ತಾಳಿಕೋಟಿ 18: 76ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು.
ಪಟ್ಟಣದ ತಾಲೂಕ ಆಡಳಿತ ಸಭಾಂಗಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಆಚರಣೆ ಕುರಿತು ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನವರಿ 26ರಂದು ಬೆಳಿಗ್ಗೆ 7-30 ರ ಒಳಗಾಗಿ ಎಲ್ಲಾ ಸರ್ಕಾರಿ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರೆವೇರಿಸುವುದು, ನಂತರ ಬೆಳಿಗ್ಗೆ 8-30 ಕ್ಕೆ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕ ಆಡಳಿತದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ತಹಸಿಲ್ದಾರ್ ಕೀರ್ತಿ ಚಾಲಕ್ ಅವರ ನೇತೃತ್ವದಲ್ಲಿ ನೆರವೇರಿಸಲಾಗುವುದು. ಪೊಲೀಸ್ ಇಲಾಖೆ ಹಾಗೂ ಎನ್.ಸಿ.ಸಿ. ಕೆಡಿಟ್ ಗಳಿಂದ ಆಕರ್ಷಕ ಕವಾಯಿತು ಮೂಲಕ ಧ್ವಜವಂದನೆಯನ್ನು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಸ್ವೀಕರಿಸುವರು. 5 ಶಾಲೆಗಳ ವಿದ್ಯಾರ್ಥಿಗಳ ಮೂಲಕ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸಭೆ ನಿರ್ಧರಿಸಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಎಲ್ಲಾ ಜವಾಬ್ದಾರಿಗಳನ್ನು ವಿವಿಧ ಇಲಾಖೆ ಹಾಗೂ ಸಂಬಂಧಿಸಿದವರಿಗೆ ವಹಿಸಿಕೊಡಲಾಯಿತು. ಸಭೆಯಲ್ಲಿ ಮುಖಂಡರಾದ ಕಾಶೀನಾಥ ಮುರಾಳ, ಜಿ.ಜಿ.ಮದರಕಲ್ಲ, ಪ್ರಭುಗೌಡ ಮದರಕಲ್ಲ, ಕಸಾಪ ಅಧ್ಯಕ್ಷ ಆರ್.ಎಲ್. ಕೊಪ್ಪದ, ಬಿ.ಎಸ್. ಇಸಾಂಪೂರ, ಗಂಗಾಧರ ಕಸ್ತೂರಿ, ಮಂಜುನಾಥ ಶೆಟ್ಟಿ, ರಾಘು ಚೌವಾಣ, ನಾಗರಾಜ ಮೋಟಗಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ, ಮುದುಕಪ್ಪ ಬಡಿಗೇರ, ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ಶಿರಸ್ತೆದಾರ ಜೆ.ಆರ್.ಜೈನಾಪೂರ, ಬಿ.ಆರಿ್ಸ.ಹಿರೇಮಠ, ಸಿ.ಆರಿ್ಸ.ರಾಜು ವಿಜಾಪುರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.