ಬಿಹಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪ್ರಶ್ನೆಯೇ ಇಲ್ಲ: ನಿತೀಶ್

ಪಾಟ್ನಾ, ಜ 13:             ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಿಹಾರದಲ್ಲಿ   ಜಾರಿಗೆ ತರುವ  ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ  ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಮತ್ತೊಮ್ಮೆ ಸಮಗ್ರವಾಗಿ ಚರ್ಚಿಸಬೇಕಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಸಿಎಎ ಜಾರಿಗೆ   ಮಿತ್ರಪಕ್ಷದಲ್ಲೇ ಒಡಕು ಇದೆ ಎಂಬ ಸಂದೇಶ ರವಾನಿಸಿದ್ದಾರೆ.ಬಿಹಾರದಲ್ಲಿ ಎನ್ ಆರ್ ಸಿ ಜಾರಿಯ ಪ್ರಶ್ನೆಯೂ ಇಲ್ಲ ಎಂದಿದ್ದಾರೆ.ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಿಎಎ ಬಗ್ಗೆ ಚರ್ಚೆ ನಡೆಯಬೇಕು. ಎಲ್ಲರೂ ಬಯಸುವುದಾದರೆ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಯಾಗಲಿ ಎಂದರು.ಎನ್ ಆರ್ ಸಿ ಬಗ್ಗೆ ಮಾತನಾಡುವುದಾದರೆ ಎನ್ ಆರ್ ಸಿ ಜಾರಿಯ ಪ್ರಶ್ನೆಯೇ ಇಲ್ಲ ಮತ್ತು ಅದನ್ನು ಸಮರ್ಥಿಸುವುದೂ ಇಲ್ಲ ಎಂದು ಕುಮಾರ್ ಸ್ಪಷ್ಟಪಡಿಸಿದರು.