ನಗರದ ಕೆ ಎಚ್ ಪಾಟೀಲ್ ಬಡಾವಣೆಯಲ್ಲಿ ಶ್ರೀಮತಿ ಲಲಿತಾ ಅಸೂಟಿಯವರಿಂದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
Mrs. Lalita Asuti launches road asphalting work in KH Patil Layout of the city
ಲೋಕದರ್ಶನ ವರದಿ
ಗದಗ 15: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಕೆ ಎಚ್ ಪಾಟೀಲ್ ಬಡಾವಣೆ ಹಾಗೂ ವೀರನಾರಾಯಣ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಗದಗ ಬೆಟಗೇರಿ ನಗರಸಭೆಯ ಜನಪ್ರಿಯ ಸದಸ್ಯಣಿಯರಾದ ಲಲಿತಾ ಬಿ ಅಸೂಟಿ ಯವರು ಭೂಮಿ ಪೂಜೆ ನೆರವೇರಿಸುವ ಮೂಲಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ಒಂದು ಅವಿಸ್ಮರಣೀಯ ಅಭಿವೃದ್ಧಿ ಕಾಮಗಾರಿಯ ಉದ್ಘಾಟನಾ ಸಮಾರಂಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯೇಕ್ಷರಾದ ಬಿ ಬಿ ಅಸೂಟಿ, ಕೆ ಎಚ್ ಪಾಟೀಲ್ ಬಡಾವಣೆ ಹಾಗೂ ವೀರನಾರಾಯಣ ಬಡಾವಣೆಯ ಅಧ್ಯಕ್ಷರಾದ ಮಹಾಲಿಂಗಪ್ಪ ಬರಬರಿ, ಹಿರಿಯರಾದ ಹನಮಂತ ಪವಾರ, ಮಂಜುನಾಥ ದೊಡ್ಡಮನಿ, ಶಿವಾನಂದ ಹೊಸ ಅಂಗಡಿ, ಕಲ್ಮೇಶ ಆಲದಕಟ್ಟಿ, ಮಲ್ಲಪ್ಪ ಮೂಲಿಮನಿ, ಶಿವಪ್ಪ ಮೂಲಿಮನಿ, ಮೆಹಬೂಬ್ ಬಳಿಗಾರ್, ಎಸ್ ಎ ಮತ್ತೂರ್, ಬಸಪ್ಪ ಹಳ್ಳಿಗುಡಿ, ಹಾಗೂ ಸಮಸ್ತ ಬಡಾವಣೆಯ ಗುರುಹಿರಿಯರು ಉಪಸ್ಥಿತರಿದ್ದರು.
.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 