ನವದೆಹಲಿ, ನವೆಂಬರ್ 9 : ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನ್ ಐತಿಹಾಸಿಕ ತೀರ್ಪುನ ಕುರಿತು ಮುಸ್ಲಿಂ ಪಕ್ಷದವರು ತಾತ್ಕಾಲಿಕವಾಗಿ ಪ್ರತಿಕ್ರಿಯಿಸಿದ್ದು, ತೀರ್ಪುನ ಕೆಲವು ಭಾಗಗಳು ತೃಪ್ತಿದಾಯಕವಾಗಿಲ್ಲ, ಆದರೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್ನ್ ತೀರ್ಪುನ ನಂತರ ಮಾತನಾಡಿದ ಸುಪ್ರೀಂ ಕೋರ್ಟ್ನ್ಲ್ಲಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ ಜಫರ್ ಯಾಬ್ ಜಿಲಾನಿ, ಈ ತೀರ್ಪುನಿಂದ ತೃಪ್ತರಾಗಿಲ್ಲ ಮತ್ತು ಅದರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ. ನಾವು ತೀರ್ಪುನ ಬಗ್ಗೆ ತೃಪ್ತರಾಗಿಲ್ಲ. ಇದು ನ್ಯಾಯ ಎಂದು ನಾವು ಭಾವಿಸುವುದಿಲ್ಲ. ನಾವು ಇಡೀ ತೀರ್ಪನ್ನು ಓದುತ್ತೇವೆ ಎಂದು ಹೇಳಿದರು. ತೀಪು ಓದಿದ ನಂತರ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೇ ಬೇಡವೇ ಎಂಬುದರ ಬಗ್ಗೆ ಎಂದು ನಿರ್ಧರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. "ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಮುಸ್ಲಿಮರಿಗೆ ಐದು ಎಕರೆ ಪರ್ಯಾಯ ಭೂಮಿಯನ್ನು ನೀಡುವ ತೀರ್ಪುನ ಎಲ್ಲಾ ಅಂಶಗಳನ್ನು ಅವರು ಟೀಕಿಸುತ್ತಿಲ್ಲ ಎಂದು ಹೇಳಿದರು.