ನೆರೆ ಹಾನಿಗೊಳಗಾದ ಶಾಲೆ ಅಂಗನವಾಡಿ ಕಟ್ಟಡಗಳ ವರದಿಗೆ ಸೂಚನೆ

ಗದಗ  :  ಜಿಲ್ಲೆಯಲ್ಲಿ  ಇತ್ತೀಚೆಗೆ ನೆರೆ ಪ್ರವಾಹದಿಂದ  ಸಂಕಷ್ಟಕ್ಕೊಳಗಾದ ಗ್ರಾಮಗಳಲ್ಲಿನ  ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳ  ಸ್ಥಳಗಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಹಾನಿಗಳ ವರದಿಯನ್ನು ತಯಾರಿಸಿ ಸಲ್ಲಿಸಬೇಕು.  ಇದಕ್ಕಾಗಿ ವಿಶೇಷ ಕ್ರಿಯಾ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದು ಹಾವೇರಿ ಲೋಕಸಭಾ  ಸದಸ್ಯ  ಸಂಸದ ಶಿವಕುಮಾರ ಉದಾಸಿಯವರು ತಿಳಿಸಿದರು.    

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗದಗ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು  ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಗೆ ಸಂಬಂಧಿಸಿದಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳನ್ನೊಳಗೊಂಡಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸಬೇಕು.  ಸಾಮಾಜಿಕ ಲೆಕ್ಕ ಪರಿಶೋಧನೆ ವ್ಯವಸ್ಥೆಯನ್ನು   ಬಲಿಷ್ಟಪಡಿಸಿದರೆ ಯೋಜನೆಗಳ ದುರುಪಯೋಗ  ತಪ್ಪುತ್ತದೆ.   ರೈತರಿಗೆ ಬೆಳೆ ಸಾಲ ನೀಡಲು ವಿಳಂಬ ಮಾಡದೇ  ಲೀಡ್ ಬ್ಯಾಂಕ್ನವರು ಸಹಕರಿಸಬೇಕು.  ಸ್ವಚ್ಛ ಪರಿಸರ ಕಾಪಾಡಲು  ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಮುದಾಯ ಶೌಚಾಲಯಗಳ ಸಮರ್ಪಕ  ಬಳಕೆ ಕುರಿತು  ಸಮೀಕ್ಷೆ ನಡೆಸಲು  ಸಂಸದರು ಸೂಚನೆ ನೀಡಿದರು. 

       ಜಿಲ್ಲೆಯಲ್ಲಿ  ಪ್ರಧಾನ ಮಂತ್ರಿ  ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ ಈಗಾಗಲೇ ಜಿಲ್ಲೆಯ 132231  ರೈತರು   ಹೆಸರನ್ನು ನೊಂದಾಯಿಸಿದ್ದು ಆ ಪೈಕಿ  106351 ಜನರಿಗೆ ಹಣ  ಪಾವತಿ ಆರಂಭಗೊಂಡಿದೆ.  ರಸಗೊಬ್ಬರ ವಿತರಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿದರ್ೇಶಕ ರುದ್ರೇಶಪ್ಪ ತಿಳಿಸಿದರು.          

      ವೃದ್ಧಾಪ್ಯ ವೇತನ ಯೋಜನೆಯಡಿ 28,903 ಫಲಾನುಭವಿಗಳಿಗೆ 2.35 ಕೋಟಿ,      ವಿಧವಾ ವೇತನ ಯೋಜನೆಯಡಿ  61,708  ಫಲಾನುಭವಿಗಳಿಗೆ 3.76  ಕೋಟಿ ರೂ., ಅಂಗವಿಕಲರ ವೇತನ ಯೋಜನೆಯಡಿ 3.15 ಕೋಟಿ ರೂ. ವಿತರಣೆ  ಆಗಿದೆ ಎಂದು  ಅಪರ ಜಿಲ್ಲಾಧಿಕಾರಿ  ಶಿವಾನಂದ ಕರಾಳೆ ಅವರು  ತಿಳಿಸಿದರು.  ರಾಷ್ಟ್ರೀಯ ಆರೋಗ್ಯ  ಅಭಿಯಾನದಡಿ ವಿವಿಧ ಕಾರ್ಯಕ್ರಮಗಳಿಗಾಗಿ 22.97 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು   9.13 ಕೋಟಿ ರೂ.  ಖಚರ್ಾಗಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ವಿರುಪಾಕ್ಷರಡ್ಡಿ ಮಾದಿನೂರ ಸಭೆಗೆ ತಿಳಿಸಿದರು.  ಐ.ಸಿ.ಡಿ.ಎಸ್. ಯೋಜನೆಯಡಿ  13.58 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಆ ಪೈಕಿ 8.76  ಕೋಟಿ ರೂ. ಖಚರ್ಾಗಿದೆ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕಿ ಅಕ್ಕಮಹಾದೇವಿ ತಿಳಿಸಿದರು.

       ಸಭೆಯಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆ,   ತೋಟಗಾರಿಕೆ, ಹೆಸ್ಕಾಂ, ನಗರಾಭಿವೃದ್ಧಿ,  ಜಿಲ್ಲಾ ಕೌಶಲ್ಯಾಭಿವೃದ್ಧಿ,    ಆಹಾರ ನಾಗರಿಕ ಸರಬರಾಜು, ಭಾರತ ಸಂಚಾರ ನಿಗಮ,  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡಸಲಾಯಿತು.    

        ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ  ಸಿದ್ಧಲಿಂಗೇಶ್ವರ ಎಚ್.  ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ,   ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ,  ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶ ರಾವ್, ಜಿ.ಪಂ. ಯೋಜನಾ ನಿದರ್ೇಶಕ ಟಿ. ದಿನೇಶ,  ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.