ಬಿ ಫಾರಂ ಕೊಡದೆ ನಾಮಿನೇಶನ್ ತಪ್ಪಲ್ಲ: ಸಚಿವ ರಾಮಲಿಂಗ ರೆಡ್ಡಿ

ಬಿ ಫಾರಂ ಕೊಡದೆ ನಾಮಿನೇಶನ್ ತಪ್ಪಲ್ಲ: ಸಚಿವ  ರಾಮಲಿಂಗ ರೆಡ್ಡಿ  Nomination without submitting B form is not wrong: Minister Ramalinga Reddy

ಕಾರವಾರ 20 : ಬಿ ಫಾರಂ ಕೊಡದೆ ನಾಮಿನೇಶನ್ ಹಾಕೋದು  ತಪ್ಪಲ್ಲ ಎಂದು ಸಚಿವ  ರಾಮಲಿಂಗ ರೆಡ್ಡಿ ಹೇಳಿದರು. ದಾಂಡೇಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ದಾವಣಗೆರೆಯಲ್ಲಿ ಸಮರ್ಥ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ  ರಾಮಲಿಂಗ ರೆಡ್ಡಿ , ನಾಮಿನೇಶನ್ ನಾನು ಸಹ ಬಿಫಾರಂ ಸಿಗದ ಮೊದಲು ಹಾಕಿದ್ದೆ. ಕೆಲವರಿಗೆ ಸಮಯ, ದಿನದ ಬಗ್ಗೆ ನಂಬಿಕೆ ಇರುತ್ತದೆ. ಹಾಗಾಗಿ ನಾಮಪತ್ರ ಸಲ್ಲಿಸುತ್ತಾರೆ. ಅದರಲ್ಲಿ  ತಪ್ಪಿಲ್ಲ ಎಂದರು. ಪಕ್ಷ ಯಾರಿಗೆ  ಬಿ ಫಾರಂ ಕೊಡಿತ್ತೋ ಅವರು ಕಣದಲ್ಲಿ ಉಳಿತಾರೆ.  ನಂತರ ಉಳಿದವರು ಕಣದಿಂದ ಹಿಂದೆ ಸರಿಯುತ್ತಾರೆ ಎಂದರು.