ದೇಶದಲ್ಲಿ ಔಷಧಗಳ ಕೊರತೆಯಿಲ್ಲ: ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯ ಸ್ಪಷ್ಟನೆ

ನವದೆಹಲಿ, ಏ 1,ಕೋವಿಡ್ 19 ಹಿನ್ನೆಲೆಯಲ್ಲಿ ದೇಶದಲ್ಲಿ ಔಷಧಗಳ ಕೊರತೆ ಇದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ಔಷಧಗಳ ಯಾವುದೇ ಔಷಧಿಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಚೈನಾದಲ್ಲಿ ಕೋವಿಡ್ 19 ಸೋಂಕು ಪತ್ತೆಯಾದ ನಂತರದಿಂದ ಈವರೆಗೆ ಸಚಿವಾಲಯ ಔಷಧಿಗಳ ಉತ್ಪಾದನೆ ಮತ್ತು ಪೂರೈಕೆ ಕುರಿತು ನಿರಂತರವಾಗಿ ಪರಿಶೀಲನೆ ಮಾಡುತ್ತಿದೆ. ಲಾಕ್ ಡೌನ್ ಅವಧಿಯಲ್ಲೂ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಹೇಳಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಔಷಧಿಗಳ ಲಭ್ಯತೆ, ಪೂರೈಕೆ ಕುರಿತಾಗಿ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಕೇಂದ್ರ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸೀಮಾ ಸುಂಕ ವಿಭಾಗ, ಕೇಂದ್ರ ಮತ್ತು ರಾಜ್ಯಗಳ ಔಷಧ ನಿಯಂತ್ರಕರು, ಔಷಧ ಮತ್ತು ವೈದ್ಯಕೀಯ ಸಂಘಟನೆಗಳ ಮುಖ್ಯಸ್ಥರ ಜತ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಔಷಧ ಕುರಿತ ಯಾವುದೇ ಕುಂದು ಕೊರತೆಗಳನ್ನು ನಿವಾರಿಸಲು ಸಚಿವಾಲಯ ಸಹಾಯವಾಣಿ ಕೇಂದ್ರ ಆರಂಭಿಸಿದ್ದು, ಸಂಬಂಧಪಟ್ಟವರು 011-23389840 ಗೆ ಕರೆ ಮಾಡಬಹುದು. ಇದಲ್ಲದೇ ರಾಷ್ಟ್ರೀಯ ಔಷಧ ದರ ನಿಯಂತ್ರಣ ಆಯೋಗ ಸಹ ಸಹಾಯವಾಣಿ ತೆರೆದಿದ್ದು, ದೂರವಾಣಿ ಸಂಖ್ಯೆ 1800111255