ವಿಶ್ವಕಪ್‌ ಟೂರ್ನಿಯಲ್ಲಿ ತಂಡ ಮುನ್ನಡೆಸುವ ಬಗ್ಗೆ ಒತ್ತಡವಿಲ್ಲ: ಪ್ರಿಯಮ್

ಬೆಂಗಳೂರು, ಡಿ 16 ದಕ್ಷಿಣ ಆಫ್ರಿಕಾದಲ್ಲಿ ನಡಯುವ 19 ವಯೋಮಿಯಿ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರ ಮುನ್ನಡೆಸುವಲ್ಲಿ ಯಾವುದೇ ಒತ್ತಡವಿಲ್ಲ. ಆದರೆ, ತಂಡವನ್ನ ಮುಂಚೂಣಿಗೆ ತೆಗೆದುಕೊಂಡು ಸಾಗುವುದು ಹಾಗೂ ಕ್ಲಿಷ್ಟ ಸನ್ನಿವೇಶದಲ್ಲಿ ತಂಡವನ್ನು ಹೇಗೆ ನಿಬಾಯಿಸಬೇಕು ಎನ್ನುವ ಕಡೆ ಗಮನ ಕೇಂದ್ರಕರಿಸುತ್ತಿದ್ದೇನೆ ಎಂದು 19 ವಯೋಮಿತಿ ಭಾರತ ತಂಡದ ನಾಯಕ ಪ್ರಿಯಮ್‌ ಗರ್ಗ್‌ ತಿಳಿಸಿದ್ದಾರೆ.ಐಸಿಸಿ ಕಿರಿಯರ ವಿಶ್ವಕಪ್‌ ಮುಂದಿನ ವರ್ಷ ಜನವರಿ 17 ರಿಂದ ಫೆಬ್ರುವರಿ 9 ರವರೆಗೆ ನಡೆಯಲಿದೆ. ದಕ್ಷಿಣ ಆಫ್ರಿಕಕ್ಕೆ ತಂಡ ನಿರ್ಗಮಿಸುತ್ತಿದ್ದು, ಇದರ ಸಲುವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಮ್, " ತಂಡವನ್ನು ಮುನ್ನಡೆಸುವುದರಲ್ಲಿ ನನ್ನ ಮೇಲೆ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ." ಅತಿ ದೊಡ್ಡ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುವ ಅವಕಾಶದ ಬಗ್ಗೆ ನೋಡುತ್ತಿದ್ದೇನೆ. ಈಗಾಗಲೇ ಹಲವು ಬಾರಿ ತಂಡವನ್ನು ಮುನ್ನಡೆಸಿದ್ದೇನೆ. ಇದು ನನಗೆ ಲಾಭವಾಗಿದೆ. ಇದರ ಫಲವಾಗಿ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದೇನೆ. ಕ್ಲಿಷ್ಟ ಸಂದರ್ಭಗಳಲ್ಲಿ ತಂಡವನ್ನು ಹೇಗೆ ನಿಬಾಯಿಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಿದ್ದೇನೆ," ಎಂದರು." ವಿರಾಟ್‌ ಕೊಹ್ಲಿ ಸಾರ್ ಹಾಗೂ ಪೃಥ್ವಿಶಾ ಸಾರ್ ಅವರ ಬಳಿ ಮಾತನಾಡಿದ್ದೇನೆ. ಯೋಜನೆ, ಪ್ರಕ್ರಿಯೆ ಹಾಗೂ ತಂಡದ ಸಂಬಂಧ ಅತ್ಯಂತ ಮುಖ್ಯ. ತಂಡದ ಎಲ್ಲಾ ಸದಸ್ಯರು ಒಗ್ಗಟ್ಟಿನ ಭಾವನೆಯಿಂದ ಕೂಡಿದ್ದಾಗ ಯಶ ಸಾಧಿಸಬಹುದು ಎಂದು ಕೊಹ್ಲಿ ಸಾರ್  ಸಲಹೆ ನೀಡಿದ್ದಾರೆ," ಎಂದರು." ತಂಡದ ಸಾಮರ್ಥ್ಯ ಏನೆಂಬುದು ಮೊದಲು ಅರ್ಥ ಮಾಡಿಕೊಳ್ಳಬೇಕು. 2018ರಲ್ಲಿ ಚಾಂಪಿಯನ್ ಆಗಿದ್ದ ತಂಡದಲ್ಲಿದ್ದ ಸಂಬಂಧ ಬಹುಮುಖ್ಯ ಪಾತ್ರ ವಹಿಸಿತ್ತು. ಅತ್ಯತ್ತಮ ಆಟಗಾರನನ್ನು ಮುಖ್ಯ ವೇದಿಕೆಗೆ ತರಬೇಕು ಎಂದು ಪೃಥ್ವಿ ಶಾ ಸಾರ್‌ ಹೇಳಿದ್ದಾರೆ," ಎಂದು ಗರ್ಗ್‌ ತಿಳಿಸಿದ್ದಾರೆ.ಕಿರಿಯರ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲೇ ಹೆಚ್ಚು ಬಾರಿ ಯಶಸ್ಸು ಗಳಿಸಿರುವ ಪ್ರಮುಖ ತಂಡ ಭಾರತ. 2000 ಇಸವಿಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ, 2012ರಲ್ಲಿ ಉನ್ಮುಕ್ತ್‌ ಚಾಂದ್ ಹಾಗೂ ೨೦೧೮ರಲ್ಲಿ ಪೃಥ್ವಿ ಶಾ ಯಶಸ್ವಿಯಾಗಿದ್ದಾರೆ.ಹಾಲಿ ಚಾಂಪಿಯನ್‌ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಜಪಾನ್‌ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜನವರಿ 19 ರಂದು ಶ್ರೀಲಂಕಾ ವಿರುದ್ಧ ಭಾರತ ತನ್ನ ಮೊದಲ ಪಂದ್ಯಾಡಲಿದೆ. ಜ. 21 ಮತ್ತು 24 ರಂದು ಇನ್ನುಳಿದ ಪಂದ್ಯಗಳಲ್ಲಿ ಜಪಾನ್‌ ಹಾಗೂ ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಸೆಣಸಲಿದೆ.ಭಾರತ 19 ವಯೋಮಿತಿ ತಂಡ: ಯಶಸ್ವಿ ಜೈಸ್ವಾಲ್, ತಿಲಕ್‌ ವರ್ಮಾ, ದಿವ್ಯಾಂಶ್ ಸೆಕ್ಸೇನಾ, ಪ್ರಿಯಮ್ ಗರ್ಗ್ (ನಾಯಕ) , ಧೃವ್ ಚಾಂದ್ ಜುರೆಲ್ (ವಿ.ಕೀ), ಶಾಶ್ವತ್ ರಾವತ್, ದಿವ್ಯಾಶ್‌ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ನೋಯಿ, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ಕುಮಾರ್ ಕುಶಾಗ್ರ(ವಿ.ಕೀ), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.