಮಡಿವಾಳಯ್ಯಾ
ಸತ್ಯ ಶುದ್ಧ ಕಾಯಕದಲ್ಲಿ ದುಡಿದು ತಂದುಲಿಂಗಾರಗಪಿತವ ಮಾಡುವವರಿಗೆ ಯಾರದೂ ಹಂಗಿಲ್ಲವೆನ್ನುವ ನೈತಿಕತೆಯನ್ನು ಶರಣರು ಬೋದಿಸಿದರು." ನೇಮದಕೂಲಿಯ ಬಿಟ್ಟು ಹೇಮದಾಸೆಗೆ ಕೈಚಾಚುವದನ್ನು ಅವರು ವಿರೋಧಿಸಿದರು.ಹೀಗೆ ಶರಣರು ನೈಷ್ಠಿಕ ಬದುಕಿಗೆ ಆದಗಯತೆ ನೀಡಿದ್ದರೆಂದೇ ಆರಾಧ್ಯರಾದರು ಲೋಕಪೂಜ್ಯರಾದರು.
- ಡಾ.ವೈ.ಎಂ.ಯಾಕೊಳ್ಳಿ,
ಸವದತ್ತಿ
ಮೊ. 9731970857