ಸವದತ್ತಿ: ಸಡಗರದ ಶ್ರೀ ದುರ್ಗಾದೇವಿ ಮೂರ್ತಿ ಮೆರವಣಿಗೆ - ಶಾಸಕ ವಿಶ್ವಾಸ ವೈದ್ಯ ಭಾಗಿ

ಸವದತ್ತಿ: ಸಡಗರದ ಶ್ರೀ ದುರ್ಗಾದೇವಿ ಮೂರ್ತಿ ಮೆರವಣಿಗೆ - ಶಾಸಕ ವಿಶ್ವಾಸ ವೈದ್ಯ ಭಾಗಿ Savadatti: Sri Durga Devi idol procession in Sadagara - MLA Vishwas Vaidya participates

       ​ಸವದತ್ತಿ: ನಗರದ ಎಪಿಎಂಸಿ ಸರ್ಕಲ್ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ದುರ್ಗಾದೇವಿಯ ಭವ್ಯ ಮೂರ್ತಿ ಮೆರವಣಿಗೆಯು ಭಕ್ತಾದಿಗಳ ಜಯಘೋಷ ಹಾಗೂ ಮಂಗಲ ವಾದ್ಯಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಮಂಗಲ ವಾದ್ಯಗಳು ಮತ್ತು ಭಕ್ತರ ಹರ್ಷೋದ್ಗಾರಗಳ ನಡುವೆ ದುರ್ಗಾದೇವಿಯ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

      ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆ ಸರ್ವಶಕ್ತಿ ದೇವಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ" ಎಂದು ಪ್ರಾರ್ಥಿಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಶ್ರದ್ಧೆ ಮತ್ತು ಭಕ್ತಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತ್ತು ಈ ವೇಳೆ ಊರಿನ ಹಿರಿಯರು ಹಾಗೂ ಪ್ರಮುಖ ಮುಖಂಡರು ಯುವಕರು, ಮಕ್ಕಳು ಸೇರಿ ಶಾಸಕರೊಂದಿಗೆ ಹೆಜ್ಜೆ ಹಾಕಿ ದೇವಿಯ ಆಶೀರ್ವಾದ ಪಡೆದರು.

      ದೇವಿಯ ಈ ಭವ್ಯ ಮೆರವಣಿಗೆಯಲ್ಲಿ ಭಕ್ತಾದಿಗಳೊಂದಿಗೆ ಸೇರಿ ಪಾಲ್ಗೊಂಡ ಕ್ಷಣಗಳು ಮನಸ್ಸಿಗೆ ನೆಮ್ಮದಿ ನೀಡಿದವು. ತಾಯಿ ದುರ್ಗಾದೇವಿಯು ಎಲ್ಲರಿಗೂ ಆಯುರಾರೋಗ್ಯ ನೀಡಲಿ ಎಂದು ಹೇಳಿದರು.