ಹನಿಟ್ರಾಪ್ ಮಾಡಿಸುವಂಥದ್ದಲ್ಲ : ಮೀನುಗಾರಿಕಾ ಸಚಿವ ಮಂಕಾಳು ವೈದ್ಯ
ಕಾರವಾರ 25: ಹನಿಟ್ರಾಪ್ ಮಾಡಿಸುವಂಥದ್ದಲ್ಲ, ಮಾಡಿಸುವಂಥದ್ದಲ್ಲ, ಅದಕ್ಕೆ ತುತ್ತಾಗುವವರ ಅಜಾಗ್ರತೆ ಕಾರಣ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅಭಿಪ್ರಾಯಪಟ್ಟರು .ಕಾರವಾರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.ಹನಿಟ್ರಾಪ್ ವಿಷಯ ಸದನದಲ್ಲಿ ಎತ್ತಬಾರದಿತ್ತು. ಈಗ ಎತ್ತಿಯಾಗಿದೆ. ಮಾಧ್ಯಮದಲ್ಲಿ ಬರಬಾರದಿತ್ತು, ಬಂದಾಗಿದೆ ಎಂದರು. ಯತ್ನಾಳ್ ಗೆ ಚೀಟಿ ಕೊಟ್ಟವರಾರು ಎಂಬ ಪ್ರಶ್ನೆಗೆ , ಅದಾರೇ ಇರಲಿ. ಈಗ ಅದು ಮುಗಿದಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಮಂತ್ರಿಯಾದವರ ಕತೆಯೂ ಇದೆ. ಅವರ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟನಿಂದ ತಡೆಯಾಜ್ಞೆ ತಂದಿದ್ದರು. ಅದನ್ನು ಅವರು, ಆ ಪಕ್ಷದವರು ,ಯತ್ನಾಳ್ ಮರೆಯಬಾರದು ಎಂದರು. ಈ ವಿಷಯ ಇಲ್ಲಿಗೆ ಬಿಡುವುದು ಒಳಿತು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಸ್ಸೀಮರು ಎಂದು ಸಚಿವ ವೈದ್ಯ ಹೇಳಿದರು.ಕೇಣಿ ಬಂದರು :ಅಂಕೋಲಾದ ಕೇಣಿ ಬಂದರು ನಿರ್ಮಾಣ ಮುನ್ನ ಸರ್ವೆ ಮಾಡುತ್ತಿರುವ ಜೆಎಸ್ ಡಬ್ಲು ಕಂಪನಿಗೆ ಟೋಪಿ ಹಾಕಿ ಓಡಿಸಲು ಕೆಲವರು ಪ್ರಯತ್ನಕ್ಕೆ ಇಳಿದಿದ್ದಾರೆ. ಇವರಲ್ಲಿ ಒಂದು ಗುಂಪು ಮೊದಲೇ ಭೂಮಿ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ಬಾಚಿದೆ. ಇವರಿಗೆ ಕಂಪನಿ ಬರದಿದ್ದರೆ ಲಾಭ ಎಂದುಸಚಿವ ಮಂಕಾಳ ವೈದ್ಯ ಹೇಳಿದರು . ಕಂಪನಿ ಹೋದರೆ ಹಣ ಟೋಪಿ ಹಾಕಬಹುದು ಎಂದು ಕೆಲವರು ಪ್ರಯತ್ನಿಸಿದ್ದಾರೆ. ಇದು ನನಗೂ ಗೊತ್ತಿಲ್ಲ, ಶಾಸಕರಿಗೂ ಗೊತ್ತಿಲ್ಲ. ಆದರೆ ಕಂಪನಿ ಅವರು , ಟೋಪಿ ಹಾಕಿದವರನ್ನು ಹಾಗೇ ಸುಮ್ಮನೇ ಬಿಡುವುದಿಲ್ಲ. ಬಂದರು ಅಭಿವೃದ್ಧಿ ಯೋಜನೆ ನಾವು ಮಾಡಿದ್ದಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಟೊಂಕಾ, ಕೇಣಿ ಬಂದರು ಯೋಜನೆ ಅನುಮೋದನೆ ಯಾಗಿದೆ . ಇನ್ನೊಬ್ಬರಿಗೆ ತೊಂದರೆ ಕೊಟ್ಟು ಅಭಿವೃದ್ಧಿ ಮಾಡುವ ಅಗತ್ಯತೆ ನಮ್ಮಗಿಲ್ಲ. ಕೆಲವನ್ನು ವಿರೋಧದ ನಡುವೆಯೂ ಮಾಡಬೇಕಾಗುತ್ತದೆ. ಕೆಲವನ್ನು ವಿರೋಧ ಬಂದಾಗ ಬಂದ್ ಮಾಡಬೇಕಾಗುತ್ತದೆ. ಇದೀಗ ಕೇಣಿಯಲ್ಲಿ ಜೆಎಸ್ ಡಬ್ಲು ಸರ್ವೆ ಕಾರ್ಯ ಮಾತ್ರ ನಡೆಯುತ್ತಿದೆ . ಬಂದರು ಮಾಡಬಹುದಾ, ಇಲ್ಲವಾ ಎನ್ನುವುದನ್ನ ನೋಡುತ್ತಾರೆ. ಬಂದರು ಮಾಡಲು ಫಿಜಿಬಿಲಿಟಿ ಬರಬೇಕು. ಫಿಜಿಬಲಿಟಿ ಬರದಿದ್ದರೆ , ಸರ್ವೆ ಖರ್ಚು 3 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ. ಬಂದರು ಆಗಲ್ಲ ಎಂದಾದರೆ ಕಂಪನಿಯವರು ತಾವಾಗಿಯೇ ವಾಪಾಸ್ ಹೋಗುತ್ತಾರೆ. ಯೋಜನೆ ಆಗುತ್ತದೆ ಎಂದಾದರೆ ಹೇಗೆ ಮಾಡಬಹುದು ಎಂಬುದನ್ನು ನೋಡೋಣ. ಜನರಿಗೆ ಉದ್ಯೋಗ, ಅಭಿವೃದ್ಧಿ ಎರಡೂ ಆಗಬೇಕು. ಸಚಿವ ವೈದ್ಯರು ಅಧಿಕಾರ ಅವಧಿಯಲ್ಲಿ ಏನೂ ಮಾಡಲಿಲ್ಲ ಎಂದಾಗಬಾರದು. ಜನರಿಗೂ ತೊಂದರೆ ಆಗಬಾರದು. ಎರಡನ್ನು ನಾವು ನಿಭಾಯಿಸುತ್ತೇವೆ. ನಾವು ಮುಂದೆ ಅಧಿಕಾರಕ್ಕೆ ಬರಬೇಕು. ಅಭಿವೃದ್ಧಿ ಆಗಬೇಕು ಹಾಗೂ ಬಿಜೆಪಿ ಸೋಲಿಸಬೇಕು .ಎಲ್ಲವೂ ನಮ್ಮ ಯೋಜನೆಯಲ್ಲಿದೆ. ಜಿಲ್ಲಾ ಪಂಚಾಯತ ಚುನಾವಣೆಯನ್ನು ಸಹ ಗಮನದಲ್ಲಿಡಬೇಕಿದೆ ಎಂದರು . ಶಾಸಕ ಸೈಲ್ ಇತರರು ಸಚಿವ ವೈದ್ಯರ ಜೊತೆಗೆ ಇದ್ದರು.