ಹೊಸದಿಲ್ಲಿ 18: ಸಂಸತ್ನ ಮುಂಗಾರು ಅಧಿವೇಶನ ಬುಧವಾರ ಆರಂಭವಾಗಿದ್ದು, ಸದನ ಆರಂಭವಾಗುತ್ತಿದ್ದಂತೆ ಟಿಡಿಪಿ ಸಂಸದರು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ತೀವ್ರ ಗದ್ದಲ ಉಂಟುಮಾಡಿದ್ದಾರೆ.
ಸಕರ್ಾರ ರೈತರ ನಿರಂತರ ಆತ್ಮಹತ್ಯೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 12 ಪಕ್ಷಗಳ ವಿಪಕ್ಷದ ಸಂಸದರು ಗೊತ್ತುವಳಿಗೆ ಬೆಂಬಲ ಸೂಚಿಸಿದ್ದಾರೆ.
50 ಕ್ಕೂ ಹೆಚ್ಚು ಸಂಸದರ ಸಹಿ ಇರುವ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿ ನೀಡಿದ್ದು, ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಂಡನೆಯ ಮೇಲೆ ಚಚರ್ೆ ನಡೆಯಲಿದ್ದು, ಎನ್ಡಿಎ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಜೊತೆಯಾಗಿ ಹೋರಾಟ ನಡೆಸಲಿವೆ. ಸಾಧ್ಯತೆಗಳಿವೆ.
ಸಮಾಜವಾದಿ ಪಕ್ಷದ ಸದಸ್ಯರು ಗುಂಪು ಹತ್ಯೆ ಮತ್ತು ಹಿಂಸಾಚಾರಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ್ದಾರೆ.
ರಾಜ್ಯ ಸಭಾ ಕಲಾಪದಲ್ಲಿ ತೀವ್ರ ಗದ್ದಲ ಕಂಡು ಬಂದ ಹಿನ್ನಲೆಯಲ್ಲಿ 12 ಗಂಟೆಯವರೆ ಮುಂದೂಡಲಾಯಿತು.
ಅಧಿವೇಶನಕ್ಕೂ ಮುನ್ನ ಸಂಸತ್ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ಎಲ್ಲಾ ಪಕ್ಷಗಳ ಸದಸ್ಯರು ಸಂಸತ್ನ ಅಮೂಲ್ಯವಾದ ಸಮಯವನ್ನು ಪರಸ್ಪರ ಸಹಕಾರದ ಮೂಲಕ ಸದುಪಯೋಗ ಪಡಿಸಿಕೊಳ್ಳುವ
ವಿಶ್ವಾಸವಿದೆ.
ಸಕರ್ಾರ ಎಲ್ಲಾ ವಿಚಾರಗಳ ಕುರಿತಾಗಿ ಚಚರ್ೆಗೆ ಸಿದ್ಧವಿದೆ. ನಾವು ನಮ್ಮ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ರಾಜ್ಯಗಳ ವಿಧಾನ ಸಭೆಗಳಿಗೆ ಹೆಚ್ಚಿನ ಸ್ಫೂತರ್ಿಯನ್ನು ತುಂಬಬೇಕಾಗಿದೆ ಎಂದು ಮನವಿ ಮಾಡಿದರು.