ಬೆಂಗಳೂರು,
ಮಾ. 31,ಲಾಕ್ ಡೌನ್ ಸಮಯದಲ್ಲಿ ಮಹಾಮಾರಿ ಕೊರೋನಾ ಹರಡವುದನ್ನು ನಿಯಂತ್ರಿಸಲು
ಮುಂದಾಗಿರುವ ರಾಜ್ಯ ಸರ್ಕಾರ ಅಗತ್ಯ ಸೇವೆ ಒದಗಿಸುತ್ತಿರುವ ಇಲಾಖೆಗಳ ಸರ್ಕಾರಿ ಮತ್ತು
ಹೊರಗುತ್ತಿಗೆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.ಸಿಬ್ಬಂದಿ
ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಮುನೀಶ್ ಮೌದ್ಗೀಲ್ ಆದೇಶ ಹೊರಡಿಸಿದ್ದು,
ಕರ್ತವ್ಯಕ್ಕೆ ಹಾಜರಾಗಲು ಸರ್ಕಾರಿ ಮತ್ತು ಹೊರಗುತ್ತಿಗೆ ನೌಕರರಿಗೆ ಸೂಚಿಸಿದ್ದಾರೆ.ಆಯಾ
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಇಲಾಖೆಯಿಂದ ನೀಡಿರುವ
ಗುರುತಿನ ಚೀಟಿಯನ್ನು ತಪಾಸಣೆ ವೇಳೆ ಪೊಲೀಸರಿಗೆ ಹಾಜರುಪಡಿಸಿದರೆ ಚೆಕ್ ಪೋಸ್ಟ್ ನಲ್ಲಿ
ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಸರ್ಕಾರಿ ನೌಕರರು
ಪ್ರಯಾಣಿಸುವ ಸರ್ಕಾರಿ ಅಥವಾ ಹೊರಗುತ್ತಿಗೆ ವಾಹನಗಳಿಗೆ ಪ್ರತ್ಯೇಕ ಪಾಸ್ ಅವಶ್ಯಕತೆ
ಇರುವುದಿಲ್ಲ. ಆದರೆ ಹೊರಗುತ್ತಿಗೆ ನೌಕರರಿಗೆ ವಾರ್ ರೂಮ್ ನಿಂದ ಗುರುತಿನ ಚೀಟಿ
ನೀಡಲಾಗುತ್ತಿದ್ದು ಅಗತ್ಯ ಮಾಹಿತಿಯನ್ನು ಇಂದು ಸಂಜೆಯೊಳಗೆ ಇಮೇಲ್ ಮೂಲಕ ತಲುಪಿಸಲು
ಸೂಚಿಸಿದ್ದಾರೆ