ಬೆಂಗಳೂರು, ಆ. 27 ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರಗೊಂಡಿಲ್ಲ ಎಂದು ಶಾಸಕ ರಾಮದಾಸ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ಭಾಗಕ್ಕೆ ಯಾರಿಗೂ ಸಚಿವ ಸ್ಥಾನ ಕೊಡಲಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ ನನಗೆ ಇದು ಇವರೆಗೂ ಅರ್ಥವಾಗಿಲ್ಲ ಎಂದರು. ದಸರಾ ಉತ್ಸವಕ್ಕೆ ಅಸಹಕಾರ ನೀಡಿಲ್ಲ ಸಹೋದರನೊಂದಿಗೆ ಪ್ರಯಾಣಿಸುವಾಗ ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಹೀಗಾಗಿ ದಸರಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಲಿಲ್ಲ.ಅದನ್ನೇ ಸಚಿವರು ತಪ್ಪಾಗಿ ಭಾವಿಸಿದ್ದಾರೆ ಎಂದರು. ಆರೋಗ್ಯ ಸರಿ ಇಲ್ಲದೇ ಇದ್ದರೂ ಇಂದು ಪಕ್ಷಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ನಾನು ಸರ್ಕಾರದಲ್ಲಿ ಇಲ್ಲದೇ ಇದ್ದರೂ ಪಕ್ಷದಲ್ಲಿ ಇದ್ದೇನೆ ದಸರಾ ಕೆಲಸವನ್ನು ಅರ್ದದಷ್ಟು ಆಗಲೇ ಮುಗಿಸಿದ್ದೇನೆ.ಶಾಸಕನಾಗಿ ದಸರಾ ಅಚ್ಚುಕಟ್ಟಾಗಿ ನಡೆಸಿಕೊಡುವುದು ತಮ್ಮ ಹೊಣೆ ಎಂಬುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.