ಕಜ್ಜರಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಭೂಮಿ ಪೂಜೆ. ಭೂಮಿಗೆ ಬಂದ ಮಾನವನ ಜೀವನ ಶ್ರೇಷ್ಠವಾಗಿದೆ-ಕಾಗಿನೆಲೆ ಜಗದ್ಗುರುಗಳು

ಕಜ್ಜರಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಭೂಮಿ ಪೂಜೆ. ಭೂಮಿಗೆ ಬಂದ ಮಾನವನ ಜೀವನ ಶ್ರೇಷ್ಠವಾಗಿದೆ-ಕಾಗಿನೆಲೆ ಜಗದ್ಗುರುಗಳು Groundbreaking ceremony for the construction of Sri Biralingeshwara Temple in Kajjari village. The l

ರಾಣೇಬೆನ್ನೂರು 20:  ಭೂಮಿಗೆ ಬಂದ ಮಾನವನ ಜೀವ ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ದಾನ, ಧರ್ಮ ಮತ್ತು ಪರೋಪಕಾರ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಅಂದಾಗ ಮಾತ್ರ ಮಾನವನ ಜೀವನ ಸಾರ್ಥಕತೆ ಪಡೆಯಲಿದೆ ಎಂದು ಕಾಗಿನೆಲೆ  ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರು ನುಡಿದರು. ಅವರು ಗುರುವಾರ  ತಾಲೂಕಿನ  ಕಜ್ಜರಿ ಗ್ರಾಮದ, ಕುರುಬರ ಕೇರಿಯಲ್ಲಿ ಸ್ಥಳೀಯ  ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿಯು ನಿರ್ಮಾಣ ಮಾಡಲುದ್ದೇಶಿಸಿರುವ ಅಂದಾಜು 1,ಕೋಟಿ ರೂಗಳ ವೆಚ್ಚದ ನೂತನಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ   ಮಾತನಾಡಿದರು. 

 ಶ್ರೀ  ಬೀರಲಿಂಗೇಶ್ವರ ಸ್ವಾಮಿಯು ಕುರುಬ ಸಮುದಾಯದ ಕುಲ ಮನೆತನದ ಆರಾಧ್ಯ ದೈವವಾಗಿದ್ದರೂ, ಸಹ ಗ್ರಾಮೀಣ ಪ್ರದೇಶಗಳ ಮತ್ತು ನಾಡಿನ ಆರಾಧ್ಯದೈವವಾಗಿ ಪೂಜಿಸಲ್ಪಡುತ್ತಾರೆ ಎಂದರು. ಕುರುಬ ಸಮುದಾಯವು ಇತಿಹಾಸ ಪರಂಪರೆಯಿಂದ ಸಾಗಿ  ಬಂದಿರುವ, ನಿತ್ಯ ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳು,ಜಾತ್ರೆ,ಉತ್ಸವ ಸೇರಿದಂತೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜ ಮತ್ತಷ್ಟು  ಸಂಘಟನೆಗೆ ಮುಂದಾಗಿ, ಸರ್ವ ಜನಾಂಗದವರ  ಪ್ರೀತಿ, ವಿಶ್ವಾಸ ಗಳಿಸಿ ಭಾವೈಕ್ಯತೆ ಮೆರೆಯಬೇಕು ಇದುವೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದು ಜಗದ್ಗುರುಗಳು ನುಡಿದರು .     

ಗುದ್ದಲಿ ಪೂಜೆ ನೆರವೇರಿಸಿದ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು, ಇಂದಿನ ಆಧುನಿಕ ಬದುಕಿನ ವ್ಯವಸ್ಥೆಯಲ್ಲಿ, ಯಾರಿಗೂ ಶಾಂತಿ ನೆಮ್ಮದಿ ಮತ್ತು ಪ್ರೀತಿ, ವಿಶ್ವಾಸ ಕಾಣದೆ ನೇಪತ್ಯಕ್ಕೆ ಸರಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ದೇವಾಲಯಗಳು ಶಾಂತಿ ಮತ್ತು ನೆಮ್ಮದಿ ನೀಡುವ ತಾಣಗಳಾಗಲಿವೆ. ನೂತನ ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಕಾಮಗಾರಿಯು ಬೇಗನೆ ಮುಕ್ತಾಯ ಕಂಡು ಭಕ್ತರ ದರ್ಶನಾಶೀರ್ವಾದಕ್ಕೆ ಮುಂದಾಗಲಿ, ತಾವು ಸಹ ಅಗತ್ಯವಿರುವ,ಸಹಾಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಉದ್ದಿಮೆ ಷಣ್ಮುಖಪ್ಪ ಬಳ್ಳಾರಿ ಅವರು ಶುಭ ಹಾರೈಸಿದರು. ಶ್ರೀ ಬೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಕರೇಮಲ್ಲಣ್ಣನವರ ಅವರು ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಗಣ್ಯರಾದ ಉಮೇಶ ಕರಿಗಾರ, ಕಲ್ಲಪ್ಪ ವಡ್ದರ,ತಿರಕಪ್ಪ ಬುಡಪನಹಳ್ಳಿ, ಹಾಲಪ್ಪ ತಿಮ್ಮಜ್ಜಿ, ಬೀರೇಶ ಬೇಲೂರು, ಸುರೇಶ ಕರೇಮಲ್ಲಣ್ಣನವರ, ಗುತ್ಯಪ್ಪ ನಿಂಬಣ್ಣವರ, ಗೀರೀಶ ಘಂಟೇರ, ಗೋಮಾನೆಪ್ಪ ಶಿಡಗನಾಳ, ಪರಮೇಶ ಲಮಾಣಿ ಸೋಮನಗೌಡ ಪಾಟೀಲ, ಕರಿಯಪ್ಪ ಶಿಡಗನಾಳ, ರಾಮಪ್ಪ ರೀತ್ತಿ, ಹೇಮಂತ ತೋಟದಸೇರಿದಂತೆ ಗ್ರಾಮದ ನೂರಾರು ಮುಖಂಡರು, ಯುವಕರು, ಮಹಿಳೆಯರು ಹಾಗೂ ವಿಷ್ಣು ಸೇನಾ ಸಮಿತಿಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕು : ಸುಪ್ರೀತಾ- ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ವರ್ತಕ  ಗೀರೀಶ್ ಪಾಟೀಲ ಸ್ವಾಗತಿಸಿ,  ಚಂದ್ರ​‍್ಪ ಶಿಡಗನಾಳ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ  ವಾಗೀಶ ನಾಗರಹಳ್ಳಿ  ನಿರೂಪಿಸಿ, ನ್ಯಾಯವಾದಿ ವಿಜಯ್ ಮಾಯಮ್ಮನವರ ವಂದಿಸಿದರು.