ಧಾರವಾಡ 11: ಭಾರತ ಚುನಾವಣಾ ಆಯೋಗವು ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳನ್ನು ಘೋಷಣೆ ಮಾಡಿದ್ದು, ನಿನ್ನೆ ಮಾ.10 ರಂದು ಸಂಜೆ 5 ಗಂಟೆಯಿಂದ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 16,88,067 ಮತದಾರರಿದ್ದಾರೆ. 2ನೇ ಹಂತದಲ್ಲಿ ಅಂದರೆ ಎಪ್ರಿಲ್ 23 ರಂದು ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮಾಚರ್್ 28 ರಂದು ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಆತ್ಮರಕ್ಷಣೆ ಮತ್ತು ಬೆಳೆ ಸಂರಕ್ಷಣೆಗಾಗಿ ಅನುಜ್ಞಪ್ತಿದಾರರು ಹೊಂದಿರುವ ಆಯುಧಗಳನ್ನು ಪೊಲೀಸರ ಅಭಿರಕ್ಷೆಯಲ್ಲಿ ಠೇವಣಿ ಇಡಲು ಆದೇಶಿಸಲಾಗಿದೆ. ಎಲ್ಲ ಸಕರ್ಾರಿ ಅತಿಥಿ ಗೃಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ನಿಗಮ ಮಂಡಳಿಗಳಿಗೆ ನಾಮನಿದರ್ೆಶನಗೊಂಡಿರುವ ಪ್ರತಿನಿಧಿಗಳಿಗೆ ಒದಗಿಸಲಾಗಿರುವ ಸಕರ್ಾರಿ ವಾಹನಗಳನ್ನು ಹಿಂದಿರುಗಿಸಲು ಸೂಚಿಸಲಾಗಿದೆ. ಸಕರ್ಾರದ ವಿವಿಧ ಇಲಾಖೆಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹೆದ್ದಾರಿ ಫಲಕಗಳಲ್ಲಿ ಅಳವಡಿಸಿರುವ ಭಿತ್ತಿಚಿತ್ರಗಳನ್ನು ತೆರವುಗೊಳಿಸುವ ಕಾರ್ಯ ಚುರುಕಿನಿಂದ ನಡೆದಿದೆ. ಲೋಕಸಭಾ ಚುನಾವಣೆಗೆ ಸ್ಪಧರ್ಿಸುವ ಅಭ್ಯಥರ್ಿಗಳ ಚುನಾವಣಾ ವೆಚ್ಚವನ್ನು 70 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯಥರ್ಿಗಳಿಗೆ ರೂ.25,000/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯಥರ್ಿಗಳಿಗೆ ರೂ.12,500/- ಭದ್ರತಾ ಠೇವಣಿ ನಿಗದಿಪಡಿಸಲಾಗಿದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರವು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕವಾಗಿರುವುದು ವಿಶೇಷವಾಗಿದೆ.
ಮತದಾರರ ಮಿಂಚಿನ ನೋಂದಣಿ ಮೂಲಕ 61,000 ಮತದಾರರನ್ನು ಸೇರಿಸಲಾಗಿದೆ. ಮಿಂಚಿನ ನೋಂದಣಿಯಿಂದ ಶೇ.1.13 ಮತದಾರರ ಹೆಚ್ಚಳವಾಗಿದೆ. ಜನಸಂಖ್ಯೆ ಮತ್ತು ಮತದಾರರ ಅನುಪಾತವು ಶೇ. 70.87 ರಷ್ಟಿದೆ. ಲಿಂಗಾನುಪಾತವು 973 ರಷ್ಟಿದೆ. 18 ವರ್ಷ ಪೂರ್ಣಗೊಂಡ 32,438 ಹೊಸ ಯುವ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. 12,846 ವಿಶೇಷಚೇತನ ಮತದಾರರಿದ್ದಾರೆ.
ಮೊಬೈಲ್ ಆ್ಯಪ್, ಮತದಾರರ ಸಹಾಯವಾಣಿ: ಸಾರ್ವಜನಿಕರು, ಮತದಾರರು ತಮ್ಮ ಗಮನಕ್ಕೆ ಬರುವ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ನೇರವಾಗಿ ಒದಗಿಸಲು ಈ ಬಾರಿ ಸಿವಿಜಿಲ್ ಎಂಬ ಮೊಬೈಲ್ ಅಪ್ಲಿಕೇಷನ್ನ್ನು ಬಳಸಲಾಗುತ್ತಿದೆ. ಆಂಡ್ರಾಯ್ಡ್ ಸೌಲಭ್ಯವುಳ್ಳ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಮೊಬೈಲ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ದೂರು ಸಲ್ಲಿಸುವ, ಮಾಹಿತಿ ನೀಡುವವರ ಹೆಸರನ್ನು ಅವರು ಬಯಸಿದರೆ ಗೌಪ್ಯವಾಗಿ ಇಡಲಾಗುವುದು. ದೂರು ನೀಡಿದ 100 ನಿಮಿಷದೊಳಗಾಗಿ ಕೈಗೊಂಡ ಕ್ರಮದ ಕುರಿತು ಮಾಹಿತಿ ಒದಗಿಸಲಾಗುವುದು. 1950 ಮತದಾರರ ಸಹಾಯವಾಣಿ ಮೂಲಕ ತಮ್ಮ ಮತಗಟ್ಟೆ, ವಿಳಾಸ ತಿಳಿದುಕೊಳ್ಳಬಹುದು. ಅದೇ ರೀತಿ ವಿಶೇಷ ಚೇತನರಿಗಾಗಿ ಪ್ರತ್ಯೇಕ ಆ್ಯಪ್ ಮತ್ತು ಚುನಾವಣಾ ಕಣದಲ್ಲಿರುವ ಅಭ್ಯಥರ್ಿಗಳಿಗೆ ವಿವಿಧ ಅನುಮತಿಗಳನ್ನು ಪಡೆಯಲು ಅನುಕೂಲವಾಗುವಂತೆ ಸುವಿಧಾ ಕ್ಯಾಂಡಿಡೇಟ್ ಆ್ಯಪ್ ಪರಿಚಯಿಸಲಾಗಿದೆ ಎಂದು ವಿವರಿಸಿದರು.
ಜಾಹೀರಾತು ಪೂವರ್ಾನುಮತಿ ಕಡ್ಡಾಯ : ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಿಗೆ ಜಾಹೀರಾತು ಕಳುಹಿಸುವ ಮುನ್ನ ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ಮೂಲಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಮಾತನಾಡಿ, ಅವಳಿ ನಗರ ನ್ಯಾಪ್ತಿಯಲ್ಲಿ 13, ಉಳಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 10 ಚೆಕ್ಪೋಸ್ಟ್ಗಳನ್ನು ತೆರೆಯಲಾಗುತ್ತಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ 4 ಜನ ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ. 1 ಅರೆಸೇನಾ ಪಡೆಯ ತುಕಡಿ ಈಗಾಗಲೇ ನಗರಕ್ಕೆ ಆಗಮಿಸಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಹಾಗೂ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.