ವಿಜಯಪುರ: 05 ರಿಂದ 16 ವರ್ಷರೊಳಗಿನ ಮಕ್ಕಳ ಆರೋಗ್ಯ ಅನುಕೂಲಕ್ಕಾಗಿ ಬರುವ ಡಿ.11ರಿಂದ 31ರ ವರೆಗೆ ಡಿ.ಪಿ.ಟಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಆರು ವರ್ಷ ಮೇಲ್ಪಟ್ಟು 16 ವರ್ಷದ ವರೆಗಿನ ಮಕ್ಕಳಿಗೆ ಡಿಪಿಟಿ/ಟಿಡಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಎರಡು ಕಾರ್ಯಕ್ರಮಗಳ ಅಂಗವಾಗಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ವಾಯ್.ಎಸ್ ಪಾಟೀಲ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಲಸಿಕಾ ಕಾರ್ಯಕ್ರಮದ ಅಂಗವಾಗಿ ಯಾವುದೇ ಮಗು ಲಸಿಕೆಯಿಂದ ವಂಚಿತ ಆಗದಂತೆ ಎಚ್ಚರಿಕೆ ವಹಿಸಬೇಕು ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಅದರಂತೆ ಪೋಲಿಯೋ ಮೈಕ್ರೋಪ್ಲ್ಯಾನನ್ನು ನ.10ರೊಳಗೆ ಸಿದ್ಧಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಗಂಭೀರವಾಗಿ ಅಧಿಕಾರಿಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸಬೇಕು ಅಪಾಯಕಾರಿ ಪೋಲಿಯೋ ವಲಯಗಳಲ್ಲಿ ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಶಾಲೆಯಿಂದ ಹೊರಗುಳಿದ ಹಾಗೂ ಗುಳೆಹೋಗುವ ಕುಟುಂಬಗಳ ಮಕ್ಕಳ ಪಟ್ಟಿಯನ್ನು ಸಹ ಸಿದ್ಧಪಡಿಸಿಕೊಂಡು ಮಕ್ಕಳು ಈ ಲಸಿಕೆಯಿಂದ ವಂಚಿತವಾಗದಂತೆ ನಿಘಾವಹಿಸಲು ಅವರು ಸೂಚಿಸಿದರು.
ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಆಗುವ ಸಾವಿನ ಪ್ರಕರಣಗಳಿಗೆ ಸಂಬಂದ ಪಟ್ಟಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ದೃಢೀಕರವಿಲ್ಲದೆ ಸಾವಿನ ಕಾರಣವನ್ನು ಘೋಸಿಸುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ. ಅದರಂತೆ ವಿವಿಧ ಸಕರ್ಾರಿ ಆಸ್ಪತ್ರೆಗಳ ಹಾಗೂ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಅನಾರೋಗ್ಯದ ಪ್ರಯುಕ್ತ ದಾಖಲಾಗುವ ಸಾರ್ವಜನಿಕ ರೋಗಿಗಳಿಗೆ ಖಾಸಗಿ ವೈದ್ಯರು ಸಕಾಲಕ್ಕೆ ಸ್ಪಂದಿಸಿ ಚಿಕಿತ್ಸೆ ಒದಗಿಸುವುದರ ಜೊತೆಗೆ ಸಾಂತ್ವಾನ ಹೇಳುವಂತೆ ಕಾರ್ಯವನ್ನು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಶ್ರೀ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ್ಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಶ್ರೀ ಸಿ.ಬಿ ಕುಂಬಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೆಶಕ ಶ್ರೀ ಪ್ರಸನ್ನ ಕುಮಾರ, ತಂಬಾಕು ನಿಯಂತ್ರಣಾಧಿಕಾರಿ ಶ್ರೀ ಬಿರಾದಾರ, ಸಕರ್ಾರೇತರ ಸಂಸ್ಥೆಗಳಿಂದ ಫೀಟರ್ ಅಲೇಕ್ಸಾಂಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.